ETV Bharat / sports

2021ಕ್ಕೆ ಭಾರತ ತಂಡದಿಂದ ಇಂಗ್ಲೆಂಡ್​ ಪ್ರವಾಸ: ವೇಳಾಪಟ್ಟಿ ಬಿಡುಗಡೆ ಮಾಡಿದ ಇಸಿಬಿ - ಇಂಗ್ಲೆಂಡ್ ತಂಡ

ಭಾರತ-ಇಂಗ್ಲೆಂಡ್​ ತಂಡಗಳ ನಡುವಿನ ಮೊದಲ ಟೆಸ್ಟ್​ ಪಂದ್ಯ ಟ್ರೆಂಟ್​ ಬ್ರಿಡ್ಜ್​ನಲ್ಲಿ (ಆಗಸ್ಟ್​ 4ರಿಂದ 8ರವರೆಗೆ), 2ನೇ ಟೆಸ್ಟ್ ಲಾರ್ಡ್ಸ್​ನಲ್ಲಿ(ಆಗಸ್ಟ್​ 12-16), 3ನೇ ಟೆಸ್ಟ್​ ಹೆಡ್ಡಿಂಗ್ಲೆನಲ್ಲಿ(ಆಗಸ್ಟ್​ 25-29), 4ನೇ ಟೆಸ್ಟ್​ ಕಿಯಾ ಓವೆಲ್​ನಲ್ಲಿ ​(ಸೆ.2-6) ಹಾಗೂ ಕೊನೆಯ ಟೆಸ್ಟ್​ ಓಲ್ಡ್​ ಟ್ರಾಫೋರ್ಡ್​ನಲ್ಲಿ (ಸೆ.10-14) ನಡೆಯಲಿದೆ.

2021ಕ್ಕೆ ಭಾರತ ತಂಡದಿಂದ ಇಂಗ್ಲೆಂಡ್​ ಪ್ರವಾಸ
2021ಕ್ಕೆ ಭಾರತ ತಂಡದಿಂದ ಇಂಗ್ಲೆಂಡ್​ ಪ್ರವಾಸ
author img

By

Published : Nov 18, 2020, 7:18 PM IST

ಲಂಡನ್​: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಭಾಗವಾಗಿ ಭಾರತ ತಂಡ ಮುಂದಿನ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅದಕ್ಕಾಗಿ ಬುಧವಾರ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 2021ರ ಬೇಸಿಗೆಯಲ್ಲಿ ಇಂಗ್ಲೆಂಡ್​ ತಂಡ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೀಮಿತ ಓವರ್​ಗಳ ಸರಣಿಯನ್ನೂ ಆಡಲಿದೆ.

ಭಾರತ-ಇಂಗ್ಲೆಂಡ್​ ತಂಡಗಳ ನಡುವಿನ ಮೊದಲ ಟೆಸ್ಟ್​ ಪಂದ್ಯ ಟ್ರೆಂಟ್​ ಬ್ರಿಡ್ಜ್​ನಲ್ಲಿ (ಆಗಸ್ಟ್​ 4ರಿಂದ 8ರವರೆಗೆ), 2ನೇ ಟೆಸ್ಟ್ ಲಾರ್ಡ್ಸ್​ನಲ್ಲಿ(ಆಗಸ್ಟ್​ 12-16), 3ನೇ ಟೆಸ್ಟ್​ ಹೆಡ್ಡಿಂಗ್ಲೆನಲ್ಲಿ(ಆಗಸ್ಟ್​ 25-29), 4ನೇ ಟೆಸ್ಟ್​ ಕಿಯಾ ಓವೆಲ್​ನಲ್ಲಿ ​(ಸೆ.2-6) ಹಾಗೂ ಕೊನೆಯ ಟೆಸ್ಟ್​ ಓಲ್ಡ್​ ಟ್ರಾಫೋರ್ಡ್​ನಲ್ಲಿ (ಸೆ.10-14) ನಡೆಯಲಿದೆ.

ಕಳೆದ ಇಂಗ್ಲೆಂಡ್​ ಪ್ರವಾಸದಲ್ಲಿ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ 4-1ರಲ್ಲಿ ಸೋಲು ಕಂಡಿತ್ತು.

ಇದಕ್ಕೂ ಮೊದಲು ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ಜೂನ್​ 29ರಿಂದ ಜುಲೈವರೆಗೆ 3 ಪಂದ್ಯಗಳ ಏಕದಿನ ಸರಣಿ, ನಂತರ ಜುಲೈ 10-20ರವರೆಗೆ ಪಾಕಿಸ್ತಾನ ವಿರುದ್ಧ 3 ತಲಾ 3 ಪಂದ್ಯಗಳ ಟಿ-20 ಮತ್ತು ಏಕದಿನ ಸರಣಿಯನ್ನಾಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.