ETV Bharat / sports

ಭಾರತೀಯರಿಗೆ ಕಾಡುತ್ತಿದೆ ಇಂಜುರಿ ಭೂತ: ಗಾಯಾಳುಗಳು ಫಿಟ್​ ಆಗದಿದ್ರೆ 4ನೇ ಪಂದ್ಯಕ್ಕೆ ಟೀಂ ಇಂಡಿಯಾ ಪರಿಸ್ಥಿತಿ?

ಆಸೀಸ್​ ಪ್ರವಾಸಕ್ಕೂ ಮೊದಲು 2018-19ರಲ್ಲಿ ಟೆಸ್ಟ್​ ಸರಣಿ ಗೆಲ್ಲಲು ಪ್ರಮುಖ ಕಾರಣರಾಗಿದ್ದ ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್​ ಐಪಿಎಲ್ ವೇಳೆ ಗಾಯಗೊಂಡು ಪ್ರವಾಸದಿಂದಲೇ ಹೊರಬಿದ್ದರು. ನಂತರ ಟೆಸ್ಟ್​ ಸರಣಿ ಆರಂಭದಲ್ಲಿ ಮೊಹಮ್ಮದ್​ ಶಮಿ, ನಂತರ ಉಮೇಶ್​ ಯಾದವ್​ ಕೂಡ ಗಾಯಕ್ಕೆ ಒಳಗಾಗಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ.

Team India's injury concern
ಭಾರತ ತಂಡದ ಆಟಗಾರರಿಗೆ ಗಾಯ
author img

By

Published : Jan 9, 2021, 4:13 PM IST

ಸಿಡ್ನಿ: ಸುದೀರ್ಘ ವಿಶ್ರಾಂತಿ ಬಳಿಕ ತನ್ನ ಮೊದಲ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತಕ್ಕೆ ಗಾಯದ ಸಮಸ್ಯೆ ಬೆಂಬಿಡದ ಭೂತವಾಗಿ ಕಾಡುತ್ತಿದೆ. ಸರಣಿಗೂ ಮೊದಲೇ ಟಾಪ್​ ಆಟಗಾರರು ಇಂಜುರಿಗೆ ತುತ್ತಾದರೆ, ಇದೀಗ ತಂಡದಲ್ಲಿರುವ ಆಟಗಾರರು ಒಬ್ಬಬ್ಬರಾಗಿ ಗಾಯದ ಪಟ್ಟಿಗೆ ಸೇರಿಕೊಳ್ಳುತ್ತಿರುವುದು ಟೀಮ್ ಇಂಡಿಯಾಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಆಸೀಸ್​ ಪ್ರವಾಸಕ್ಕೂ ಮೊದಲು 2018-19ರಲ್ಲಿ ಟೆಸ್ಟ್​ ಸರಣಿ ಗೆಲ್ಲಲು ಪ್ರಮುಖ ಕಾರಣರಾಗಿದ್ದ ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್​ ಐಪಿಎಲ್ ವೇಳೆ ಗಾಯಗೊಂಡು ಪ್ರವಾಸದಿಂದಲೇ ಹೊರಬಿದ್ದರು. ನಂತರ ಟೆಸ್ಟ್​ ಸರಣಿ ಆರಂಭದಲ್ಲಿ ಮೊಹಮ್ಮದ್​ ಶಮಿ, ನಂತರ ಉಮೇಶ್​ ಯಾದವ್​ ಕೂಡ ಗಾಯಕ್ಕೆ ಒಳಗಾಗಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ.

