ಲಂಡನ್: ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಂಡಿದ್ದು, ಮೊದಲಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಚೆನ್ನೈನಲ್ಲಿ ಫೆಬ್ರವರಿ 5 ರಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಎರಡು ತಂಡಗಳು ಕಠಿಣ ಅಭ್ಯಾಸ ನಡೆಸಿವೆ.
ಟೆಸ್ಟ್ ಸರಣಿ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ನ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್" ಭಾರತ ನೇಲದಲ್ಲಿ ಇಂಗ್ಲೆಂಡ್ ತಂಡ ಗೆಲ್ಲಲು ಕಠಿಣ ಶ್ರಮ ಪಡಬೇಕು. ಅದರಲ್ಲೂ ವಿಕೆಟ್ ಕೀಪರ್ಗಳು ಮಾನಸಿಕವಾಗಿ ಸದೃಢರಾಗಬೇಕು ಎಂದು ಮ್ಯಾಟ್ ಪ್ರಿಯರ್ ಹೇಳಿದ್ದಾರೆ.
"ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದು ಅಷ್ಟು ಸುಲಭವಲ್ಲ, ದಿನದ ಮೊದಲ ಓವರ್ನಲ್ಲಿಯೆ ಆಂಡರ್ಸನ್ ಉತ್ತಮ ಆರಂಭ ದೊರಕಿಸಿ ಕೋಡಬೇಕು. ತಂಡದ ಇಡೀ ಗೇಮ್‌ಪ್ಲಾನ್ ಬದಲಾಗಬೇಕಿದೆ, ಅದು ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳು, ವಿಕೆಟ್‌ಕೀಪರ್‌ಗಳು ಅಥವಾ ಫೀಲ್ಡರ್‌ಗಳೇ ಆಗಿರಲಿ, ಭಾರತ ಆಟಗಾರರು ಚೆಂಡಿನೊಂದಿಗೆ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಹೆಚ್ಚು ಯೋಚಿಸಬೇಕು, ಇದರಿಂದ ಅವರನ್ನ ಹಿಮ್ಮುಖಗೊಳಿಸಬಹುದು" ಎಂದು ಹೇಳಿದ್ದಾರೆ.
2012 ರಲ್ಲಿ, ಭಾರತದಲ್ಲಿ 28 ವರ್ಷಗಳ ನಂತರ ಇಂಗ್ಲೆಂಡ್ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಗೆದ್ದಿತ್ತು.
"ನನ್ನ ಕಿಟ್ ತೆಗೆಯುವುದು ನನಗೆ ತಿಳಿದಿರಲಿಲ್ಲ, ಅದು ನಾನು ಅದನ್ನು ತಿಳಿದುಕೊಳ್ಳುವ ಮೊದಲೆ, ನಾನು ನಿದ್ದೆ ಮಾಡುತ್ತಿದ್ದೆ ಎಂದು ತಮ್ಮ ಅನುಭವವನ್ನ" ಹಂಚಿಕೊಂಡರು ಪ್ರಿಯರ್.