ETV Bharat / sports

ವಿಶ್ವಕಪ್​ ನಂತರ ಐಸಿಸಿ ಮತ್ತೊಂದು ಮೆಗಾ ಇವೆಂಟ್​:  ಟೀಂ ಇಂಡಿಯಾ ಮೊದಲ ಎದುರಾಳಿ ವಿಂಡೀಸ್​ - undefined

ವಿಶ್ವಕಪ್​ ಕ್ರಿಕೆಟ್​ ಟೂರ್ನಿ ಮುಗಿದ ಒಂದು ತಿಂಗಳಲ್ಲೇ ಐಸಿಸಿ ಮತ್ತೊಂದು ಮೆಗಾ ಇವೆಂಟ್ ನಡೆಸಲಿದ್ದು ಭಾರತ ತಂಡ ಮೊದಲ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ತಂಡವನ್ನ ಎದುರಿಸಲಿದೆ.

ವಿಶ್ವಕಪ್​ ನಂತರ ಐಸಿಸಿ ಮತ್ತೊಂದು ಮೆಗಾ ಇವೆಂಟ್
author img

By

Published : Jun 13, 2019, 12:00 PM IST

Updated : Jun 13, 2019, 12:08 PM IST

ನವದೆಹಲಿ: ಮುಂಬರುವ ಜುಲೈ ತಿಂಗಳಿಂದ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಟೂರ್ನಿ ಪ್ರಾರಂಭವಾಗಲಿದ್ದು, ಭಾರತ ತನ್ನ ಮೊದಲ ಪಂದ್ಯದಲ್ಲಿ ಕೆರಿಬಿಯನ್​ ಪಡೆಯನ್ನ ಎದುರಿಸಲಿದೆ.

2 ವರ್ಷಗಳ ಮೆಗಾ ಇವೆಂಟ್​:
ವಿಶ್ವ ಟೆಸ್ಟ್​ ಚಾಂಪಿಯನ್ ಪಂದ್ಯಗಳು ಎರಡು ವರ್ಷಗಳ ಕಾಲ ನಡೆಯಲಿವೆ. ಟೆಸ್ಟ್​ ಪಂದ್ಯಗಳನ್ನ ಆಡುವ 12 ತಂಡಗಳಲ್ಲಿ ಒಂಭತ್ತು ತಂಡಗಳು ಈ ಚಾಂಪಿಯನ್​ ಶಿಪ್​ನಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿಯೊಂದು ತಂಡ 6 ತಂಡಗಳ ವಿರುದ್ಧ 2 ರಿಂದ 5 ಪಂದ್ಯಗಳ ಸರಣಿಯನ್ನ ಆಡಬೇಕು. ಮೂರು ಸರಣಿಗಳು​ ಹೋಮ್​ ಪಿಚ್​ನಲ್ಲಿ ನಡೆದರೆ, ಮೂರು ಸರಣಿಯನ್ನ​ ವಿದೇಶದಲ್ಲಿ ಆಡಬೇಕು. ಲೀಗ್​ ಹಂತದಲ್ಲಿ ಹೆಚ್ಚು ಅಂಕ ಪಡೆದ ಮೊದಲ ಎರಡು ತಂಡಗಳು 2021ಕ್ಕೆ ಇಂಗ್ಲೆಂಡ್​ನಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಈ ಟೆಸ್ಟ್​ ಚಾಂಪಿಯನ್​​ ಶಿಪ್​ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್​​ ​ ತಂಡಗಳು ಮುಖಾಮುಖಿಯಾಗುತ್ತಿವೆ. ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವೆ 2 ಪಂದ್ಯಗಳ ಟೆಸ್ಟ್ ​ ಸರಣಿ ನಡೆಯಲಿದ್ದು, ಆಗಸ್ಟ್​ 22 ರಂದು ಆಂಟಿಗುವಾದಲ್ಲಿ ಉಭಯ ತಂಡಗಳು ಕಾದಾಡಲಿವೆ. ಇದಕ್ಕೂ ಮೊದಲು ಭಾರತ ತಂಡ ವಿಂಡೀಸ್​ ವಿರುದ್ಧ ಮೂರು ಟಿ- 20 ಮತ್ತು 3 ಏಕದಿನ ಪಂದ್ಯಗಳನ್ನ ಆಡಲಿದೆ.

ಪಾಕ್​ ವಿರುದ್ಧ ಭಾರತ ಆಡುವಂತಿಲ್ಲ:
ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ನ ಮೊದಲು ಮತ್ತು ಎರಡನೇ ಆವೃತ್ತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವಂತಿಲ್ಲ ಎಂದು ಐಸಿಸಿ ತಿಳಿಸಿದೆ.

ಚಾಂಪಿಯನ್​ ಶಿಪ್​ನಲ್ಲಿ ಪಾಲ್ಗೊಳ್ಳುವ ತಂಡಗಳು:
ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲ್ಯಾಂಡ್​​, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್​ ಇಂಡೀಸ್​.

Intro:Body:

hgj

Conclusion:
Last Updated : Jun 13, 2019, 12:08 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.