3ನೇ ಟೆಸ್ಟ್​ಗೂ ಮುನ್ನ ಟೆಸ್ಟ್​ ಕ್ರಿಕೆಟ್​ಗೆ ಮರಳಲು ಕಾಯುತ್ತಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಅಭ್ಯಾಸದ ವೇಳೆ ಮಣಿಕಟ್ಟು ಗಾಯಕ್ಕೆ ಒಳಗಾಗಿ 3 ವಾರಗಳ ಕಾಲ ವಿಶ್ರಾಂತಿಗೆ ತೆರಳಿದ್ದಾರೆ. ಅರ್ಧ ತಂಡದಷ್ಟು ಮಂದಿಯನ್ನು ಈಗಾಗಲೇ ಕಳೆದುಕೊಂಡಿರುವ ಭಾರತ ತಂಡಕ್ಕೆ 3ನೇ ಟೆಸ್ಟ್​ನ 3ನೇ ದಿನ ಮತ್ತಿಬ್ಬರು ಟಾಪ್​ ಪ್ಲೇಯರ್​ಗಳು ಬ್ಯಾಟಿಂಗ್ ನಡೆಸುವಾಗ ಗಾಯಗೊಂಡಿದ್ದಾರೆ.

ಪ್ಯಾಟ್​ ಕಮ್ಮಿನ್ಸ್​ ಬೌಲಿಂಗ್​ನಲ್ಲಿ ಮೊಣಕೈಗೆ ಪೆಟ್ಟು ತಿಂದಿರುವ ರಿಷಭ್ ಪಂತ್ ಮತ್ತು ಸ್ಟಾರ್ಕ್​ ಬೌಲಿಂಗ್​ನಲ್ಲಿ ಹೆಬ್ಬೆರಳ ಗಾಯಕ್ಕೆ ಒಳಗಾಗಿರುವ ಜಡೇಜಾ ಮೈದಾನದಿಂದ ಹೊರಗುಳಿದಿದ್ದಾರೆ. ಇವರಿಬ್ಬರು ಸ್ಕಾನಿಂಗ್​ಗಾಗಿ ತೆರಳಿದ್ದಾರೆಂದು ಬಿಸಿಸಿಐ ತಿಳಿಸಿದೆ.

ಒಂದು ವೇಳೆ ಇವರಿಬ್ಬರು ತಂಡದಿಂದ ಹೊರಬಿದ್ದರೆ ಭಾರತ ತಂಡಕ್ಕೆ 2ನೇ ಇನ್ನಿಂಗ್ಸ್​ ವೇಳೆ ಕೇವಲ 9 ಮಂದಿ ಬ್ಯಾಟ್ಸ್​ಮನ್​ಗಳು ಮಾತ್ರ ಬ್ಯಾಟಿಂಗ್ ಮಾಡಬೇಕಾದ ಒತ್ತಡದಕ್ಕೆ ಸಿಲುಕಲಿದೆ.

ಪಂತ್​ ಗಾಯದಿಂದ ಚೇತರಿಸಿಕೊಳ್ಳದಿದ್ದರೆ ವೃದ್ಧಿಮಾನ್​ ಸಹಾ ಅವರೇ 4ನೇ ಟೆಸ್ಟ್​ ಪಂದ್ಯಕ್ಕೆ ವಿಕೆಟ್ ಕೀಪರ್​ ಜವಾಬ್ದಾರಿ ನಿರ್ವಹಿಸಬಹುದು. ಆದ್ರೆ ರವೀಂದ್ರ ಜಡೇಜಾ ಅವರ ಸ್ಥಾನ ತುಂಬಬಲ್ಲ ಆಟಗಾರ ಟೀಮ್​ ಇಂಡಿಯಾದಲ್ಲಿ ಯಾರೂ ಇಲ್ಲದಿರುವುದು ಟೀಮ್​ ಮ್ಯಾನೇಜ್​ಮೆಂಟ್​ಗೆ ತಲೆನೋವು ತರಿಸಿದೆ.

ಇದನ್ನು ಓದಿ: ಆಸೀಸ್​ಗೆ ಲಾಬುಶೇನ್, ಸ್ಮಿತ್ ಆಸರೆ: ದಿನಾಂತ್ಯಕ್ಕೆ 197 ರನ್ ಮುನ್ನಡೆ ಸಾಧಿಸಿದ ಕಾಂಗರೂ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.