ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸಾಧಾರಣ ಪ್ರದರ್ಶನ ನೀಡಿದ್ದು ನಿಗದಿತ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ.
ಆರಂಭಿಕ ಆಟಗಾರ ಧವನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಧವನ್ ಮಿಂಚಿನ 36 ರನ್ ಸಿಡಿಸಿದರೆ, ರೋಹಿತ್ ಹಾಗೂ ಕೊಹ್ಲಿ ಆಟ ಕೇವಲ 9 ರನ್‌ಗೆ ಮುಕ್ತಾಯವಾಯಿತು.
-
Innings Break!
— BCCI (@BCCI) September 22, 2019 " class="align-text-top noRightClick twitterSection" data="
After opting to bat first, #TeamIndia post a total of 134/9 after 20 overs.
Updates - https://t.co/LcO4kVOSNZ #INDvSA pic.twitter.com/sfKMNpr4GI
">Innings Break!
— BCCI (@BCCI) September 22, 2019
After opting to bat first, #TeamIndia post a total of 134/9 after 20 overs.
Updates - https://t.co/LcO4kVOSNZ #INDvSA pic.twitter.com/sfKMNpr4GIInnings Break!
— BCCI (@BCCI) September 22, 2019
After opting to bat first, #TeamIndia post a total of 134/9 after 20 overs.
Updates - https://t.co/LcO4kVOSNZ #INDvSA pic.twitter.com/sfKMNpr4GI
ಸರಣಿಯುದ್ದಕ್ಕೂ ವೈಫಲ್ಯ ಅನುಭವಿಸಿದ ಪಂತ್ ಇಂದೂ ಸಹ ಹೇಳಿಕೊಳ್ಳುವಂತಹ ಆಟ ಪ್ರದರ್ಶಿಸಲಿಲ್ಲ. 19ರನ್ ಗಳಿಸಿ ಪಂತ್ ನಿರ್ಗಮಿಸಿದರೆ, ಶ್ರೇಯಸ್ ಅಯ್ಯರ್ ಗಳಿಕೆ ಕೇವಲ 5 ರನ್ ಮಾತ್ರ. ಕೃನಾಲ್ ಪಾಂಡ್ಯ 4, ರವೀಂದ್ರ ಜಡೇಜಾ 19, ಹಾರ್ದಿಕ್ ಪಾಂಡ್ಯ 14 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರಫೋರ್ಟಿನ್, ರಬಾಡ ಹಾಗೂ ಬ್ಯೂರೆನ್ ಹೆಂಡ್ರಿಕ್ಸ್ ತಲಾ 2 ವಿಕೆಟ್ ಪಡೆದು ಮಿಂಚಿದರು.