ಸಿಡ್ನಿ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 200 ರನ್ ಕೂಡ ಗಳಿಸುವುದಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಟ್ವಿಟರ್ನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪಾಂಟಿಂಗ್ "ಈ ಸಮಯದಲ್ಲಿ ಆಸ್ಟ್ರೇಲಿಯಾ ಮುನ್ನೂರು ರನ್ಗಳಿಗೂ ಹೆಚ್ಚು ಮುನ್ನಡೆ ಸಾಧಿಸಿದೆ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 200 ರನ್ ಗಳಿಸುವುದಿಲ್ಲ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ." ಎಂದಿದ್ದಾರೆ.
-
310 ahead at the moment, but I honestly think India won't make 200 in the second innings #AskRicky https://t.co/jLh01HCV7P
— 7Cricket (@7Cricket) January 10, 2021 " class="align-text-top noRightClick twitterSection" data="
">310 ahead at the moment, but I honestly think India won't make 200 in the second innings #AskRicky https://t.co/jLh01HCV7P
— 7Cricket (@7Cricket) January 10, 2021310 ahead at the moment, but I honestly think India won't make 200 in the second innings #AskRicky https://t.co/jLh01HCV7P
— 7Cricket (@7Cricket) January 10, 2021
ಪಿಂಕ್ ಟೆಸ್ಟ್ನ ಮೂರನೇ ದಿನ, ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವನ್ನು 244 ರನ್ ಗಳಿಗೆ ಕಟ್ಟಿಹಾಕಿತು. ಇದರ ಪರಿಣಾಮವಾಗಿ ಆತಿಥೇಯರು 94 ರನ್‌ಗಳ ಮುನ್ನಡೆ ಸಾಧಿಸಿದ್ದರು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಲಾಬುಶೇನ್, ಸ್ಮಿತ್ ಮತ್ತು ಗ್ರೀನ್ ಅವರ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ನಾಲ್ಕು ನೂರಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಿದೆ.