ನವದೆಹಲಿ: ಗುಜರಾತ್ನಲ್ಲಿ ಪರಿಷ್ಕೃತಗೊಳ್ಳುತ್ತಿರುವ ಪ್ರಧಾನಿ ಮೋದಿಯವರ ಕನಸಿನ ಕ್ರೀಡಾಂಗಣ ಹಾಗೂ ವಿಶ್ವದ ಅತಿ ದೊಡ್ಡದಾದ ಕ್ರೀಡಾಂಗಣ ಎಂದೇ ಕರೆಸಿಕೊಳ್ಳುತ್ತಿರುವ ಮೊಟೇರಾದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಡುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
2021 ಜನವರಿ- ಫೆಬ್ರವರಿಯಲ್ಲಿ ಇಂಗ್ಲೆಂಡ್ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಮೊಟೇರಾದಲ್ಲಿ ಯಾವುದಾದರೊಂದು ಹಗಲು-ರಾತ್ರಿ ಪಂದ್ಯ ಆಯೋಜನೆ ಮಾಡುವ ನಿರ್ಧಾರವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಸಮ್ಮುಖದಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದ್ದು. ಇನ್ನು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ ಎಂದು ತಿಳಿದುಬಂದಿದೆ.
ಭಾರತ ತಂಡ ತನ್ನ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಾಡಿತ್ತು. ಇನ್ನು ಈ ವರ್ಷ್ಯಾಂತ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸದಲ್ಲೂ ಒಂದು ಹಗಲು-ರಾತ್ರಿ ಪಂದ್ಯವಾಡಲು ಭಾರತ ತಂಡ ಸಿದ್ಧ ಎಂಬ ವಿಚಾರ ಕೂಡ ಅದೇ ಬಿಸಿಸಿಐ ಸಭೆಯಲ್ಲಿ ನಿರ್ಧಾರವಾಗಿದೆ ಎಂದು ಎಂದು ಹೇಳಲಾಗ್ತಿದೆ.
ಮೊಟೇರಾ ಸ್ಟೇಡಿಯಂನಲ್ಲಿ ಕೊನೆಯ ಬಾರಿ 2014ರಲ್ಲಿ ಅಂತಾರಾಷ್ಟ್ರೀಯ ಪಂದ್ಯ ಭಾರತ- ಶ್ರೀಲಂಕಾ ನಡುವೆ ನಡೆದಿತ್ತು. ನಂತರ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣವನ್ನು ಪುನರ್ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಇದು ಇದೀಗ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾಗಿದೆ. ಇಲ್ಲಿ 1ಲಕ್ಷದ 10 ಸಾವಿರ ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಆಸ್ಟ್ರೇಲಿಯಾದಲ್ಲಿ 1ಲಕ್ಷ ಸೀಟುಗಳಿರುವ ಎಂಸಿಜೆ ಕ್ರಿಕೆಟ್ ಸ್ಟೇಡಿಯಂ ಇಲ್ಲಿಯವರೆಗೂ ವಿಶ್ವದ ದೊಡ್ಡ ಕ್ರೀಡಾಂಗಣ ಎನಿಸಿಕೊಂಡಿತ್ತು.