ETV Bharat / sports

ಆಸೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ರೋಹಿತ್ ಭಾಗಿ ಸಾಧ್ಯತೆ: ಪ್ರತ್ಯೇಕವಾಗಿ ಪ್ರಯಾಣಿಸಲಿದ್ದಾರೆ ಹಿಟ್​ಮ್ಯಾನ್ - ಆಸ್ಟ್ರೇಲಿಯಾಕ್ಕೆ ರೋಹಿತ್ ಶರ್ಮಾ

ಆಸೀಸ್ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ರೋಹಿತ್ ಶರ್ಮಾ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಪ್ರತ್ಯೇಕವಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Rohit Sharma
ರೋಹಿತ್ ಶರ್ಮಾ
author img

By

Published : Nov 9, 2020, 12:33 PM IST

ನವದೆಹಲಿ: ಕ್ಯಾಪ್ಟನ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜನವರಿಯ ಮೊದಲ ವಾರದಲ್ಲಿ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಹಿನ್ನೆಲೆ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಅಥವಾ ಮೂರು ಟೆಸ್ಟ್​ಗಳನ್ನು ಆಡುವುದು ಅನುಮಾನವಾಗಿದ್ದು, ರೋಹಿತ್ ಶರ್ಮಾ ಟೆಸ್ಟ್ ತಂಡ ಕೂಡಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.

ಕೊಹ್ಲಿ ಅಲಭ್ಯತೆ ಹಿನ್ನೆಲೆ ರೋಹಿತ್ ಶರ್ಮಾ ಟೀಂ ಇಂಡಿಯಾದ ಸೇರಿಕೊಳ್ಳಲಿದ್ದು, ಟೆಸ್ಟ್​ ಸರಣಿಯಲ್ಲಿ ಮಾತ್ರ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. "ಅವರು ಖಂಡಿತವಾಗಿಯೂ ಆಸ್ಟ್ರೇಲಿಯಾ ಸರಣಿಯ ಭಾಗವಾಗುತ್ತಾರೆ. ಆದರೆ ಟೆಸ್ಟ್‌ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್​ ಅವಧಿ ಬಗ್ಗೆ ಗೊತ್ತಿಲ್ಲ, ಆದರೆ ಸಮಯಕ್ಕೆ ಸರಿಯಾಗಿ ಲಭ್ಯರಾಗಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.

2 ವಾರಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಮೂರು ಮಾದರಿಯ ಕ್ರಿಕೆಟ್​ಗೂ ಆಯ್ಕೆ ಸಮಿತಿ ತಂಡವನ್ನು ಘೋಷಿಸಿತ್ತು. ಆದರೆ, ರೋಹಿತ್ ಶರ್ಮಾರನ್ನು ತಂಡದಿಂದ ಕೈಬಿಡಲಾಗಿತ್ತು. ನವೆಂಬರ್ 12 ರಂದು ಟೀಂ ಇಂಡಿಯಾ ಆಟಗಾರರು ಆಸೀಸ್​ಗೆ ಪ್ರಯಾಣ ಬೆಳೆಸಲಿದ್ದು, ರೋಹಿತ್ ಶರ್ಮಾ ಪ್ರತ್ಯೇಕವಾಗಿ ಪ್ರಯಾಣ ಬೆಳೆಸಲಿದ್ದಾರೆ ಎಂದು ಹೇಳಲಾಗ್ತಿದೆ.

ನವೆಂಬರ್​ 27ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಅಭಿಯಾನ ಜನವರಿ 19ಕ್ಕೆ ಮುಕ್ತಾಯವಾಗಲಿದೆ. ಮೂರು ತಿಂಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ, 3 ಪಂದ್ಯಗಳ ಏಕದಿನ, ಟಿ20 ಸರಣಿಯನ್ನಾಡಲಿದೆ. ನಂತರ ಡಿಸೆಂಬರ್ 17ರಿಂದ 4 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಜನವರಿ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.