ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಇದರ ಮಧ್ಯೆ ಕೂಡ ಶ್ರೇಯಸ್ ಅಯ್ಯರ್ ಮಿಂಚು ಹರಿಸಿದ್ದರಿಂದ ಕೊಹ್ಲಿ ಪಡೆ 124 ರನ್ಗಳಿಕೆ ಮಾಡಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್(4), ಕೆ.ಎಲ್ ರಾಹುಲ್ (1) ಹಾಗೂ ವಿರಾಟ್ ಕೊಹ್ಲಿ (0)ರನ್ಗಳಿಕೆ ಮಾಡಿ ನಿರಾಸೆ ಮೂಡಿಸಿದರು. 5 ಓವರ್ ಮುಕ್ತಾಯಗೊಳ್ಳುವಷ್ಟರಲ್ಲಿ ಟೀಂ ಇಂಡಿಯಾ ಆರಂಭಿಕ ಮೂರು ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು.
ಇದಾದ ಬಳಿಕ ಒಂದಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಆಸರೆಯಾದರು. ರಿಷತ್ ಪಂತ್(21) ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಹಾರ್ದಿಕ್ ಪಾಂಡ್ಯ ಕೂಡ 19ರನ್ಗಳಿಕೆ ಮಾಡಿ ಔಟಾದರು. ಶಾರ್ದೂಲ್ ಠಾಕೂರ್ ಕೂಡ(0)ನಿರಾಸೆ ಮೂಡಿಸಿದರು. ಇದರ ಮಧ್ಯೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ 67ರನ್ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 124ರನ್ಗಳಿಕೆ ಮಾಡಿದ್ದು, ಆಂಗ್ಲರ ಪಡೆಗೆ 125ರನ್ ಟಾರ್ಗೆಟ್ ನೀಡಿದೆ. ಟೀಂ ಇಂಡಿಯಾ ಪರ ಅಯ್ಯರ್ 67ರನ್, ರಿಷಭ್ ಪಂತ್ 21, ಹಾರ್ದಿಕ್ ಪಾಂಡ್ಯ 19ರನ್ಗಳಿಸಿರುವುದು ಗರಿಷ್ಠ ಸ್ಕೋರ್ ಆಗಿದೆ.
ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ಜೋಪ್ರಾ ಆರ್ಚರ್ 3 ವಿಕೆಟ್ ಪಡೆದುಕೊಂಡರೆ, ಬೆನ್ ಸ್ಟೋಕ್ಸ್, ಆದಿಲ್ ರಾಶೀದ್, ಮಾರ್ಕ್ ವುಡ್ ತಲಾ ಹಾಗೂ ಜೋರ್ಡನ್ 1ವಿಕೆಟ್ ಪಡೆದುಕೊಂಡರು.