ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್ನಲ್ಲಿ ನಡೆದ ಈ ಪಂದ್ಯ ಕೇವಲ ಎರಡೇ ದಿನದಲ್ಲಿ ಅಂತ್ಯಗೊಂಡಿದ್ದು, 4 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.
ಇಂಗ್ಲೆಂಡ್ ನೀಡಿದ 49 ರನ್ಗಳ ಸಾಧಾರಣ ಗುರಿಯನ್ನು ಭಾರತ ತಂಡ ಕೇವಲ 7.4 ಓವರ್ಗಳಲ್ಲಿ ತಲುಪುವ ಮೂಲಕ 10 ವಿಕೆಟ್ಗಳ ಜಯ ಸಾಧಿಸಿದೆ. ರೋಹಿತ್ ಶರ್ಮಾ 25 ಎಸೆತಗಳಲ್ಲಿ 25 ರನ್ ಸಿಡಿಸಿದರೆ, ಶುಬ್ಮನ್ ಗಿಲ್ 21 ಎಸೆತಗಳಲ್ಲಿ 15 ರನ್ ಗಳಿಸಿದರು.
-
India win 🎉
— ICC (@ICC) February 25, 2021 " class="align-text-top noRightClick twitterSection" data="
They have taken a 2-1 lead in the Test series after defeating England by 10 wickets in Ahmedabad.#INDvENG ➡️ https://t.co/0unCGV6iLi pic.twitter.com/qK1SLJA3x4
">India win 🎉
— ICC (@ICC) February 25, 2021
They have taken a 2-1 lead in the Test series after defeating England by 10 wickets in Ahmedabad.#INDvENG ➡️ https://t.co/0unCGV6iLi pic.twitter.com/qK1SLJA3x4India win 🎉
— ICC (@ICC) February 25, 2021
They have taken a 2-1 lead in the Test series after defeating England by 10 wickets in Ahmedabad.#INDvENG ➡️ https://t.co/0unCGV6iLi pic.twitter.com/qK1SLJA3x4
ಇದಕ್ಕೂ ಮುನ್ನ 33 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಅಕ್ಷರ್ ಪಟೇಲ್ ಮತ್ತು ಅಶ್ವಿನ್ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 81 ರನ್ಗಳಿಗೆ ಆಲೌಟ್ ಆಗಿತ್ತು.
ಡೊಮೆನಿಕ್ ಸಿಬ್ಲೀ 7, ಸ್ಟೋಕ್ಸ್ 25, ನಾಯಕ ಜೋ ರೂಟ್ 19, ಒಲಿ ಪೋಪ್ 12, ಬೆನ್ ಫೋಕ್ಸ್ 8, ಜ್ಯಾಕ್ ಲೀಚ್ 9, ಕ್ರಾಲೆ, ಬೈರ್ಸ್ಟೋವ್, ಜೇಮ್ಸ್ ಆ್ಯಂಡರ್ಸನ್ ಮತ್ತು ಜೋಫ್ರಾ ಆರ್ಚರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ತಂಡ 30.4 ಓವರ್ಗಳಲ್ಲಿ 81ಕ್ಕೆ ಸರ್ವಪತನಗೊಂಡು ಭಾರತಕ್ಕೆ ಕೇವಲ 49 ರನ್ಗಳ ಅಲ್ಪ ಮೊತ್ತದ ಟಾರ್ಗೆಟ್ ನೀಡಿತ್ತು.
ಅಕ್ಸರ್ ಪಟೇಲ್ 31 ರನ್ ನೀಡಿ 5 ವಿಕೆಟ್ ಪಡೆದರೆ, ಅಶ್ವಿನ್ 38 ರನ್ ನೀಡಿ 4 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ 1 ರನ್ ನೀಡಿ 1 ವಿಕೆಟ್ ಪಡೆದರು.