ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಆಸರೆಯಾಗಿದ್ದು, ಭಾರತ ತಂಡ ಸುಸ್ಥಿತಿಯಲ್ಲಿದೆ.
-
Stumps at Kingston!
— ICC (@ICC) August 30, 2019 " class="align-text-top noRightClick twitterSection" data="
India finish 264/5.
Advantage India?https://t.co/JvbpWtNBD5
">Stumps at Kingston!
— ICC (@ICC) August 30, 2019
India finish 264/5.
Advantage India?https://t.co/JvbpWtNBD5Stumps at Kingston!
— ICC (@ICC) August 30, 2019
India finish 264/5.
Advantage India?https://t.co/JvbpWtNBD5
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯಿತು. ಕೇವಲ 13 ರನ್ ಗಳಿಸಿದ ಕೆ.ಎಲ್.ರಾಹುಲ್ ಹೋಲ್ಡರ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ರು. ಪುಜಾರ ಕೂಡ ಬಂದಷ್ಟೆ ವೇಗವಾಗಿ ನಿರ್ಗಮಿಸಿದ್ರು. ಒಂದು ಹಂತದಲ್ಲಿ 42 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್ ಆಸರೆಯಾದ್ರು.
-
Half century for the Indian Captain. Looking calm and composed at the moment 👍👍 #TeamIndia #WIvIND pic.twitter.com/2sXl9YPZN9
— BCCI (@BCCI) August 30, 2019 " class="align-text-top noRightClick twitterSection" data="
">Half century for the Indian Captain. Looking calm and composed at the moment 👍👍 #TeamIndia #WIvIND pic.twitter.com/2sXl9YPZN9
— BCCI (@BCCI) August 30, 2019Half century for the Indian Captain. Looking calm and composed at the moment 👍👍 #TeamIndia #WIvIND pic.twitter.com/2sXl9YPZN9
— BCCI (@BCCI) August 30, 2019
ಎಚ್ಚರಿಕೆಯ ಆಟವಾಡಿದ ಮಯಾಂಕ್ ಟೆಸ್ಟ್ ಕ್ರಿಕೆಟ್ನಲ್ಲಿ 3ನೇ ಅರ್ಧಶತಕ ಗಳಿಸಿ ಹೊಲ್ಡರ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ರು. ವಿಂಡೀಸ್ ಬೌಲರ್ಗಳ ಬೆವರಿಳಿಸಿದ ನಾಯಕ ವಿರಾಟ್, ಟೆಸ್ಟ್ ಕ್ರಿಕೆಟ್ನಲ್ಲಿ 22ನೇ ಅರ್ಧಶತಕ ದಾಖಲಿಸಿದ್ರು. 76 ರನ್ ಗಳಿಸಿ ಉತ್ತಮವಾಗಿ ಆಡುತಿದ್ದ ವಿರಾಟ್ ಜಾಸನ್ ಹೋಲ್ಡರ್ಗೆ ಬಲಿಯಾದ್ರು.
ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಹನುಮ ವಿಹಾರಿ 42 ಮತ್ತು ರಿಷಭ್ ಪಂತ್ 27 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 90 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 264 ರನ್ ಗಳಿಸಿದೆ.