ಮುಂಬೈ: ಮುಂದಿನ ತಿಂಗಳ ಮೊದಲ ವಾರದಲ್ಲಿ ವಿಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ನಿಗದಿತ ಓವರ್ಗಳ ಟೂರ್ನಿಗೆ ಟೀಂ ಇಂಡಿಯಾ ಪ್ರಕಟವಾಗಿದೆ.
ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ನೇತೃತ್ವದಲ್ಲಿ ನಡೆದ ತಂಡದ ಆಯ್ಕೆ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಭಾಗಿಯಾಗಿದ್ದರು.
-
The All India Senior Selection Committee met in Kolkata today to pick the squads for the upcoming tour against West Indies - An update on the teams in a bit 👍👍 #TeamIndia #INDvWI pic.twitter.com/3Hw7aM2zWj
— BCCI (@BCCI) November 21, 2019 " class="align-text-top noRightClick twitterSection" data="
">The All India Senior Selection Committee met in Kolkata today to pick the squads for the upcoming tour against West Indies - An update on the teams in a bit 👍👍 #TeamIndia #INDvWI pic.twitter.com/3Hw7aM2zWj
— BCCI (@BCCI) November 21, 2019The All India Senior Selection Committee met in Kolkata today to pick the squads for the upcoming tour against West Indies - An update on the teams in a bit 👍👍 #TeamIndia #INDvWI pic.twitter.com/3Hw7aM2zWj
— BCCI (@BCCI) November 21, 2019
ಸರಣಿಯಲ್ಲಿ ಸತತವಾಗಿ ಪಾಲ್ಗೊಂಡ ಕಾರಣದಿಂದ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾರಿಗೆ ಕೆರಬಿಯನ್ನರ ಸರಣಿಯಿಂದ ವಿಶ್ರಾಂತಿ ನೀಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇನ್ನೋರ್ವ ಆರಂಭಿಕ ಆಟಗಾರ ಶಿಖರ್ ಧವನ್ ಕಳಪೆ ಫಾರ್ಮ್ ಕಾರಣ ಕೊಕ್ ನೀಡುತ್ತಾರೆ ಎನ್ನುವ ಲೆಕ್ಕಾಚಾರಗಳಿದ್ದವು. ಆದರೆ, ಇವೆಲ್ಲವೂ ತಲೆಕೆಳಗಾಗಿದ್ದು, ಈ ಇಬ್ಬರೂ ಆಟಗಾರರು ವಿಂಡೀಸ್ ಸರಣಿಗೆ ಪ್ರಕಟವಾದ ತಂಡದಲ್ಲಿದ್ದಾರೆ.
-
ALERT🚨: #TeamIndia for the upcoming @Paytm series against West Indies announced. #INDvWI pic.twitter.com/7RJLc4MDB1
— BCCI (@BCCI) November 21, 2019 " class="align-text-top noRightClick twitterSection" data="
">ALERT🚨: #TeamIndia for the upcoming @Paytm series against West Indies announced. #INDvWI pic.twitter.com/7RJLc4MDB1
— BCCI (@BCCI) November 21, 2019ALERT🚨: #TeamIndia for the upcoming @Paytm series against West Indies announced. #INDvWI pic.twitter.com/7RJLc4MDB1
— BCCI (@BCCI) November 21, 2019
ಎರಡೂ ಮಾದರಿಗೂ ವಿರಾಟ್ ಕೊಹ್ಲಿಯೇ ನಾಯಕರಾಗಿದ್ದಾರೆ. ನಿಗದಿತ ಓವರ್ಗಳ ತಂಡಕ್ಕೆ ವೇಗಿ ಭುವನೇಶ್ವರ್ ಕುಮಾರ್ ಮರಳಿದ್ದಾರೆ. 2017ರ ಬಳಿಕ ಸದ್ಯದ ಸೆನ್ಸೇಷನಲ್ ಸೀಮರ್ ಮೊಹಮ್ಮದ್ ಶಮಿ ಟಿ-20 ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಕೇದಾರ್ ಜಾಧವ್ ಅಚ್ಚರಿಯ ಆಯ್ಕೆಯಾಗಿದ್ದು, ಸಂಜು ಸ್ಯಾಮ್ಸನ್ರನ್ನು ಕೈಬಿಡಲಾಗಿದೆ.
ಏಕದಿನ ಹಾಗೂ ಟಿ-20 ಎರಡೂ ತಂಡದಲ್ಲೂ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಆಟಗಾರರಾದ ಕೆ.ಎಲ್ ರಾಹುಲ್ ಹಾಗೂ ಮನೀಷ್ ಪಾಂಡೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಹ್ಯಾಟಿಕ್ ಹೀರೋ ದೀಪಕ್ ಚಹರ್ ಹಾಗೂ ಶಿವಂ ದುಬೆ ಹಾಗೂ ಶ್ರೇಯಸ್ ಅಯ್ಯರ್ ಎರಡೂ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಏಕದಿನ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್.ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ಕಲ್ದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್
ಟಿ-20 ತಂಡ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್