ETV Bharat / sports

ಭಾರತ - ಇಂಗ್ಲೆಂಡ್​ ಪಿಂಕ್​ ಬಾಲ್ ಟೆಸ್ಟ್​ ಮಿಸ್​ ಮಾಡಿಕೊಳ್ಳುತ್ತೇನೆ ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ - ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಗಲು ರಾತ್ರಿ ಟೆಸ್ಟ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಗಲು ರಾತ್ರಿ ಟೆಸ್ಟ್ (ಪಿಂಕ್​ ಬಾಲ್​) ಗುಜರಾತ್​ನ ಮೊಟೆರಾ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಲಿದೆ. ಈ ಪಂದ್ಯವನ್ನು ನಾನು ಮಿಸ್​ ಮಾಡಿಕೊಳ್ಳುತ್ತೇನೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

Ind vs Eng, 3rd Test:
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
author img

By

Published : Feb 24, 2021, 2:22 PM IST

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯವನ್ನು ನಾನು ಮಿಸ್​ ಮಾಡಿಕೊಳ್ಳಲಿದ್ದೇನೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಗಲು ರಾತ್ರಿ ಟೆಸ್ಟ್ (ಪಿಂಕ್​ ಬಾಲ್​) ಗುಜರಾತ್​ನ ಮೊಟೆರಾ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಲಿದೆ. ಮೊಟೆರಾ ಈಗ 1,10,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ.

  • Will miss being at the stadium today ..what an effort it must have been to create this ..pink test was our dream and it's going be the 2nd one in india.hope to see full stands like last time. Under the leadership of Honble Prime minister @narendramodi Amit Shah @AmitShah .. pic.twitter.com/za7vdYHTN0

    — Sourav Ganguly (@SGanguly99) February 24, 2021 " class="align-text-top noRightClick twitterSection" data=" ">

"ಇಂದಿನ ಪಂದ್ಯವನ್ನು ನಾನು ಮಿಸ್​ ಮಾಡಿಕೊಳ್ಳಲಿದ್ದೇನೆ. ಪಿಂಕ್ ಬಾಲ್​ ಟೆಸ್ಟ್​ ನನ್ನ ಕನಸಾಗಿತ್ತು. ಈ ಪಂದ್ಯ ಭಾರತದಲ್ಲಿ 2ನೇ ಬಾರಿ ನಡೆಯುತ್ತಿದೆ. ಇನ್ನು ಈ ಪಂದ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ವೀಕ್ಷಿಸುವ ಭರವಸೆಯಿದೆ" ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ.

ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣವು ಅಂಡಾಕಾರವಾಗಿದೆ. ಇಲ್ಲಿನ ನೆಲದ ಮೇಲೆ ಒಟ್ಟು 11 ಪಿಚ್‌ಗಳಿವೆ. ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ ಆತ್ಮವಿಶ್ವಾಸ ಹೆಚ್ಚಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡವು ಪಿಂಕ್​ ಟೆಸ್ಟ್​ನಲ್ಲಿ ಗೆಲುವಿನ ನಗೆ ಬೀರುವ ವಿಶ್ವಾಸವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.