ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಭಾರತ ತಂಡ ಇನ್ನಿಂಗ್ಸ್ ಮತ್ತು 25 ರನ್ಗಳ ಅಂತರದಿಂದ ಗೆಲ್ಲುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆದಿದೆ.
ಕ್ರಿಕೆಟ್ ಸ್ವರ್ಗ ಎಂದೇ ಖ್ಯಾತವಾಗಿರುವ ಲಾರ್ಡ್ಸ್ನಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಚೊಚ್ಚಲ ಐಸಿಸಿ ವಿಶ್ವಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದಲ್ಲಿ ಟ್ರೋಫಿಗಾಗಿ ಕಾದಾಡಲಿದೆ.
ಅಹ್ಮದಾಬಾದ್ನಲ್ಲಿ ಇಂದು ಅಂತ್ಯಗೊಂಡ ಕೊನೆಯ ಪಂದ್ಯದಲ್ಲಿ ಮೊದಲ ದಿನ ಇಂಗ್ಲೆಂಡ್ ತಂಡವನ್ನು ಕೇವಲ ಇನ್ನಿಂಗ್ಸ್ನಲ್ಲಿ 205 ರನ್ಗಳಿಗೆ ಆಲೌಟ್ ಮಾಡಿದ್ದ ಕೊಹ್ಲಿ ಪಡೆ, ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ನಲ್ಲಿ 365 ರನ್ಗಳಿಸಿ 160 ರನ್ಗಳ ಮುನ್ನಡೆ ಸಾಧಿಸಿತ್ತು.
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ 118 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 101 ರನ್ಗಳಿಸಿದ್ದರು. ಇವರಿಗೆ ಸೂಕ್ತ ಬೆಂಬಲ ನೀಡಿದ್ದ ರೋಹಿತ್ ಶರ್ಮಾ 49 ರನ್, ಅಕ್ಷರ್ ಪಟೇಲ್ 43 ಮತ್ತು ವಾಷಿಂಗ್ಟನ್ ಸುಂದರ್ ಅಜೇಯ 96 ರನ್ಗಳಿಸಿದ್ದರು. ಇವರ ಭರ್ಜರಿ ಬ್ಯಾಟಿಂಗ್ ನೆರವನಿಂದ ಭಾರತ ತಂಡ 160 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು.
160 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿ ಇಂಗ್ಲೆಂಡ್ ತಂಡ ಸ್ಪಿನ್ದ್ವಯರಾದ ಅಕ್ಷರ್ ಪಟೇಲ್ ಮತ್ತು ಆರ್. ಅಶ್ವಿನ್ ಅವರ ಕರಾರುವಾಕ್ ಸ್ಪಿನ್ ದಾಳಿಗೆ ತತ್ತರಿಸಿ ಕೇವಲ 135 ರನ್ಗಳಿ ಸರ್ವಪತನ ಕಂಡು, ಇನ್ನಿಂಗ್ಸ್ ಮತ್ತು 25 ರನ್ಗಳ ಸೋಲಿನೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯನ್ನ 3-1ರಲ್ಲಿ ಕಳೆದುಕೊಂಡಿತು.
-
A resounding innings victory for India!
— ICC (@ICC) March 6, 2021 " class="align-text-top noRightClick twitterSection" data="
They beat England 3-1, and qualify for the final of the ICC World Test Championship!#INDvENG | #WTC21 pic.twitter.com/CNMmB2KiyQ
">A resounding innings victory for India!
— ICC (@ICC) March 6, 2021
They beat England 3-1, and qualify for the final of the ICC World Test Championship!#INDvENG | #WTC21 pic.twitter.com/CNMmB2KiyQA resounding innings victory for India!
— ICC (@ICC) March 6, 2021
They beat England 3-1, and qualify for the final of the ICC World Test Championship!#INDvENG | #WTC21 pic.twitter.com/CNMmB2KiyQ
ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಪಡೆದಿದ್ದ ಅಕ್ಷರ್ ಪಟೇಲ್ ಎರಡನೇ ಇನ್ನಿಂಗ್ಸ್ನಲ್ಲಿ 48 ರನ್ ನೀಡಿ 5 ವಿಕೆಟ್ ಪಡೆದರೆ, ಅನುಭವಿ ಅಶ್ವಿನ್ 47 ರನ್ ನೀಡಿ 5 ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು 135ಕ್ಕೆ ಗಂಟು ಮೂಟೆ ಕಟ್ಟುವಂತೆ ಮಾಡಿದರು.
