ETV Bharat / sports

ಮಿಂಚಿದ ಬೌಲರ್​ಗಳು, ಪೂಜಾರ- ಅಗರ್​ವಾಲ್ ಶಿಸ್ತಿನ ಬ್ಯಾಟಿಂಗ್​: ಭಾರತಕ್ಕೆ ಮೊದಲ ದಿನದ ಗೌರವ - ಶಮಿ ಮಾರಕ ಬೌಲಿಂಗ್​ ದಾಳಿ

ಭಾರತ ತಂಡದ ಸಂಘಟಿತ ದಾಳಿಗೆ ಸಿಲುಕಿದ ಬಾಂಗ್ಲಾದೇಶ ತಂಡ ಕೇವಲ 150 ರನ್​ಗಳಿಗೆ ಆಲೌಟ್​ ಆಗಿದೆ. ಮಯಾಂಕ್​(37) ಹಾಗೂ ಪೂಜಾರ (43)ರ ನೆರವಿನಿಂದ 1 ವಿಕೆಟ್​ ನಷ್ಟಕ್ಕೆ 86 ರನ್​ಗಳಿಸಿದೆ.

bangladesh Bowled Out For 150
author img

By

Published : Nov 14, 2019, 3:27 PM IST

Updated : Nov 14, 2019, 6:06 PM IST

ಇಂದೋರ್​: ಭಾರತದ ಬೌಲರ್​ಗಳ ಅಬ್ಬರಕ್ಕೆ ನಲುಗಿದ ಬಾಂಗ್ಲಾದೇಶ ತಂಡ 150 ಕ್ಕೆ ಆಲೌಟ್​ ಆದರೆ, ಪೂಜಾರ ಅಗರ್​ವಾಲ್​ ಜಾಣ್ಮೆಯ ಆಟದ ನೆರವಿನಿಂದ ಭಾರತ ಮೊದಲದಿನದಂತ್ಯಕ್ಕೆ ಒಂದು ವಿಕೆಟ್​ ಕಳೆದುಕೊಡು 86 ರನ್​ಗಳಿಸಿದೆ.

ಬಾಂಗ್ಲಾದೇಶ ತಂಡವನ್ನು 150 ರನ್​ಗಳಿಗೆ ಆಲೌಟ್​ ಮಾಡಿದ ಭಾರತ ತಂಡ. ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಆರಂಭಿಸದ ಆರಂಭದಲ್ಲೇ ರೋಹಿತ್​ ಶರ್ಮಾ(6) ವಿಕೆಟ್​ ಕಳೆದುಕೊಂಡಿತು. ಆದರೆ ಮಯಾಂಕ್​ 37 ಹಾಗೂ ಪೂಜಾರ 43 ರನ್​ಗಳಿಸಿ 2ನೇ ವಿಕೆಟ್​ಗೆ 72 ರನ್​ಗಳ ಜೊತೆಯಾಟ ನೀಡಿದರು.

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿ ಬಾಂಗ್ಲಾತಂಡ ಆರಂಭಿಕರಾದ ಇಮ್ರುಲ್​ ಕಾಯೆಸ್​(6) ಉಮೇಶ್​ ಯಾದವ್​ಗೆ ವಿಕೆಟ್​ ಒಪ್ಪಿಸಿದರೆ, ಶದ್ಮನ್​ ಇಸ್ಲಾಮ್​(6)ರನ್ನು ಇಶಾಂತ್ ಪೆವಿಲಿಯನ್​ಗಟ್ಟಿದರು. ನಂತರ ಬಂದ ಮಿಥುನ್​ 13 ರನ್​ಗಳಿಗೆ ಶಮಿ ​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ಈ ಹಂತದಲ್ಲಿ ಹೊಂದಾದ ವಿಕೆಟ್​ ಕೀಪರ್ ರಹೀಮ್​ ಹಾಗೂ ನಾಯಕ ಮಮಿನುಲ್​ 4ನೇ ವಿಕೆಟ್​ಗೆ 68 ರನ್​ಗಳ ಜೊತೆಯಾಟ ನೀಡಿದರು. ಮಮಿನುಲ್(37) ಔಟಾಗುತ್ತಿದ್ದಂತೆ ಬಾಂಗ್ಲಾ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಪರೇಡ್​ ನಡೆಸಿದರು. ರಹೀಮ್​ 43 ರನ್​ಗಳಿಸಿ ಶಮಿ ಓವರ್​ನಲ್ಲಿ ಬೌಲ್ಡ್​ ಆಗುವ ಮೂಲಕ ಬಾಂಗ್ಲಾದೇಶದ ಪರ ಗರಿಷ್ಠ ಸ್ಕೋರರ್​ ಎನಿಸಿದರು.

ಮಹಮ್ಮದುಲ್ಲಾ10, ಲಿಟ್ಟನ್​ ದಾಸ್ 21, ಮೆಹೆದಿ ಹಸನ್​ 0, ತೈಜುಲ್​ ಇಸ್ಲಾಮ್​ 1, ಎಬಾದತ್​ಹೊಸೈನ್ 2 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು.

ಮೊಹಮ್ಮದ್​ ಶಮಿ 3 , ಅಶ್ವಿನ್​, ಉಮೇಶ್​ ಯಾದವ್​ ಹಾಗೂ ಇಶಾಂತ್ ಶರ್ಮಾ ತಲಾ ಎರಡು ವಿಕೆಟ್​ ಪಡೆದರು.

Intro:Body:Conclusion:
Last Updated : Nov 14, 2019, 6:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.