ರಾಂಚಿ: ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ 5 ಸಾವಿರ ಟಿಕೆಟ್ಗಳನ್ನ ಉಚಿತವಾಗಿ ನೀಡಲಾಗಿದೆ.
ಭಾರತೀಯ ಸೈನಿಕರಿಗೆ ಗೌರವ ನೀಡುವ ಸಲುವಾಗಿ ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಇಂತಹದ್ದೊಂದು ಕಾರ್ಯಕ್ಕೆ ಮುಂದಾಗಿದೆ. 5000 ಟಿಕೆಟ್‌ಗಳನ್ನು ಪ್ಯಾರಾ ಮಿಲಿಟರಿ ಪಡೆ, ಭಾರತೀಯ ಸೇನೆ, ಸ್ಥಳೀಯ ಪೊಲೀಸರಿಗೆ ವಿತರಿಸಲಾಗಿದೆ ಎಂದು ಜೆಎಸ್‌ಸಿಎ ಕಾರ್ಯದರ್ಶಿ ಸಂಜಯ್ ಸಹಾಯ್ ತಿಳಿಸಿದ್ದಾರೆ.
-
A warm welcome from the JSCA Stadium, Ranchi ☀️☀️ pic.twitter.com/41J2mHKXvR
— BCCI (@BCCI) October 17, 2019 " class="align-text-top noRightClick twitterSection" data="
">A warm welcome from the JSCA Stadium, Ranchi ☀️☀️ pic.twitter.com/41J2mHKXvR
— BCCI (@BCCI) October 17, 2019A warm welcome from the JSCA Stadium, Ranchi ☀️☀️ pic.twitter.com/41J2mHKXvR
— BCCI (@BCCI) October 17, 2019
ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳ ಶಾಲಾ ಮಕ್ಕಳಿಗೆ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ರಾಂಚಿ ಮೈದಾನದಲ್ಲಿ ನಡೆಯುತ್ತಿರುವ 2ನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಇದಾಗಿದೆ.
ಒಟ್ಟು 39,000 ಜನ ಕುಳಿತುಕೊಂಡು ಕ್ರಿಕೆಟ್ ವೀಕ್ಷಣೆ ಮಾಡಬಹುದಾದ ಮೈದಾನ ಇದಾಗಿದ್ದು, ಅಂತಿಮ ಟೆಸ್ಟ್ ಪಂದ್ಯ ವೀಕ್ಷಣೆಗೆ ಕೇವಲ 1500 ಮಂದಿ ಮಾತ್ರ ಟಿಕೆಟ್ ಖರೀದಿ ಮಾಡಿದ್ದಾರೆ ಎನ್ನುವುದು ಇನ್ನೊಂದು ವಿಶೇಷ