ETV Bharat / sports

ಇಂಡಿಯಾ-ವೆಸ್ಟ್​ ಇಂಡೀಸ್​ ಮೊದಲ ಟೆಸ್ಟ್: ಇಶಾಂತ್​ ಶರ್ಮಾ ದಾಳಿಗೆ ವಿಂಡೀಸ್​ ತತ್ತರ - ವೆಸ್ಟ್ ಇಂಡೀಸ್ vs ಭಾರತ

ಇಶಾಂತ್​ ಶರ್ಮಾ ದಾಳಿಗೆ ತತ್ತರಿಸಿದ ವಿಂಡೀಸ್​ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 96.4 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 189 ರನ್​ ಗಳಿಸಿದೆ.

ಇಶಾಂತ್​ ಶರ್ಮಾ ದಾಳಿಗೆ ವಿಂಡಿಸ್​ ತತ್ತರ
author img

By

Published : Aug 24, 2019, 4:42 AM IST

ಆ್ಯಂಟಿಗುವಾ: ಆತಿಥೇಯ ವೆಸ್ಟ್​​ ಇಂಡೀಸ್​​​ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಇಶಾಂತ್​ ಶರ್ಮಾ ದಾಳಿಗೆ ವಿಂಡೀಸ್​ ತಂಡ ತತ್ತರಿಸಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ 96.4 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 189 ರನ್​ ಗಳಿಸಿದೆ.

ಮೊದಲನೆ ಇನ್ನಿಂಗ್ಸ್​ ಆರಂಭಿಸಿದ ವೆಸ್ಟ್​ ಇಂಡೀಸ್​ ತಂಡಕ್ಕೆ ವೇಗಿ ಇಶಾಂತ್​ ಶರ್ಮಾ ಮತ್ತು ಮಹಮ್ಮದ್ ಶಮಿ ಆಘಾತ ನೀಡಿದ್ರು. ಕರಾರುವಕ್ಕು ಬೌಲಿಂಗ್ ದಾಳಿ ನಡೆಸಿದ ಇಶಾಂತ್​ ಶರ್ಮಾ ಪ್ರಮುಖ 5 ವಿಕೆಟ್​ ಕಿತ್ತು ವಿಂಡೀಸ್ ರನ್​ ವೇಗಕ್ಕೆ ಕಡಿವಾಣ ಹಾಕಿದ್ರು.

ವಿಂಡೀಸ್​ ಪರ ರೋಸ್ಟನ್ ಚೇಸ್ 48, ಶಿಮ್ರಾನ್ ಹೇಟ್ಮಯರ್ 35 ರನ್​ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಟಗಾರರು ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. 10 ರನ್ ಗಳಿಸಿರುವ ನಾಯಕರ ಜಾಸನ್ ಹೋಲ್ಡರ್ ಮತ್ತು ಮಿಗುಯೆಲ್ ಕಮ್ಮಿನ್ಸ್ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ತಂಡದ ಪರ ಇಶಾಂತ್ ಶರ್ಮಾ 5 ವಿಕೆಟ್, ಮೊಹಮ್ಮದ್ ಶಮಿ 1, ಜಸ್ಪ್ರಿತ್ ಬೂಮ್ರಾ 1, ರವೀಂದ್ರ ಜಡೇಜಾ 1 ವಿಕೆಟ್ ಪಡೆದುಕೊಂಡರು.

ಅಜಿಂಕ್ಯ ರಹಾನೆ(81) ಹಾಗೂ ಆಲ್​ರೌಂಡರ್​​ ರವಿಂದ್ರ ಜಡೇಜಾ(58)ರನ್ ​ಗಳ ನೆರವಿನಿಂದ ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ ತಂಡ 96.4 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 297ರನ್ ​ಗಳಿಸಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.