ಚೆನ್ನೈ: ನಾಳೆಯಿಂದ ಭಾರತ-ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭಗೊಳ್ಳಲಿದ್ದು, ಉಭಯ ತಂಡಗಳು ಕೊನೆಯ ಹಂತದ ತಯಾರಿ ನಡೆಸಿವೆ. ಚೆನ್ನೈನ ಪಿ.ಚಿದಂಬರಂ ಮೈದಾನದಲ್ಲಿ ಪಂದ್ಯ ಪ್ರಾರಂಭಗೊಳ್ಳಲಿದ್ದು, ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ದೃಷ್ಟಿಯಿಂದ ಈ ಟೂರ್ನಿ ಮಹತ್ವ ಪಡೆದುಕೊಂಡಿದೆ.
-
The hustle never stops 💪👌#TeamIndia getting match ready ahead of the first #INDvENG Test at Chepauk 🙌 pic.twitter.com/tAGyMC0uZK
— BCCI (@BCCI) February 3, 2021 " class="align-text-top noRightClick twitterSection" data="
">The hustle never stops 💪👌#TeamIndia getting match ready ahead of the first #INDvENG Test at Chepauk 🙌 pic.twitter.com/tAGyMC0uZK
— BCCI (@BCCI) February 3, 2021The hustle never stops 💪👌#TeamIndia getting match ready ahead of the first #INDvENG Test at Chepauk 🙌 pic.twitter.com/tAGyMC0uZK
— BCCI (@BCCI) February 3, 2021
ಆಸ್ಟ್ರೇಲಿಯಾ ನೆಲದಲ್ಲಿ ಗೆಲುವು ಸಾಧಿಸಿ ಟೀಂ ಇಂಡಿಯಾ ಹುಮ್ಮಸ್ಸಿನಲ್ಲಿದ್ದರೆ, ತವರು ನೆಲದಲ್ಲಿ ಭಾರತಕ್ಕೆ ಸೋಲಿನ ರುಚಿ ತೋರಿಸುವ ಇರಾದೆಯಲ್ಲಿ ಇಂಗ್ಲೆಂಡ್ ತಂಡವಿದೆ. ಭಾರತದಲ್ಲಿ ಟೆಸ್ಟ್ ಸರಣಿ ನಡೆಯುತ್ತಿರುವ ಕಾರಣ ಕೊಹ್ಲಿ ಪಡೆ ಗೆಲ್ಲುವ ನೆಚ್ಚಿನ ತಂಡವಾಗಿದೆ. 2013ರ ನಂತರ ಟೀಂ ಇಂಡಿಯಾ ತವರು ನೆಲದಲ್ಲಿ ಟೆಸ್ಟ್ ಸರಣಿ ಸೋತಿಲ್ಲ. ಆದರೆ 2012/13ರಲ್ಲಿ ಅಲಸ್ಟೇರ್ ಕುಕ್ ನೇತೃತ್ವದ ತಂಡದ ವಿರುದ್ಧ 2-1 ಅಂತರದಲ್ಲಿ ಸರಣಿ ಕೈಚೆಲ್ಲಿತ್ತು.
ಟೀಂ ಇಂಡಿಯಾ ಸಂಭವನೀಯ 11ರ ಬಳಗ
ವಿರಾಟ್ ಕೊಹ್ಲಿ(ಕ್ಯಾಪ್ಟನ್), ಶುಬ್ಮನ್ ಗಿಲ್, ರೋಹಿತ್ ಶರ್ಮಾ,ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್,ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ,ಆರ್.ಅಶ್ವಿನ್, ಇಶಾಂತ್ ಶರ್ಮಾ
-
Close catching practice for @benstokes38 and @roryburns17 in Chennai 🇮🇳👐 pic.twitter.com/aZwj1TvI4W
— England Cricket (@englandcricket) January 31, 2021 " class="align-text-top noRightClick twitterSection" data="
">Close catching practice for @benstokes38 and @roryburns17 in Chennai 🇮🇳👐 pic.twitter.com/aZwj1TvI4W
— England Cricket (@englandcricket) January 31, 2021Close catching practice for @benstokes38 and @roryburns17 in Chennai 🇮🇳👐 pic.twitter.com/aZwj1TvI4W
— England Cricket (@englandcricket) January 31, 2021
ಇಂಗ್ಲೆಂಡ್ ಕೂಡ ಬಲಿಷ್ಠವಾಗಿದ್ದು, ಟೆಸ್ಟ್ ಸರಣಿ ಗೆದ್ದು ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಲಗ್ಗೆ ಹಾಕುವ ಕನಸು ಕಾಣುತ್ತಿದೆ. ಹೀಗಾಗಿ ತಂಡದಲ್ಲಿ ಸ್ಟುವರ್ಟ್ ಬ್ರಾಂಡ್, ರೂಟ್,ಜೋಪ್ರಾ ಆರ್ಚರ್,ಜೆಮ್ಸ್ ಆಂಡರ್ಸನ್,ಓಲಿ ಪೊಪ್ರಂತಹ ಆಟಗಾರರು ಕಣಕ್ಕಿಳಿಯಲಿದ್ದಾರೆ.
ಇಂಗ್ಲೆಂಡ್ ಪ್ಲೇಯರ್ಸ್
ಜೊ ರೂಟ್(ಕ್ಯಾಪ್ಟನ್) ಮೊಯಿನ್ ಅಲಿ, ಡೊಮ್ ಬಿಸ್, ಸ್ಟುವರ್ಡ್ ಬ್ರಾಂಡ್, ರೊರಿ ಬುರ್ನ್ಸ್, ಜಾಸ್ ಬಟ್ಲರ್, ಜಾಕ್ ಕ್ರಿವ್ಲಿ, ಬೆನ್ ಫಾಕಿಸ್, ಡಾನ್ ಲ್ವಾರೆನ್ಸ್, ಜಾಕ್ ಲೆಚ್, ಬೆನ್ ಸ್ಟೋಕ್, ಒಲಿ ಸ್ಟೋನಿ, ಡೊಮ್ ಸಿಬ್ಲಿ, ಕ್ರಿಸ್ ವೊಕ್ಸ್, ಜೋಪ್ರಾ ಆರ್ಚರ್, ಜೆಮ್ಸ್ ಆಂಡರ್ಸನ್