ಮುಂಬೈ: ಬಾಂಗ್ಲಾದೇಶ ಕ್ರಿಕೆಟ್ ಶಿಶು ಎಂಬ ಹಣೆಪಟ್ಟಿಯನ್ನು ತೆಗೆದುಹಾಕಿ ಸುಮಾರು ವರ್ಷಗಳೇ ಕಳೆದಿವೆ. ಕಳೆದ ಕೆಲವು ವರ್ಷಗಳಿಂದ ವೆಸ್ಟ್ ಇಂಡೀಸ್, ಶ್ರೀಲಂಕಾ ತಂಡಗಳನ್ನು ಮೀರಿ ಬೆಳೆದಿರುವ ಬಾಂಗ್ಲಾದೇಶ ತಂಡ ಟೀಂ ಇಂಡಿಯಾಕ್ಕೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದಿದೆ. ಅಂಕಿ ಅಂಶಗಳ ಪ್ರಕಾರ ಬಾಂಗ್ಲಾದೇಶ ಮತ್ತು ಭಾರತ 8 ಟಿ20 ಪಂದ್ಯಗಳಲ್ಲಿ ಎದುರಾಗಿದ್ದು, ಈ ಎಲ್ಲ ಪಂದ್ಯಗಳಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ.
2016 ಏಷ್ಯಾಕಪ್ ಫೈನಲ್:
2016 ರ ವಿಶ್ವಕಪ್ಗೂ ಮುನ್ನ ನಡೆದಿದ್ದ ಏಷ್ಯಾ ಕಪ್ನಲ್ಲೂ ಟಿ20 ಮಾದರಿಯಲ್ಲೇ ಆಡಿಸಲಾಗಿತ್ತು. ಟೂರ್ನಿಯ ಫೈನಲ್ ಪಂದ್ಯವನ್ನು ಮಳೆಯ ಕಾರಣ 15 ಓವರ್ಗಳ ಪಂದ್ಯ ಆಯೋಜನೆಯಾಗಿತ್ತು. ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ನಡೆಸಿ 120 ರನ್ ಗಳಿಸಿತ್ತು.
121 ರನ್ಗಳ ಟಾರ್ಗೆಟ್ ಪಡೆದಿದ್ದ ಭಾರತಕ್ಕೆ 12 ಬಾಲ್ಗಳಲ್ಲಿ 19 ರನ್ಗಳ ಅವಶ್ಯಕತೆಯಿತ್ತು. ಆಗತಾನೆ ಬ್ಯಾಟಿಂಗ್ ನಡೆಸಲು ಬಂದಿದ್ದ ಧೋನಿ 2 ಓವರ್ಗಳಲ್ಲಿ ಕೇವಲ10 ರನ್ ನೀಡಿದ್ದ ಆಲ್ ಅಮೀನ್ ಹುಸೇನ್ಗೆ 2 ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿ ಬಾಂಗ್ಲಾ ಕೈಯಿಂದ ಗೆಲುವನ್ನು ಕಸಿದುಕೊಂಡಿದ್ದರು. ಭಾರತ ಈ ಪಂದ್ಯವನ್ನು ಇನ್ನು 7 ಎಸೆತ ಇರುವಂತೆಯೇ ಗೆದ್ದುಕೊಂಡಿತ್ತು.
2016 ವಿಶ್ವಕಪ್ :
2016ರ ವಿಶ್ವಕಪ್ನಲ್ಲಿ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ಕೊನೆಯ ಓವರ್ನಲ್ಲಿ ಗೆಲ್ಲಲು 11 ರನ್ಗಳ ಅವಶ್ಯಕತೆಯಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತದಲ್ಲಿ ಮೊಹಮ್ಮದುಲ್ಲಾ, ಸಿಂಗಲ್ ತೆಗೆದುಕೊಂಡರು. ನಂತರದ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದ್ದ ರಹೀಮ್ ಪಂದ್ಯವನ್ನು ಗೆದ್ದೇ ಬಿಟ್ಟೆವು ಎಂಬ ಸಂತೋಷದಲ್ಲಿ ಸಂಭ್ರಮಿಸಿದ್ದರು.
