ETV Bharat / sports

ಭಾರತ vs ಇಂಗ್ಲೆಂಡ್​: ಟಿ 20 ಸರಣಿಯಲ್ಲಿ ಆಡಲಿದ್ದಾರೆ ಧವನ್​

author img

By

Published : Feb 22, 2021, 10:35 AM IST

ಭಾರತದ ಓಪನರ್ ಶಿಖರ್ ಧವನ್ ಇಂಗ್ಲೆಂಡ್ ವಿರುದ್ಧ ನಡೆಯಲಿರೋ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಆಡಲಿದ್ದಾರೆ.

India vs England
ಧವನ್​

ನವದೆಹಲಿ: ಭಾರತದ ಓಪನರ್ ಶಿಖರ್ ಧವನ್ ಇಂಗ್ಲೆಂಡ್ ವಿರುದ್ಧ ನಡೆಯಲಿರೋ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಆಡಲಿದ್ದಾರೆ. ಮಾರ್ಚ್ 1 ರಂದು ಅಹಮದಾಬಾದ್​ನಲ್ಲಿ ರಿಪೋರ್ಟ್​ ಮಾಡಿಕೊಳ್ಳುವಂತೆ ಧವನ್​ಗೆ ಸೂಚಿಸಲಾಗಿದೆ.

ಟಿ20 ಸರಣಿಯು ಮಾರ್ಚ್ 12 ಮತ್ತು 20 ರ ನಡುವೆ ಅಹಮದಾಬಾದ್‌ನಲ್ಲಿ ನಡೆಯಲಿದೆ. ನಂತರ ಏಕದಿನ ಸರಣಿಯ ಮೂರು ಪಂದ್ಯಗಳು ಪುಣೆಯಲ್ಲಿ ಮಾರ್ಚ್ 23 ರಿಂದ 28ರವರೆಗೆ ನಡೆಯಲಿವೆ. ಧವನ್ ಮಾತ್ರವಲ್ಲದೆ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ರಾಹುಲ್ ತಿವಾಟಿಯಾ ಕೂಡ 50 ಓವರ್​ಗಳ ಈ ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಮಾರ್ಚ್ 12 ರಿಂದ ಅಹಮದಾಬಾದ್‌ನಲ್ಲಿ ಆರಂಭವಾಗಲಿರುವ ಟಿ20 ಸರಣಿ ಮ್ಯಾಚ್​ಗೆ ಬಿಸಿಸಿಐ 19 ಆಟಗಾರರ ತಂಡವನ್ನು ಹೆಸರಿಸಿತ್ತು. ಇನ್ನು ಪಂದ್ಯಗಳ ವೇಳೆ ಕೋವಿಡ್​-19 ಮಾರ್ಗಸೂಚಿಗಳು ಜಾರಿಯಲ್ಲಿರಲಿವೆ ಎಂದು ಡಿಡಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ನಡೆದಿರುವ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್​ ತಲಾ ಒಂದೊಂದು ಮ್ಯಾಚ್​ ಗೆದ್ದಿವೆ. ಮೂರನೇ ಟೆಸ್ಟ್ ಬುಧವಾರ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.