ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ಸ್ವೀಪ್ ಮಾಡುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಸರಣಿ ಗೆಲುವಿನೊಂದಿಗೆ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದೆ.
ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ದಿಗ್ವಿಜಯ; ಹರಿಣಗಳ ಬಗ್ಗುಬಡಿದು ವಿರಾಟ್ ಪ್ರದರ್ಶನ
ದ.ಆಫ್ರಿಕಾ ಸರಣಿಗೂ ಮುನ್ನ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ 120 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದ ಕೊಹ್ಲಿ ಬಳಗ ಹರಿಣಗಳನ್ನು ಸೋಲಿಸಿ ಮತ್ತೆ 120 ಅಂಕ ಹೆಚ್ಚಿಸಿಕೊಂಡಿದೆ.
ಟೀಂ ಇಂಡಿಯಾ 240 ಅಂಕದೊಂದಿಗೆ ಅಗ್ರಪಟ್ಟ ಕಾಯ್ದುಕೊಂಡಿದ್ದರೆ, ನಂತರದಲ್ಲಿ ತಲಾ 60 ಅಂಕಗಳ ಮೂಲಕ ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳಿವೆ. ಈ ಪಟ್ಟಿಯಲ್ಲಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಗಳಿಕೆ 56 ಅಂಕ. ಉಳಿದ ತಂಡಗಳ ಒಟ್ಟಾರೆ ಗಳಿಕೆಯನ್ನು ಒಟ್ಟುಮಾಡಿದರೂ ಭಾರತದ ಅಂಕವನ್ನು ಮೀರಿಸಲು ಸಾಧ್ಯವಿಲ್ಲ ಎನ್ನುವುದು ಗಮನಾರ್ಹ ಸಂಗತಿ.
-
#TeamIndia win the 3rd Test by an innings & 202 runs #INDvSA @Paytm
— BCCI (@BCCI) October 22, 2019 " class="align-text-top noRightClick twitterSection" data="
3-0 🇮🇳🇮🇳🇮🇳 pic.twitter.com/OwveWWO1Fu
">#TeamIndia win the 3rd Test by an innings & 202 runs #INDvSA @Paytm
— BCCI (@BCCI) October 22, 2019
3-0 🇮🇳🇮🇳🇮🇳 pic.twitter.com/OwveWWO1Fu#TeamIndia win the 3rd Test by an innings & 202 runs #INDvSA @Paytm
— BCCI (@BCCI) October 22, 2019
3-0 🇮🇳🇮🇳🇮🇳 pic.twitter.com/OwveWWO1Fu
ನವೆಂಬರ್ ತಿಂಗಳಲ್ಲಿ ಬಾಂಗ್ಲಾದೇಶ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಮೂರು ಟೆಸ್ಟ್ ಪಂದ್ಯ ಈ ಪ್ರವಾಸದಲ್ಲಿ ಆಯೋಜನೆಯಾಗಿದೆ. ಇಲ್ಲೂ ಭಾರತದ ಪ್ರಾಬಲ್ಯ ನಿಚ್ಚಳವಾಗಿದ್ದು, ಅಗ್ರಸ್ಥಾನಕ್ಕೆ ಯಾವುದೇ ಆತಂಕವಿಲ್ಲ.
- ಭಾರತ - 240 ಅಂಕ
- ನ್ಯೂಜಿಲ್ಯಾಂಡ್- 60 ಅಂಕ
- ಶ್ರೀಲಂಕಾ - 60 ಅಂಕ
- ಆಸ್ಟ್ರೇಲಿಯಾ - 56 ಅಂಕ
- ಇಂಗ್ಲೆಂಡ್ - 56 ಅಂಕ