ಮೆಲ್ಬೋರ್ನ್: ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಡಿಸೆಂಬರ್ 17 ರಿಂದ ಅಡಿಲೇಡ್‌ನಲ್ಲಿ ನಡೆಯುವ ಅಹರ್ನಿಶಿ ಪಂದ್ಯದ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಪ್ರಾರಂಭಿಸಲಿದೆ.
ಅಡಿಲೇಡ್ ಪಂದ್ಯವು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವಾಗಲಿದೆ. ಈ ಹಿಂದೆ ಎರಡೂ ತಂಡಗಳು ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಸೋತಿಲ್ಲ. ಆಸ್ಟ್ರೇಲಿಯಾ ತಂಡವು ಅಡಿಲೇಡ್‌ನಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ ನಾಲ್ಕು ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲೂ ಗೆಲುವು ಸಾಧಿಸಿದೆ. ಇತ್ತ ಟೀಂ ಇಂಡಿಯಾ 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಈಡನ್ ಗಾರ್ಡನ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿತ್ತು.
-
Lock it in! 🔒
— Cricket Australia (@CricketAus) October 27, 2020 " class="align-text-top noRightClick twitterSection" data="
We've confirmed the schedule for the blockbuster Australia-India men's series: https://t.co/AecJ2Iq5h2 pic.twitter.com/XhOwsKTVW9
">Lock it in! 🔒
— Cricket Australia (@CricketAus) October 27, 2020
We've confirmed the schedule for the blockbuster Australia-India men's series: https://t.co/AecJ2Iq5h2 pic.twitter.com/XhOwsKTVW9Lock it in! 🔒
— Cricket Australia (@CricketAus) October 27, 2020
We've confirmed the schedule for the blockbuster Australia-India men's series: https://t.co/AecJ2Iq5h2 pic.twitter.com/XhOwsKTVW9
ಐಸಿಸಿ ಟೆಸ್ಟ್ ಶ್ರೇಯಾಂಕಿತರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಪ್ರಥಮ ಸ್ಥಾನದಲ್ಲಿದೆ. ಆದಾಗ್ಯೂ, 2018-19ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಸರಣಿ ಗೆಲುವು ಸೇರಿದಂತೆ ಆಸ್ಟ್ರೇಲಿಯಾ ವಿರುದ್ಧದ ಈ ಹಿಂದಿನ ನಾಲ್ಕು ಸರಣಿಗಳಲ್ಲಿ ಮೂರರಲ್ಲಿ ಗೆದ್ದಿರುವ ಭಾರತ ಜಯ ಸಾಧಿಸುವ ವಿಶ್ವಾಸದಲ್ಲಿದೆ.
ಟೆಸ್ಟ್ ಸರಣಿಗೂ ಮೊದಲು ತಂಡಗಳು ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳಲ್ಲಿ ಸ್ಪರ್ಧಿಸಲಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ನವೆಂಬರ್ 27, 29) ಮತ್ತು ಕ್ಯಾನ್ಬೆರಾದ ಮನುಕಾ ಓವಲ್ (ಡಿಸೆಂಬರ್ 2) ನಲ್ಲಿ ಮೂರು ಏಕದಿನ ಪಂದ್ಯಗಳೊಂದಿಗೆ ಪ್ರವಾಸ ಪ್ರಾರಂಭವಾಗಲಿದೆ. ಅದರ ನಂತರ ಕ್ಯಾನ್‌ಬೆರಾ (ಡಿಸೆಂಬರ್ 4) ಮತ್ತು ಎಸ್‌ಸಿಜಿ (ಡಿಸೆಂಬರ್ 6, 8) ನಲ್ಲಿ ಮೂರು ಪಂದ್ಯಗಳ ಟಿ-20 ಸರಣಿ ನಡೆಯಲಿದೆ.
ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಹೊಸ ಹುರುಪಿನಲ್ಲಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿ 10 ಪಂದ್ಯಗಳಲ್ಲಿ ಸೋತಿರುವ ಟೀಂ ಇಂಡಿಯಾ ಕೊಂಚ ಮೇಲುಗೈ ಸಾಧಿಸಿದೆ.