ETV Bharat / sports

'ತವರಿನಲ್ಲಿ ಭಾರತದ ವಿರುದ್ಧ ಆಡುವುದು ವಿಶ್ವದ ಯಾವುದೇ ತಂಡಕ್ಕಾದರೂ ದೊಡ್ಡ ಸವಾಲು' - ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ

ತವರಿನಲ್ಲಿ ಭಾರತ ತಂಡವನ್ನು ಎದುರಿಸುವುದು ದೊಡ್ಡ ಸವಾಲಿನ ಕೆಲಸ ಎಂದು ಆಸೀಸ್​ ವೇಗಿ ಕೇನ್ ರಿಚರ್ಡ್‌ಸನ್ ಹೇಳಿದ್ದಾರೆ.

Kane Richardson latest news,ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ
ಕೇನ್ ರಿಚರ್ಡ್‌ಸನ್
author img

By

Published : Jan 12, 2020, 8:14 PM IST

Updated : Jan 12, 2020, 9:34 PM IST

ಮುಂಬೈ: ಭಾರತದಲ್ಲಿ ಟೀಂ ಇಂಡಿಯಾ ವಿರುದ್ಧ ಆಡುವುದು ವಿಶ್ವದ ಯಾವುದೇ ತಂಡಕ್ಕಾದರೂ ದೊಡ್ಡ ಸವಾಲು ಎಂದು ಆಸೀಸ್ ವೇಗಿ ಕೇನ್ ರಿಚರ್ಡ್‌ಸನ್ ಹೇಳಿದ್ದಾರೆ.

ಮಂಗಳವಾರದಿಂದ ಆರಂಭವಾಗಲಿರುವ ಏಕದಿನ ಸರಣಿ ಕುರಿತು ಮಾತನಾಡಿರುವ ರಿಚರ್ಡ್‌ಸನ್​, ಭಾರತಕ್ಕೆ ಬಂದು ಟೀಂ ಇಂಡಿಯಾ ವಿರುದ್ಧ ಆಟವಾಡುವುದು ದೊಡ್ಡ ಸವಾಲು. ಇಲ್ಲಿನ ಪಿಚ್​ಗಳು ಭಿನ್ನವಾಗಿವೆ, ಆದರೆ ನಾವು ಸವಾಲಿಗೆ ಸಿದ್ಧರಿದ್ದೇವೆ, ಭಾರತ ತಂಡವನ್ನ ಹೇಗೆ ಕಟ್ಟಿಹಾಕಬಹುದು ಎಂಬ ದಾರಿಯನ್ನು ಕಂಡುಹಿಡಿಯುತ್ತೇವೆ ಎಂದಿದ್ದಾರೆ.

ಕೇನ್ ರಿಚರ್ಡ್‌ಸನ್, ಆಸ್ಟ್ರೇಲಿಯಾ ತಂಡದ ವೇಗಿ

ನಿನ್ನೆ ಮೈದಾನಕ್ಕಿಳಿದ ನಾವು ಇಲ್ಲಿನ ಪಿಚ್​ಗಳು ಹೇಗೆ ವರ್ತಿಸುತ್ತವೆ ಎಂದು ತಿಳಿದಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಏಕದಿನ ಪಂದ್ಯಕ್ಕೂ ಟಿ-20 ಪಂದ್ಯಕ್ಕೂ ಸ್ವಲ್ಪ ವ್ಯತ್ಯಾಸ ಇದೆ ಅಷ್ಟೆ. ಟಿ-20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ಗುರಿ ಹೊಂದಿರುವ ನಾನು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದೇನೆ ಎಂದಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯ ಜನವರಿ 14ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜ.17ಕ್ಕೆ ರಾಜ್​ಕೋಟ್​ ಮತ್ತು ಮೂರನೇ ಪಂದ್ಯ ಜ.19ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.

Intro:Body:Conclusion:
Last Updated : Jan 12, 2020, 9:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.