ETV Bharat / sports

ಚೊಚ್ಚಲ ಅರ್ಧಶತಕ ಸಿಡಿಸಿದ ಗಿಲ್: ಆಸೀಸ್​ 338, ದಿನಾಂತ್ಯಕ್ಕೆ ಭಾರತ 96/2 - ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಆಸೀಸ್ ವಿರುದ್ಧ ಕೊಂಚ ಮೇಲುಗೈ ಸಾಧಿಸಿದ್ದಾರೆ.

India vs Australia 3rd Test
ಚೊಚ್ಚಲ ಅರ್ಧಶತಕ ಸಿಡಿಸಿದ ಗಿಲ್
author img

By

Published : Jan 8, 2021, 1:25 PM IST

ಸಿಡ್ನಿ: ಯುವ ಆರಂಭಿಕ ಆಟಗಾರ ಶುಬ್ಮನ್​ ಗಿಲ್ ಅವರ ಚೊಚ್ಚಲ ಅರ್ಧಶತಕದ ನೆರವಿನಿಂದ ಮೂರನೇ ಟೆಸ್ಟ್​​ನ ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 2 ವಿಕೆಟ್​ ನಷ್ಟಕ್ಕೆ 96 ರನ್ ಗಳಿಸಿದ್ದು, 242 ರನ್​ಗಳ ಹಿನ್ನಡೆಯಲ್ಲಿದೆ.

ಆಸ್ಟ್ರೇಲಿಯಾ 338 ರನ್​ಗಳಿಗೆ ಸರ್ವಪತನ ಕಂಡ ನಂತರ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಗಿಲ್ ಉತ್ತಮವಾಗಿ ಬ್ಯಾಟ್ ಬೀಸಿದ್ರು. ಮೊದಲ ವಿಕೆಟ್​ಗೆ ಈ ಜೋಡಿ 70 ರನ್​ಗಳ ಕಾಣಿಕೆ ನೀಡಿತು. ಸರಣಿಯಲ್ಲಿ ಚೊಚ್ಚಲ ಪಂದ್ಯವಾಡಿದ ರೋಹಿತ್ ಶರ್ಮಾ ತಾಳ್ಮೆಯಿಂದ ಆಟವಾಡಿದರು. 77 ಎಸೆತಗಳಲ್ಲಿ 26 ರನ್ ಗಳಿಸಿದ ಹಿಟ್​​ಮ್ಯಾನ್​ ಹೆಜಲ್​ವುಡ್​ಗೆ ವಿಕೆಟ್ ಒಪ್ಪಿಸಿದರು.

ಮೆಲ್ಬೋರ್ನ್​ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಶುಬ್ಮನ್ ಗಿಲ್, ಇಂದಿನ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಕಮ್ಮಿನ್ಸ್ ಎಸೆತದಲ್ಲಿ ಗ್ರೀನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದ್ದು, ಚೆತೇಶ್ವರ್ ಪೂಜಾರ 9 ರನ್ ಮತ್ತು ಅಜಿಂಕ್ಯಾ ರಹಾನೆ 5 ರನ್​ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಹೆಜಲ್​ವುಡ್ ಮತ್ತು ಕಮ್ಮಿನ್ಸ್​ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 338 ರನ್ ಗಳಿಸಿದೆ. ಮೊದಲ ದಿನದ ಅಂತ್ಯಕ್ಕೆ ಆಸೀಸ್​​ 2 ವಿಕೆಟ್ ಕಳೆದುಕೊಂಡು 164 ರನ್​ ಗಳಿಸಿತ್ತು. ಇಂದು ಇನ್ನಿಂಗ್ಸ್ ಆರಂಭಿಸಿದ ಸ್ಟೀವ್ ಸ್ಮಿತ್ ಮತ್ತು ಲಾಬುಶೇನ್ ಉತ್ತಮವಾಗಿ ಬ್ಯಾಟಿಂಗ್​ ಮಾಡಿದರು. ಈ ಜೋಡಿ ಮೂರನೇ ವಿಕೆಟ್​ಗೆ 100 ರನ್​ಗಳ ಜೊತೆಯಾಟ ಆಡಿತು. ನಿನ್ನೆಯಿಂದಲೂ ಭಾರತೀಯ ಬೌಲರ್​ಗಳನ್ನು ಕಾಡಿದ್ದ ಈ ಜೋಡಿಯನ್ನು ರವೀಂದ್ರ ಜಡೇಜಾ ಬೇರ್ಪಡಿಸಿದ್ರು.

91 ರನ್​ ಗಳಿಸಿದ್ದ ಲಾಬುಶೇನ್ ಜಡೇಜಾ ಬೌಲಿಂಗ್​ನಲ್ಲಿ ಪೂಜಾರಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು. ನಂತರ ಬಂದ ಮ್ಯಾಥ್ಯೂ ವೇಡ್ ಕೇವಲ 13 ರನ್​ ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ್ರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ರೀನ್, ಬುಮ್ರಾ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದು ಶೂನ್ಯ ಸುತ್ತಿದ್ರು.

ಈ ನಡುವೆ ಉತ್ತಮವಾಗಿ ಬ್ಯಾಟ್ ಬೀಸಿದ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್​ನಲ್ಲಿ 27ನೇ ಶತಕ ಸಿಡಿಸಿದ್ರು. ನಾಯಕ ಟಿಮ್ ಪೇನ್ 1 ರನ್​ಗೆ ಪೆವಿಲಿಯನ್ ಸೇರಿಕೊಂಡ್ರೆ, ಕಮ್ಮಿನ್ಸ್ ಶೂನ್ಯಕ್ಕೆ ಔಟ್ ಆದ್ರು. ಕೆಲ ಕಾಲ ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ಟಾರ್ಕ್ 24 ರನ್​ ಸಿಡಿಸಿ ಸೈನಿಗೆ ವಿಕೆಟ್ ಒಪ್ಪಿಸಿದ್ರು. ನಥನ್ ಲಿಯಾನ್(0) ಮತ್ತು ​30 ರನ್ ಗಳಿಸಿದ್ದ ಸ್ಟೀವ್ ಸ್ಮಿತ್ ರನೌಟ್​​​ಗೆ ಬಲಿಯಾಗುವ ಮೂಲಕ ಆಸೀಸ್ 337 ರನ್​ಗಳಿಗೆ ಸರ್ವಪತನ ಕಂಡಿತು​. ಭಾರತದ ಪರ ಜಡೇಜಾ 4 ವಿಕೆಟ್, ಸೈನಿ 2, ಬುಮ್ರಾ 2 ಮತ್ತು ಸಿರಾಜ್ 1 ವಿಕೆಟ್ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.