ಚೆನ್ನೈ: ಏಕದಿನ ಸರಣಿಯಲ್ಲಿ 2-1 ರಲ್ಲಿ ಗೆಲುವು ಸಾಧಿಸಿರುವ ಭಾರತ ತಂಡ ಭಾನುವಾರ ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವಾಡಲಿದೆ.
ವಿಶ್ವಕಪ್ ಬಳಿಕ ವಿಂಡೀಸ್ ತವರಿನಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿ ಆಡಿದ್ದ ಭಾರತ ತಂಡ ಇದೀಗ 4 ತಿಂಗಳ ಬಳಿಕ ಮತ್ತೆ ವೆಸ್ಟ್ ಇಂಡೀಸ್ ವಿರುದ್ಧವೇ ಏಕದಿನ ಪಂದ್ಯವಾಡಲಿದೆ.
ಟಿ20 ಸರಣಿಯಲ್ಲಿ ಈಗಾಗಲೆ 2-1 ರಲ್ಲಿ ಸರಣಿ ಗೆದ್ದಿರುವ ಖುಷಿಯಲ್ಲಿರುವ ಭಾರತ ತಂಡ ಏಕದಿನ ಸರಣಿಯನ್ನು ಗೆಲ್ಲುವ ಆಲೋಚನೆಯಲ್ಲಿದೆ.
ಭಾರತ ತಂಡದಲ್ಲಿ ಗಾಯಕ್ಕೊಳಕ್ಕಾಗಿರುವ ಹಿರಿಯ ಆಟಗಾರರಾದ ಶಿಖರ್ ಧವನ್ ಹಾಗೂ ಭುವನೇಶ್ವರ್ ಅನುಪಸ್ಥಿತಿಯಲ್ಲಿ ಕೊಹ್ಲಿ ಹಾಗೂ ತಂಡ ಕಣಕ್ಕಿಳಿಯಬೇಕಿದೆ. ಧವನ್ ಜಾಗಕ್ಕೆ ಮಯಾಂಕ್ ಅಗರ್ವಾಲ್ ಬಂದಿದ್ದರೂ ರೋಹಿತ್ ಹೊತೆ ಇನ್ನಿಂಗ್ಸ್ ಆರಂಭಿಸುವುದರಲ್ಲಿ ಕೆ.ಎಲ್. ರಾಹುಲ್ ಎಂಬುದು ಬಹುತೇಕ ಪಕ್ಕ ಆಗಿದೆ. ಇನ್ನು ಭುವಿ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ನೇತೃತ್ವವಹಿಸಿಲಿದ್ದಾರೆ.
ಇನ್ನು ಬಹಳ ದಿನಗಳಿಂದ ಹೊರಗುಳಿದಿದ್ದ ಕುಲ್ದೀಪ್ ಯಾದವ್ ಮತ್ತೆ ಯಜುವೇಂದ್ರ ಚಹಲ್ ಜೊತೆಗೂಡಿ ಚೆಪಾಕ್ನಲ್ಲಿ ಸ್ಪಿನ್ ಮೋಡಿ ಮಾಡುವುದು ಬಹುತೇಕ ಖಚಿತವಾಗಿದೆ. ಟಿ20 ಯಲ್ಲಿ ಸ್ಟಾರ್ ಬೌಲರ್ ಆಗಿರುವ ದೀಪಕ್ ಚಹಾರ್ಗೆ ನಾಳಿನ ಪಂದ್ಯ ಏಕದಿನ ಸರಣಿಯಲ್ಲಿ ಭದ್ರವಾಗಿ ನೆಲೆಯೂರಲು ಉತ್ತಮ ಅವಕಾಶವಾಗಿದೆ. ಮಧ್ಯಮ ಕ್ರಮಾಂದಲ್ಲಿ ಕೇದಾರ್ ಜಾದವ್ ಮತ್ತೆ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ ಮಧ್ಯಮ ಕ್ರಮಾಂಕದಲ್ಲಿ ಯಾರು ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.
ಇನ್ನು ಟಿ20 ಸರಣಿಯಲ್ಲಿ ಸೋಲುಕಂಡಿರುವ ವಿಂಡೀಸ್ ಕೂಡ ಏಕದಿನ ಸರಣಿಯಲ್ಲಿ ತಿರುಗಿ ಬೀಳಲು ಕಾತುರದಿಂದ ಕಾಯುತ್ತಿದ್ದು ಶಾಯ್ ಹೋಪ್, ಆಂಬ್ರಿಸ್ ರಾಸ್ಟನ್ ಚೇಸ್ ಏಕದಿನ ತಂಡಕ್ಕೆ ಮರಳಲಿದ್ದಾರೆ.
ಭಾರತ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉ.ನಾ), ಮಯಾಂಕ್ ಅಗರ್ವಾಲ್,ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ಕೆದಾರ್ ಜಾದವ್,ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್, ಕುಲ್ದೀಪ್ ಚಹಲ್, ದೀಪಕ್ ಚಹಾರ್, ಮೊಹಮ್ಮದ್ ಶಮಿ, ಶಾರ್ದುಲ್ ಠಾಕೂರ್
ವೆಸ್ಟ್ ಇಂಡೀಸ್
ಶಾಯ್ ಹೋಪ್, ಸುನಿಲ್ ಆ್ಯಂಬ್ರಿಸ್, ಶಿಮ್ರಾನ್ ಹೆಟ್ಮಯರ್,ರಾಸ್ಟನ್ ಚೇಸ್, ನಿಕೋಲಸ್ ಪೂರನ್, ಬ್ರೆಂಡನ್ ಕಿಂಗ್, ಕೀರನ್ ಪೊಲಾರ್ಡ್(ನಾಯಕ), ಜೇಸನ್ ಹೋಲ್ಡರ್, ಖಾರಿ ಪೀರ್, ಹೇಡನ್ ವಾಲ್ಶ್, ಶೆಲ್ಡನ್ ಕಾಟ್ರೆಲ್, ಕೆಸ್ರಿಕ್ ವಿಲಿಯಮ್ಸ್, ಅಲ್ಜಾರಿ ಜೋಸೆಪ್, ಎವಿನ್ ಲೆವಿಸ್, ಕೀಮೋ ಪಾಲ್, ರೊಮಾರಿಯೋ ಶೇಫೆರ್ಡ್