ಮೆಲ್ಬೋರ್ನ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ವಿರುದ್ಧ ಸೋಮವಾರ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಗಾಯಗೊಂಡಿದ್ದ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಭಾರತಕ್ಕೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಮೇಶ್ ಯಾದವ್ ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆಗೆ ಚೇತರಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ ಎಂದು ಮೂಲಗಳು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿವೆ.
ಉಮೇಶ್ ಯಾದವ್ ಅವರ ಸ್ಕ್ಯಾನಿಂಗ್ ರಿಪೋರ್ಟ್ ಬಂದ ಬಳಿಕ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಮೂರು ಮತ್ತು ನಾಲ್ಕನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಯಿತು. ಆದ್ದರಿಂದ, ಅವರನ್ನು ತಡೆಹಿಡಿಯುವಲ್ಲಿ ಯಾವುದೇ ಅರ್ಥವಿಲ್ಲ ಮತ್ತು ಅವರು ದೇಶಕ್ಕೆ ಮರಳುವುದು ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಚೇತರಿಕೆ ಕಾಣುವುದು ಉತ್ತಮವೆಂದು ಪರಿಗಣಿಸಲಾಗಿದ್ದು, ಬುಧವಾರ ರಾತ್ರಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ಹಿಂದಿರುಗಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಸೀಮಿತ ಓವರ್‌ಗಳ ಸರಣಿಯಲ್ಲಿ ಅದ್ಭುತ ಸ್ಪೆಲ್ ಮಾಡಿದ್ದ ವೇಗಿ ಟಿ.ನಟರಾಜನ್ ಉಮೇಶ್ ಯಾದವ್ ಬದಲಿಗೆ ಟೆಸ್ಟ್ ತಂಡ ಸೇರಿಕೊಳ್ಳಬಹುದು.
ಓದಿ: ಭಾರತ-ಆಸ್ಟ್ರೇಲಿಯಾ ವನಿತೆಯರ ಏಕದಿನ ಕ್ರಿಕೆಟ್ ಸರಣಿ ಮುಂದೂಡಿಕೆ
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಮೂರನೇ ದಿನ ಬೌಲಿಂಗ್ ಮಾಡುವಾಗ ಉಮೇಶ್ ಯಾದವ್ ಸ್ನಾಯು ನೋವಿನ ಕಾರಣ ಮೈದಾನದಿಂದ ಹೊರ ನಡೆದಿದ್ದರು. ಆದಾಗ್ಯೂ ಉತ್ತಮವಾಗಿ ಸ್ಪೆಲ್ ಮಾಡಿದ್ದ ಬೌಲರ್ಗಳು ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟಿದ್ದರು.
ಟೀಂ ಇಂಡಿಯಾಕ್ಕೆ ಈಗಾಗಲೆ ಅನುಭವಿ ವೇಗಿ ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಅವರ ಅಲಭ್ಯತೆ ಕಾಡುತ್ತಿದ್ದು, ಇದೀಗ ಉಮೇಶ್ ಯಾದವ್ ಕೂಡ ಸರಣಿಯ ಮಂದಿನ ಮಹತ್ವದ ಪಂದ್ಯಕ್ಕೆ ಲಭ್ಯವಿರುವುದಿಲ್ಲ.