ದುಬೈ: ಭಾರತ ತಂಡ ಶನಿವಾರ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿ ಅಂತ್ಯಗೊಂಡ ನಂತರ ಐಸಿಸಿ ನೂತನ ಟೆಸ್ಟ್ ತಂಡಗಳ ರ‍್ಯಾಂಕಿಂಗ್ ಬಿಡುಗಡೆ ಮಾಡಿದ್ದು, 3-1ರಲ್ಲಿ ಸರಣಿ ಗೆದ್ದ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
ಅಹ್ಮದಾಬಾದ್ನಲ್ಲಿ ಅಂತ್ಯಗೊಂಡ ಅಂತಿಮ ಟೆಸ್ಟ್ ಪಂದ್ಯವನ್ನು ಭಾರತ ತಂಡ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ಮತ್ತು 25 ರನ್ಗಳಿಂದ ಮಣಿಸಿತ್ತು. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1ರಲ್ಲಿ ವಶಪಡಿಸಿಕೊಂಡಿತ್ತು.
-
India on 🔝
— ICC (@ICC) March 6, 2021 " class="align-text-top noRightClick twitterSection" data="
Virat Kohli and Co. are No.1 in the @MRFWorldwide ICC Test Team Rankings 🔥 pic.twitter.com/uHG4q0pUlj
">India on 🔝
— ICC (@ICC) March 6, 2021
Virat Kohli and Co. are No.1 in the @MRFWorldwide ICC Test Team Rankings 🔥 pic.twitter.com/uHG4q0pUljIndia on 🔝
— ICC (@ICC) March 6, 2021
Virat Kohli and Co. are No.1 in the @MRFWorldwide ICC Test Team Rankings 🔥 pic.twitter.com/uHG4q0pUlj
ಈ ಸರಣಿ ಗೆಲ್ಲುತ್ತಿದ್ದಂತೆ 118 ರೇಟಿಂಗ್ ಅಂಕ 122ಕ್ಕೇರಿದ್ದು, ಮತ್ತೆ ಅಗ್ರಸ್ಥಾನಕ್ಕೇರಿದೆ, 118 ಅಂಕಗಳನ್ನು ಹೊಂದಿರುವ ನ್ಯೂಜಿಲ್ಯಾಂಡ್ ತಂಡ ಎರಡನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ ತಂಡ (113), ಇಂಗ್ಲೆಂಡ್(105), ಪಾಕಿಸ್ತಾನ(90), ದಕ್ಷಿಣ ಆಫ್ರಿಕಾ(89), ಶ್ರೀಲಂಕಾ(83), ವೆಸ್ಟ್ ಇಂಡೀಸ್(80), ಅಫ್ಘಾನಿಸ್ತಾನ(57) ಬಾಂಗ್ಲಾದೇಶ(51) ನಂತರದ ಸ್ಥಾನಗಳಲ್ಲಿವೆ.
2016ರಿಂದ 2020ರ ವರೆಗೆ ಸತತ 4 ವರ್ಷಗಳ ಕಾಲ ನಂಬರ್ ಒನ್ ಸ್ಥಾನದಲ್ಲಿದ್ದ ಕೊಹ್ಲಿ ಬಳಗ 2020 ಮೇ ತಿಂಗಳಲ್ಲಿ ಕುಸಿತ ಕಂಡಿತ್ತು. ಇದೀಗ ಬ್ಯಾಕ್ ಟು ಬ್ಯಾಕ್ ಸರಣಿ ಗೆಲ್ಲುವ ಮೂಲಕ ಮತ್ತೆ ಟೆಸ್ಟ್ ಕ್ರಿಕೆಟ್ನಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದೆ.
ಇದನ್ನು ಓದಿ:ಆಂಗ್ಲರ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಜಯ: WTC ಫೈನಲ್ನಲ್ಲಿ ಕಿವೀಸ್ ಜೊತೆ ಸೆಣಸಲಿದೆ ಕೊಹ್ಲಿ ಪಡೆ