ಸಿಡ್ನಿ(ಆಸ್ಟ್ರೇಲಿಯಾ): ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿದ್ದ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಅವರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ಅವರ ಎಸೆತದಿಂದ ಮೊಣಕೈಗೆ ಪೆಟ್ಟು ಬಿದ್ದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಪಂತ್ ಅವರಿಗೆ ಇನ್ನೂ ಸ್ವಲ್ಪ ನೋವು ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಚೆಲ್ ಸ್ಟಾರ್ಕ್ ಎಸೆತದಿಂದ ಎಡಗೈಗೆ ಪೆಟ್ಟು ಬಿದ್ದ ನಂತರ ಆಲ್‌ರೌಂಡರ್ ಜಡೇಜಾ ಚಿಕಿತ್ಸೆ ಪಡೆಯುತ್ತಿದ್ದಾರೆ.
-
A bit of extra tape for Jadeja's injured thumb 👎 #AUSvIND pic.twitter.com/9LIkM19vx8
— cricket.com.au (@cricketcomau) January 9, 2021 " class="align-text-top noRightClick twitterSection" data="
">A bit of extra tape for Jadeja's injured thumb 👎 #AUSvIND pic.twitter.com/9LIkM19vx8
— cricket.com.au (@cricketcomau) January 9, 2021A bit of extra tape for Jadeja's injured thumb 👎 #AUSvIND pic.twitter.com/9LIkM19vx8
— cricket.com.au (@cricketcomau) January 9, 2021
ಭಾನುವಾರ ಮುಂಜಾನೆ ಬಿಸಿಸಿಐ ನೀಡಿದ ಹೇಳಿಕೆಯಲ್ಲಿ, "ರಿಷಭ್ ಪಂತ್ ಅವರ ಮೊಣಕೈಯಲ್ಲಿ ಇನ್ನೂ ಸ್ವಲ್ಪ ನೋವು ಇದೆ. ಪ್ರಸ್ತುತ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರವೀಂದ್ರ ಜಡೇಜಾ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿದೆ." ಎಂದು ಹೇಳಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿ ರನ್ಔಟ್ ಮಾಡಿದ್ದ ಎಡಗೈ ಸ್ಪಿನ್ನರ್ ಜಡೇಜಾ ಎರಡನೇ ಇನ್ನಿಂಗ್ಸ್‌ನಲ್ಲಿ ಇನ್ನೂ ಕೂಡ ಬೌಲಿಂಗ್ ಮಾಡಿಲ್ಲ. ಅಲ್ಲದೆ ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿರಬಹುದು.
ಇತ್ತ ರಿಷಭ್ ಪಂತ್ ಕೂಡ ಮೈದಾನದಲ್ಲಿ ಕಾಣಿಸಕೊಂಡಿಲ್ಲ. ಅವರ ಬದಲಿಗೆ ವೃದ್ಧಿಮಾನ್ ಸಹಾ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.