3 ಎಸೆತಗಳಲ್ಲಿ 2 ರನ್ ಬೇಕಿದ್ದಾಗ ಧವನ್ಗೆ ಕ್ಯಾಚ್ ನೀಡಿ ಔಟಾಗಿದ್ದರು. ನಂತರದ ಎಸೆತದಲ್ಲಿ ಮೊಹಮ್ಮದುಲ್ಲಾ ಜಡೇಜಾಗೆ ಕ್ಯಾಚ್ ನೀಡಿ ಔಟಾಗಿದ್ದರು. ಕೊನೆಯ ಎಸೆತದಲ್ಲಿ 2 ರನ್ ಅಗತ್ಯವಿತ್ತು. ಆಗ ಶಿವಗತ ಹೋಮ್ ಕೊನೆಯ ಎಸೆತವನ್ನು ಬೀಟ್ ಮಾಡಿದ್ದರು. ಧೋನಿ ವೇಗವಾಗಿ ಓಡಿ ರನ್ಔಟ್ ಮಾಡುವಲ್ಲಿ ಯಶಸ್ವಿಯಾದರು. ಈ ಪಂದ್ಯವನ್ನು ಭಾರತ ಒಂದು ರನ್ನಿಂದ ಗೆದ್ದು ಬೀಗಿತ್ತು.
ನಿಡಾಹಸ್ ಟ್ರೋಫಿ ಫೈನಲ್:
ಇನ್ನು, ಭಾರತ ಬಾಂಗ್ಲಾ ಮತ್ತು ಶ್ರೀಲಂಕಾ ನಡುವೆ ನಡೆದ ನಿಡಹಾಸನ ತ್ರಿಕೋನ ಟಿ-20 ಸರಣಿಯಲ್ಲಿ ಭಾರತ ಮತ್ತು ಬಾಂಗ್ಲಾ ದೇಶ ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಿದ್ದವು. ಟೀಂ ಇಂಡಿಯಾದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರ ಸ್ಫೋಟಕ ಆಟದ ಫಲವಾಗಿ ಭಾರತ, ಬಾಂಗ್ಲಾ ವಿರುದ್ಧ ಗೆದ್ದು ಬೀಗಿತ್ತು.
ಬಾಂಗ್ಲಾ ನೀಡಿದ್ದ 167 ರನ್ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಉತ್ತಮ ಪ್ರದರ್ಶನ ತೋರಿದ್ದ ಬಾಂಗ್ಲಾ ಬೌಲರ್ಸ್ ಭಾರತೀಯ ಆಟಗಾರರ ವೇಗಕ್ಕೆ ಕಡಿವಾಣ ಹಾಕಿದ್ರು. ಕೊನೇ 2 ಓವರ್ಗಳಲ್ಲಿ ಭಾರತಕ್ಕೆ 34 ರನ್ ಬೇಕಿತ್ತು. ಆಗತಾನೆ ಬ್ಯಾಟಿಂಗ್ ನಡೆಸಲು ಮೈದಾನಕ್ಕಿಳಿದಿದ್ದ ದಿನೇಶ್ ಕಾರ್ತಿಕ್ ಮೊದಲ ಬಾಲ್ನಲ್ಲೇ ಸಿಕ್ಸರ್ ಸಿಡಿಸಿದ್ರು. 19 ನೇ ಓವರ್ನಲ್ಲಿ 6 ಚೆಂಡುಗಳನ್ನ ಎದುರಿಸಿದ್ದ ಕಾರ್ತಿಕ್, 2 ಸಿಕ್ಸರ್ 2 ಬೌಡರಿ ಸಹಿತ 22 ರನ್ ಸಿಡಿಸಿ ಟೀಂ ಇಂಡಿಯಾ ಪಾಳೆಯದಲ್ಲಿ ಗೆಲುವಿನ ಆಸೆ ಜೀವಂತವಾಗಿರಿಸಿದ್ರು.
ಅಂತಿಮ ಓವರ್ನ ಕೊನೆಯ ಎಸೆತದಲ್ಲಿ ಗೆಲುವಿಗೆ 5 ರನ್ ಬೇಕಿತ್ತು. ಈ ವೇಳೆ ಕ್ರೀಸ್ನಲ್ಲಿದ್ದ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿ ಟೀಂ ಇಂಡಿಯಾಗೆ ನಿಡಾಹಸ್ ಟ್ರೋಫಿ ಗೆಲ್ಲಿಸಿಕೊಟ್ಟರು.