ಸೌತಮ್ಟನ್: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ದುರ್ಬಲ ಅಫ್ಘಾನಿಸ್ತಾನದ ವಿರುದ್ಧ ಗೆಲುವು ದಾಖಲು ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
ವಿಶ್ವಕಪ್ ಮಹಾಟೂರ್ನಿಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯುಜಿಲೆಂಡ್ ತಂಡದ ಬಳಿಕ 50 ಪಂದ್ಯದಲ್ಲಿ ಗೆದ್ದಿರುವ ಹಿರಿಮೆ ಇದೀಗ ಟೀಂ ಇಂಡಿಯಾ ಪಾಲಾಗಿದೆ. ವಿಶ್ವಕಪ್‌ನಲ್ಲಿ ಒಟ್ಟು 79 ಪಂದ್ಯಗಳನ್ನಾಡಿರುವ ಭಾರತ 50ನೇ ಗೆಲುವು ದಾಖಲು ಮಾಡಿದೆ. ಇನ್ನು 27 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ರದ್ಧಾಗಿದ್ದರೆ, ಮತ್ತೊಂದು ಪಂದ್ಯ ಡ್ರಾ ಆಗಿದೆ.

- ಆಸ್ಟ್ರೇಲಿಯಾ: 67 ಗೆಲುವು (90 ಪಂದ್ಯ)
- ನ್ಯೂಜಿಲೆಂಡ್: 52 ಗೆಲುವು (84 ಪಂದ್ಯ)
- ಭಾರತ: 50 ಗೆಲುವು (79 ಪಂದ್ಯ)
ಕಳೆದ 21 ವಿಶ್ವಕಪ್ ಪಂದ್ಯಗಳಲ್ಲಿ ಟೀಂ ಇಂಡಿಯಾ 18 ಮ್ಯಾಚ್ಗಳಲ್ಲಿ ಗೆಲುವು ದಾಖಲು ಮಾಡಿದ್ದು, 2011ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋಲು ಕಂಡಿದೆ.

ನಿನ್ನೆ ಅಫ್ಘಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ 224ರನ್ಗಳಿಕೆ ಮಾಡಿದ್ದ ಟೀಂ ಇಂಡಿಯಾ ಎದುರಾಳಿ ತಂಡಕ್ಕೆ 225ರನ್ಗಳ ಟಾರ್ಗೆಟ್ ನೀಡಿತು. ಇದರ ಬೆನ್ನತ್ತಿದ್ದ ಅಫ್ಘಾನಿಸ್ತಾನ ತಂಡ 213ರನ್ ಮಾತ್ರಗಳಿಸಲು ಶಕ್ತವಾಯಿತು. ಹೀಗಾಗಿ 11ರನ್ಗಳ ಸೋಲು ಕಂಡಿದೆ. ಇದೇ ಪಂದ್ಯದಲ್ಲಿ ಶಮಿ 50ನೇ ಓವರ್ನಲ್ಲಿ ಹ್ಯಾಟ್ರಿಕ್ ಸಾಧನೆ ಸಹ ಮಾಡಿದರು.