ETV Bharat / sports

ಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಿವೀಸ್​ನ ಗ್ರೆಗ್​ ಬ್ಲಾರ್ಕೆರಿಗೆ ಬಿಸಿಸಿಐ ಬೆಂಬಲ ಸಾಧ್ಯತೆ

ಬಾರ್ಕ್ಲೇ ಮತ್ತು ಖ್ವಾಜಾ ಮಾತ್ರ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. 16 ಕ್ರಿಕೆಟ್ ಬೋರ್ಡ್​ಗಳ ವೋಟ್ ಮಾಡುವ ಈ ಚುನಾವಣೆ ಡಿಸೆಂಬರ್​ ಮೊದಲ ವಾರದಲ್ಲಿ ನಡೆಯಲಿದೆ.

author img

By

Published : Oct 29, 2020, 11:10 PM IST

ಗ್ರೆಗ್​ ಬಾರ್ಕ್ಲೆ
ಗ್ರೆಗ್​ ಬಾರ್ಕ್ಲೆ

ನವೆದೆಹಲಿ: ಐಸಿಸಿಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ನ್ಯೂಜಿಲ್ಯಾಂಡ್​ನ ಗ್ರೆಗ್​ ಬಾರ್ಕ್ಲೆ ಅವರಿಗೆ ಬಿಸಿಸಿಐ ಬೆಂಬಲ ಸೂಚಿಸಲಿದೆ ಎಂದು ವರದಿಗಳಿಂದ ತಿಳಿದುಬಂಇದೆ. ಶಶಾಂಕ್​ ಮನೋಹರ್​ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಸಿಂಗಾಪುರ್​ನ ಇಮ್ರಾನ್ ಖ್ವಾಜಾ ಹಾಗೂ ಬಾರ್ಕ್ಲೆ ಸ್ಪರ್ಧಿಗಳಾಗಿ ಕಣಕ್ಕಿಳಿದಿದ್ದಾರೆ.

ಬಾರ್ಕ್ಲೇ ಮತ್ತು ಖ್ವಾಜಾ ಮಾತ್ರ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. 16 ಕ್ರಿಕೆಟ್ ಬೋರ್ಡ್​ಗಳ ವೋಟ್ ಮಾಡುವ ಈ ಚುನಾವಣೆ ಡಿಸೆಂಬರ್​ ಮೊದಲ ವಾರದಲ್ಲಿ ನಡೆಯಲಿದೆ.

ಇಮ್ರಾನ್ ಖ್ವಾಜಾ
ಇಮ್ರಾನ್ ಖ್ವಾಜಾ

ಸರ್ವಾನುಮತದ ಅಭ್ಯರ್ಥಿಯ ಆಯ್ಕೆ ನಿರೀಕ್ಷೆಯಲ್ಲಿರುವ ನಿರ್ಧೇಶಕ ಮಂಡಳಿಯಿದ್ದು, ಬಹುತೇಕ ಸದಸ್ಯರುಗಳು ಮಾತುಕತೆ ನಡೆಸುತ್ತಿವೆ ಎಂದು ತಿಳಿದುಬಂದಿದೆ. ಹಾಗಾಗಿ ಖ್ವಾಜಾ ಅವರಿಗೆ ಭಾರತ ಕ್ರಿಕೆಟ್ ಮಂಡಳಿಯ ಬೆಂಬಲ ಸಿಗುವುದು ಅಸಂಭವ ಎನ್ನಲಾಗಿದೆ.

ಬಿಸಿಸಿಐ ನ್ಯೂಜಿಲ್ಯಾಂಡ್​ ಕ್ರಿಕೆಟ್​ನೊಂದಿಗೆ ಹೆಚ್ಚು ಹೊಂದಾಣಿಗೆ ಹೊಂದಿದೆ. ಜೊತೆಗೆ ಐಸಿಸಿ ಮುಖ್ಯಸ್ಥ ಹುದ್ದೆಗೆ ಬಾರ್ಕ್ಲೆ ಅವರೇ ಸೂಕ್ತ ಅಭ್ಯರ್ಥಿ ಎಂದು ಬಿಸಿಸಿಐ ಭಾವಿಸುವ ಸಾಧ್ಯತೆ ಹೆಚ್ಚಿದೆ. ಖ್ವಾಜಾ ಅವರ ನೀತಿ ಭಾರತೀಯ ಕ್ರಿಕೆಟ್​ನ ಪರವಾಗಿಲ್ಲದಿರುವುದರಿಂದ ಖಂಡಿತ ಬಿಸಿಸಿಐ ಬಾರ್ಕ್ಲೆಗೆ ಬೆಂಬಲ ನೀಡಲಿದೆ ಎಂದು ಐಸಿಸಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.