ಹೈದರಾಬಾದ್: ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಆಗಸ್ಟ್ 22ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಮಹತ್ವ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಸದ್ಯ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಫಾರ್ಮ್ನಲ್ಲಿರುವ ಜಡೇಜಾ, ವಿಂಡೀಸ್ ನಾಡಿನಲ್ಲಿ ವಿಕೆಟ್ ಲೆಕ್ಕಾಚಾರದಲ್ಲಿ ದ್ವಿಶತಕ ಬಾರಿಸಲು ಸಿದ್ಧತೆ ನಡೆಸಿದ್ದಾರೆ.
ಪ್ರಸ್ತುತ ಟೆಸ್ಟ್ ಮಾದರಿ 192 ವಿಕೆಟ್ ಕಬಳಿಸಿರುವ ರವೀಂದ್ರ ಜಡೇಜಾ ಇನ್ನು ಎಂಟು ವಿಕೆಟ್ ಕಿತ್ತರೆ ಈ ಮಾದರಿ 200 ವಿಕೆಟ್ ಪಡೆದ ಹತ್ತನೇ ಭಾರತೀಯ ಬೌಲರ್ ಎನ್ನುವ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ.
ವೇಗವಾಗಿ 200 ವಿಕೆಟ್ ಕಿತ್ತ ಆರ್.ಅಶ್ವಿನ್ ನಂತರದ ಸ್ಥಾನದಲ್ಲಿ ರವೀಂದ್ರ ಜಡೇಜಾ ಕಾಣಿಸಿಕೊಳ್ಳಲಿದ್ದಾರೆ. ಆರ್.ಅಶ್ವಿನ್ 37 ಪಂದ್ಯಗಳಲ್ಲಿ 200ರ ಗಟಿ ಮುಟ್ಟಿದ್ದರು. ರವೀಂದ್ರ ಜಡೇಜಾ ಈಗಾಗಲೇ 41 ಟೆಸ್ಟ್ ಪಂದ್ಯಗಳನ್ನಾಡಿದ್ದು, ವಿಂಡೀಸ್ ನೆಲದಲ್ಲೇ 200 ಗಡಿ ದಾಟುವ ಸಾಧ್ಯತೆ ನಿಚ್ಚಳವಾಗಿದೆ.