ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ಮನ್ಗಳು ಆರಂಭದಲ್ಲೇ ನಿರಾಸೆ ಮೂಡಿಸಿದ್ದಾರೆ. ಈ ನಡುವೆ ರೋಹಿತ್ ಶರ್ಮಾ ದಾಖಲೆಯ ಶತಕ ಸಿಡಿಸಿದ್ದಾರೆ. ಇದೇ ವೇಳೆ ರಹಾನೆ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಇದೇ ಸರಣಿಯ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಆಕರ್ಷಕ ಶತಕ ಸಿಡಿಸಿದ್ದ ರೋಹಿತ್, ಈ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 176 ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 127 ರನ್ ಗಳಿಸಿದ್ದರು.
-
6th Test 💯✅
— BCCI (@BCCI) October 19, 2019 " class="align-text-top noRightClick twitterSection" data="
2000 Test runs ✅
Hitman @ImRo45 👏 pic.twitter.com/3WRePPZp3k
">6th Test 💯✅
— BCCI (@BCCI) October 19, 2019
2000 Test runs ✅
Hitman @ImRo45 👏 pic.twitter.com/3WRePPZp3k6th Test 💯✅
— BCCI (@BCCI) October 19, 2019
2000 Test runs ✅
Hitman @ImRo45 👏 pic.twitter.com/3WRePPZp3k
ತಂಡದ ಮೊತ್ತ ಎರಡಂಕಿಯ ಗಡಿ ದಾಟುತ್ತಲೇ ಮಯಾಂಕ್ ಅಗರ್ವಾಲ್ 10 ರನ್ ಗಳಿಸಿ ರಬಾಡಾಗೆ ವಿಕೆಟ್ ಒಪ್ಪಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನ ಭರವಸೆಯ ಆಟಗಾರ ಚೆತೇಶ್ವರ ಪುಜಾರಾ ಶೂನ್ಯಕ್ಕೆ ನಿರ್ಗಮಿಸಿ ಭಾರತಕ್ಕೆ ಮತ್ತೊಂದು ಆಘಾತ ನೀಡಿದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದರಾದರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲುವಲ್ಲಿ ವಿಫಲರಾದರು. ತಂಡದ ಮೊತ್ತ 39 ಆಗುವಷ್ಟರಲ್ಲೇ 12 ರನ್ಗಳಿಸಿ ಔಟಾದರು.
-
FIFTY runs for @ajinkyarahane88. This is his 21st half-century in Test cricket.#INDvSA pic.twitter.com/jSgMI1rM3P
— BCCI (@BCCI) October 19, 2019 " class="align-text-top noRightClick twitterSection" data="
">FIFTY runs for @ajinkyarahane88. This is his 21st half-century in Test cricket.#INDvSA pic.twitter.com/jSgMI1rM3P
— BCCI (@BCCI) October 19, 2019FIFTY runs for @ajinkyarahane88. This is his 21st half-century in Test cricket.#INDvSA pic.twitter.com/jSgMI1rM3P
— BCCI (@BCCI) October 19, 2019
ಈ ವೇಳೆ ಜವಾಬ್ದಾರಿಯುವಾಗಿ ಆಟ ಮುಂದುವರಿಸಿದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದ್ದಾರೆ. ರೋಹಿತ್ ಶರ್ಮಾ ದಾಖಲೆಯ ಶತಕ ಸಿಡಿಸಿದ್ದಾರೆ. ಇನ್ನೊಂದೆಡೆ ಅಜಿಂಕ್ಯಾ ರಹಾನೆ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇವರಿಬ್ಬರು ತಂಡದ ಮೊತ್ತವನ್ನು ನೂರರ ಗಡಿದಾಟಿಸಿ ಆಡುತ್ತಿದ್ದಾರೆ.