ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಪಂದ್ಯದ ನಡುವೆ ಕರ್ನಾಟಕದ ಅಭಿಮಾನಿಗಳು ಕನ್ನಡ ಬಾವುಟವನ್ನು ಹಾರಿಸಿರುವ ಫೋಟೋಗಳು ವೈರಲ್ ಆಗಿವೆ.
-
ಅದ್ಬುತ...
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) December 27, 2020 " class="align-text-top noRightClick twitterSection" data="
ಜೈ ಕನ್ನಡಿಗ..
ಇಂದು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ಟೆಸ್ಟ್ ಪಂದ್ಯದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಂಡು ಬಂದ ಕನ್ನಡ ಧ್ವಜಗಳು.
ಕನ್ನಡ ಪ್ರೇಮಿಗಳು ಎಲ್ಲಿದ್ರು ಕನ್ನಡತನ ಬಿಟ್ಟು ಬದುಕೊದಿಲ್ಲಾ ...
ಈ ಹೆಮ್ಮೆಯ ಕನ್ನಡಿಗರಿಗೆ ಧನ್ಯವಾದಗಳು..
ಜೈ ಕನ್ನಡಿಗ.. pic.twitter.com/NCKDHYTJ4l
">ಅದ್ಬುತ...
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) December 27, 2020
ಜೈ ಕನ್ನಡಿಗ..
ಇಂದು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ಟೆಸ್ಟ್ ಪಂದ್ಯದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಂಡು ಬಂದ ಕನ್ನಡ ಧ್ವಜಗಳು.
ಕನ್ನಡ ಪ್ರೇಮಿಗಳು ಎಲ್ಲಿದ್ರು ಕನ್ನಡತನ ಬಿಟ್ಟು ಬದುಕೊದಿಲ್ಲಾ ...
ಈ ಹೆಮ್ಮೆಯ ಕನ್ನಡಿಗರಿಗೆ ಧನ್ಯವಾದಗಳು..
ಜೈ ಕನ್ನಡಿಗ.. pic.twitter.com/NCKDHYTJ4lಅದ್ಬುತ...
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) December 27, 2020
ಜೈ ಕನ್ನಡಿಗ..
ಇಂದು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ಟೆಸ್ಟ್ ಪಂದ್ಯದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಂಡು ಬಂದ ಕನ್ನಡ ಧ್ವಜಗಳು.
ಕನ್ನಡ ಪ್ರೇಮಿಗಳು ಎಲ್ಲಿದ್ರು ಕನ್ನಡತನ ಬಿಟ್ಟು ಬದುಕೊದಿಲ್ಲಾ ...
ಈ ಹೆಮ್ಮೆಯ ಕನ್ನಡಿಗರಿಗೆ ಧನ್ಯವಾದಗಳು..
ಜೈ ಕನ್ನಡಿಗ.. pic.twitter.com/NCKDHYTJ4l
ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಎಂದರೆ ಹಬ್ಬದ ಸಂಭ್ರಮವಿರುತ್ತದೆ. ಕ್ರಿಸ್ಮಸ್ ನಂತರ ಈ ಟೆಸ್ಟ್ ಪಂದ್ಯ ನಡಯುತ್ತಿದ್ದು, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಭಾರಿ ಸಂಖ್ಯೆಯ ವೀಕ್ಷಕರಿದ್ದಾರೆ.
ಕೋವಿಡ್ ಸೋಂಕಿನ ಭೀತಿಯಿರುವುದರಿಂದ ಈ ಬಾರಿ ಸ್ಟೇಡಿಯಂನಲ್ಲಿ ಸೀಮಿತ ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ವಿಶ್ವಪ್ರಸಿದ್ಧ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಸುಮಾರು 30 ಸಾವಿರ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಭಾರತೀಯರು ಕೂಡ ಈ ಪಂದ್ಯದ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವರ್ಷದ ಕೊನೆಯ ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ವಿಶೇಷವೆಂದರೆ, 2ನೇ ದಿನ ಮೆಲ್ಬೋರ್ನ್ನಲ್ಲಿ ಕನ್ನಡಿಗರು ಪಂದ್ಯದ ವೀಕ್ಷಣೆಗೆ ಬಂದಿದ್ದು, ಪಂದ್ಯದ ನಡುವೆ ಕನ್ನಡ ಬಾವುಟ ಹಾರಾಟ ಮಾಡಿ ಕನ್ನಡ ಪ್ರೇಮ ಮೆರೆದಿದ್ದಾರೆ. ಈ ಮೂಲಕ ತಾವು ಎಲ್ಲಿದ್ದರೂ ಕನ್ನಡತನವನ್ನು ಮಾತ್ರ ಬಿಡೋದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದೇ ವೇಳೆ, ಅಭಿಮಾನಿಗಳು 'ಕಾವೇರಿನೂ ನಮ್ದೆ, ಕಪ್ ನಮ್ದೆ, ಕಾಶ್ಮೀರನೂ ನಮ್ಮದೆ' ಎಂಬ ನಾಮಫಲಕಗಳನ್ನು ಹಿಡಿದು ಪಂದ್ಯದ ವೇಳೆ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ವಿದೇಶದಲ್ಲಿರುವ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ.