ETV Bharat / sports

ಭಾರತೀಯರಿಗೆ ಸೋಲಿನ ಭೀತಿ, ಅದಕ್ಕೆ ಗಬ್ಬಾದಲ್ಲಿ ಆಡಲು ಹಿಂದೇಟು: ಬ್ರಾಡ್​ ಹಡ್ಡಿನ್​ ವ್ಯಂಗ್ಯ - ಗಬ್ಬಾದಲ್ಲಿ ಭಾರತದಕ್ಕೆ ಸೋಲಿನ ಭೀತಿ

ಆಸ್ಟ್ರೇಲಿಯಾ ತಂಡ ಗಬ್ಬಾದಲ್ಲಿ ಸೋಲುವುದಿಲ್ಲ ಎಂದು ತಿಳಿದಿರುವ ಭಾರತ ತಂಡ 4ನೇ ಟೆಸ್ಟ್​ಗಾಗಿ ಬ್ರಿಸ್ಬೇನ್​ಗೆ ಪ್ರಯಾಣಿಸಲು ಹಿಂದೇಟು ಹಾಕುತ್ತಿದೆ ಎಂದು ಬ್ರಾಡ್​ ಹಡ್ಡಿನ್ ಹೇಳಿದ್ದಾರೆ.

ಬ್ರಾಡ್​ ಹಡ್ಡಿನ್​ - ಭಾರತ ತಂಡ
ಬ್ರಾಡ್​ ಹಡ್ಡಿನ್​ - ಭಾರತ ತಂಡ
author img

By

Published : Jan 3, 2021, 7:45 PM IST

ಬ್ರಿಸ್ಬೇನ್​: ಭಾರತ ತಂಡ ಬ್ರಿಸ್ಬೇನ್‌ನಲ್ಲಿ ಆಡಲು ಬಯಸುತ್ತಿಲ್ಲ. ಏಕೆಂದರೆ ಆತಿಥೇಯ ತಂಡ ಗಬ್ಬಾದಲ್ಲಿ ನಂಬಲಾಸಾಧ್ಯವಾದ ವಿಜಯದ ದಾಖಲೆಯನ್ನು ಹೊಂದಿದೆ ಎಂದು ಆಸ್ಟ್ರೇಲಿಯಾ ತಂಡ ಮಾಜಿ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ಬ್ರಾಡ್​ ಹಡ್ಡಿನ್​ ಅಭಿಪ್ರಾಯಪಟ್ಟಿದ್ದಾರೆ.

ಕ್ವೀನ್ಸ್​ಲ್ಯಾಂಡ್​ ಸರ್ಕಾರ ಕೋವಿಡ್​ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗದುಕೊಳ್ಳುತ್ತಿದ್ದು, ರಾಜ್ಯಕ್ಕೆ ಬರುವವರೆಲ್ಲರೂ 14 ದಿನಗಳ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗಬೇಕು ಎಂದು ನಿಯಮ ಹೊರಡಿಸಿದೆ. ಆದರೆ ಭಾರತೀಯ ಕ್ರಿಕೆಟ್​ ಮಂಡಳಿ ಈಗಾಗಲೇ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್​ ಮಾಡಿರುವುದರಿಂದ ಮತ್ತೊಮ್ಮೆ ಕ್ವಾರಂಟೈನ್​ ಮಾಡಲು ಸಾಧ್ಯವಿಲ್ಲ. ಇದರಿಂದ ಆಟಗಾರರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ತಿಳಿಸಿತ್ತು.

"ಕ್ರಿಕೆಟ್​ ದೃಷ್ಟಿಕೋನದಲ್ಲಿ ನೋಡುವುದಾದರೆ ಭಾರತ ತಂಡ ಗಬ್ಬಾಗೆ ಏಕೆ ಹೋಗಬೇಕು? ಯಾವ ತಂಡಗಳು ಕೂಡ ಗಬ್ಬಾದಲ್ಲಿ ಆಡಲು ಬಯಸುವುದಿಲ್ಲ. ಏಕೆಂದರೆ ಆಸ್ಟ್ರೇಲಿಯಾ ತಂಡ ಅತ್ಯುತ್ತಮ ಕ್ರಿಕೆಟ್​ ಆಡುತ್ತಿದೆ. ಅಲ್ಲಿ ಯಾವ ತಂಡವೂ ದೀರ್ಘ ಸಮಯದಿಂದ ಟೆಸ್ಟ್​ ಗೆದ್ದಿಲ್ಲ. ಅದಕ್ಕೆ ಭಾರತೀಯ ಆಟಗಾರರು ಬ್ರಿಸ್ಬೇನ್​ಗೆ ಹೊರಡಲು ಹಿಂದೇಟು ಹಾಕುತ್ತಿದ್ದಾರೆ" ಎಂದು ಫಾಕ್ಸ್​ ಸ್ಫೋರ್ಟ್ಸ್​ಗೆ ನೀಡಿದ ಪ್ರದರ್ಶನದಲ್ಲಿ ತಿಳಿಸಿದ್ದಾರೆ.

"ಈ ಆಟಗಾರರು ಬಯೋಬಬಲ್​ನಲ್ಲಿ ದೀರ್ಘ ಸಮಯದಿಂದ ಇದ್ದು ದಣಿದಿರಬಹುದು, ಅದರೆ ಇದಕ್ಕಾಗಿ ಟೆಸ್ಟ್​ ಪಂದ್ಯದ ಸ್ಥಳವನ್ನು ಬದಲಾಯಿಸಲು ಸಾಧ್ಯವಿಲ್ಲ. ನೀವು ಆಸ್ಟ್ರೇಲಿಯಾಕ್ಕೆ ಬರುವುದಕ್ಕೆ ಮೊದಲೇ ಇಲ್ಲಿನ ಪರಿಸ್ಥಿತಿ ತಿಳಿದಿತ್ತು. ಆಸ್ಟ್ರೇಲಿಯಾಕ್ಕೆ ಬರುವ ಮುನ್ನವೇ ಇಲ್ಲಿ ನಿರ್ಬಂಧಗಳಿವೆ ಎಂದು ನಿಮಗೆ ತಿಳಿದಿತ್ತು. ನೀವು ಐಪಿಎಲ್​ನಲ್ಲಿ ಮತ್ತು ಆಸ್ಟ್ರೇಲಿಯಾ ಬೇಸಿಗೆ ಬಂದಾಗಲೂ ಕ್ವಾರಂಟೈನ್ ಮಾಡಿದ್ದೀರ. ನಿಮ್ಮ ಜೊತೆ ಆಸ್ಟ್ರೇಲಿಯಾ ತಂಡ ಕೂಡ ಅದೇ ನಿಯಮಗಳನ್ನು ಪಾಲಿಸಿದೆ. ಆದರೆ ಅವರಿಂದ ಇಂತಹ ಮಾತುಗಳನ್ನು ನಾವು ಕೇಳಿಲ್ಲ, ಅವರು ನಿಯಮಗಳ ಹೋಗುತ್ತಿದ್ದಾರೆ. ನನ್ನ ಪ್ರಕಾರ, ಭಾರತೀಯರು ಗಬ್ಬಾದಲ್ಲಿ ಆಡಬಾರದೆಂದು ನಿರ್ಧರಿಸಿರುವಂತೆ ತೋರುತ್ತಿದೆ ಎಂದು ಹಡ್ಡಿನ್ ತಿಳಿಸಿದ್ದಾರೆ.

ಇದನ್ನು ಓದಿ: ಟೀಂ ಇಂಡಿಯಾ ಜೊತೆಗೇ ಸಿಡ್ನಿಗೆ ಹಾರಲಿದ್ದಾರೆ ಐಸೋಲೇಟ್ ಆಗಿರುವ ಐವರು ಆಟಗಾರರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.