ಆಂಟಿಗುವಾ: ಏಕದಿನ ಸರಣಿಯನ್ನು 4-1ರ ಅಂತರದಲ್ಲಿ ಗೆದ್ದಿದ್ದ ಭಾರತ ಎ ತಂಡ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದು ಬೀಗಿದೆ.
ಜುಲೈ 24 ರಿಂದ ಆರಂಭವಾಗಿದ್ದ ಮೊದಲನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ ಮೊದಲ ಇನ್ನಿಂಗ್ಸ್ನಲ್ಲಿ 228 ರನ್ ಗಳಿಸಿತ್ತು. ಜರ್ಮೈನ್ ಬ್ಲಾಕ್ವುಡ್ 53, ಕಾರ್ನ್ವಲ್ 59 ರನ್ ಗಳಿಸಿದ್ದರು. ಭಾರತದ ಪರ ಶಹಬಾಜ್ ನದೀಮ್ 5 ವಿಕೆಟ್ ಹಾಗೂ ಸಿರಾಜ್ 2,ಮಾರ್ಕಂಡೆ 2 ವಿಕೆಟ್ ಪಡೆದು ಮಿಂಚಿದ್ದರು.
ಈ ಮೊತ್ತವನ್ನು ಹಿಂಬಾಲಿಸಿದ್ದ ಭಾರತ ತಂಡ ಶಿವಂ ದುಭೆ(71), ಸಹಾ(66) ಅರ್ಧಶತಕಗಳ ಬೆಂಬಲದಿಂದ 312 ರನ್ಗಳಿಸಿತ್ತು. ವಿಂಡೀಸ್ ಮಿಗುಯಲ್ ಕಮ್ಮಿನ್ಸ್ 4 ವಿಕೆಟ್ ಪಡೆದರೆ ಚೆಮರ್ ಹೋಲ್ಡರ್, ಜೊಮೆಲ್ ವಾರಿಕ್ಯಾನ್, ಕಾರ್ನವಲ್ ತಲಾ 2 ವಿಕೆಟ್ ಪಡೆದಿದ್ದರು.
84 ರನ್ಗಳ ಹಿನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ತನ್ನ ನದೀಮ್ ದಾಳಿಗೆ ತತ್ತರಿಸಿ 180 ರನ್ಗಳಿಗೆ ಸರ್ವಪತನ ಕಂಡಿತು. 53 ರನ್ಗಳಿಸಿದ ಶಮಾರ್ ಬ್ರೋಕ್ಸ್ ಗರಿಷ್ಠ ಸ್ಕೋರರ್ ಎನಿಸಿದರು. ನದೀಮ್ 5 ವಿಕೆಟ್, ಸಿರಾಜ್ 3 ಹಾಗೂ ದುಬೆ 1 ವಿಕೆಟ್ ಪಡೆದು ಮಿಂಚಿದರು.
97 ರನ್ಗಳ ಗುರಿ ಪಡೆದ ಭಾರತ ಎ ತಂಡ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಈ ವಿಜಯದೊಂದಿಗೆ 3 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ 1-0 ಯಲ್ಲಿ ಮುನ್ನಡೆ ಸಾಧಿಸಿತು.