2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ ಆರಂಭದಿಂದಲೂ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕರಾದ ಕ್ರಾಲೆ(5) ಮತ್ತು ಸಿಬ್ಲೆ(3) ಮತ್ತೊಮ್ಮೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಇನ್ನು ಬೈಸ್ಟೋವ್ ಶೂನ್ಯ ಸಂಪಾದಿಸಿ ಅಕ್ಷರ್ಗೆ ವಿಕೆಟ್ ಒಪ್ಪಿಸಿದರು.
ನಂತರ ಜೊತೆಗೂಡಿದ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಜೋಡಿ ಇಂಗ್ಲೆಂಡ್ ಬ್ಯಾಟಿಂಗ್ ಬಲನೀಡುವ ವಿಶ್ವಾಸ ಮೂಡಿಸಿತ್ತಾದರೂ, ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಅಕ್ಷರ್ ಪಟೇಲ್ 2 ರನ್ ಗಳಿಸಿದ್ದ ಬೆನ್ ಸ್ಟೋಕ್ಸ್ ರನ್ನು ಪೆವಿಲಿಯನ್ಗಟ್ಟುವ ಮೂಲಕ ಇಂಗ್ಲೆಂಡ್ಗೆ ಆಘಾತ ನೀಡಿದರು. ಬಳಿಕ ರೂಟ್ ಜೊತೆ ಗೂಡಿದ ಒಲ್ಲಿ ಪೋಪ್ 35 ರನ್ಗಳ ಜೊತೆಯಾಟವಾಡಿತು. ಆದರೆ ಪೋಪ್ ಕೂಡ 15 ರನ್ ಗಳಿಸಿ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಇನ್ನು 30 ರನ್ ಗಳಿಸಿ ಇಂಗ್ಲೆಂಡ್ ಬ್ಯಾಟಿಂಗ್ ಗೆ ಬೆನ್ನೆಲುಬಾಗಿದ್ದ ಜೋ ರೂಟ್ 30 ರನ್ಗಳಿಸಿಗೆ ಔಟಾದರು.
ಆದರೆ ಕೊನೆಯಲ್ಲಿ ಡೇನಿಯಲ್ ಲಾರೆನ್ಸ್ 50 ರನ್ಗಳಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಲು ಸಫಲರಾದರೆ ಹೊರೆತು ಇನ್ನಿಂಗ್ಸ್ ಸೋಲು ತಪ್ಪಿಸಲಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 75.5 ಓವರ್ಗಳಲ್ಲಿ 205/10: ಬೆನ್ ಸ್ಟೋಕ್ಸ್ 55, ಡೇನಿಯಲ್ ಲಾರೆನ್ಸ್ 46, ಅಕ್ಷರ್ ಪಟೇಲ್ 68ಕ್ಕೆ 4, ಅಶ್ವಿನ್ 47ಕ್ಕೆ 3, ಸಿರಾಜ್ 45ಕ್ಕೆ2
ಭಾರತ ಮೊದಲ ಇನ್ನಿಂಗ್ಸ್ 114.4 ಓವರ್ಗಳಲ್ಲಿ 365/10: ರಿಷಭ್ ಪಂತ್ 101, ವಾಷಿಂಗ್ಟನ್ ಸುಂದರ್ ಅಜೇಯ 96, ರೋಹಿತ್ ಶರ್ಮಾ 49, ಜೇಮ್ಸ್ ಆ್ಯಂಡರ್ಸನ್ 44ಕ್ಕೆ 3, ಬೆನ್ ಸ್ಟೋಕ್ಸ್ 89ಕ್ಕೆ 4, ಜ್ಯಾಕ್ ಲೀಚ್ 89ಕ್ಕೆ 2
ಇಂಗ್ಲೆಂಡ್ 2ನೇ ಇನ್ನಿಂಗ್ಸ್ನಲ್ಲಿ 135ಕ್ಕೆ ಆಲೌಟ್: ಡೇನಿಯಲ್ ಲಾರೆನ್ಸ್ 50, ಜೋ ರೂಟ್ 30 , ಅಕ್ಷರ್ ಪಟೇಲ್ 48ಕ್ಕೆ 5, ಅಶ್ವಿನ್ 47ಕ್ಕೆ 5