ETV Bharat / sports

'ಈ ವಿಶೇಷ ದಿನ ಎಂದೆಂದೂ ನೆನಪಿನಲ್ಲಿ ಉಳಿಯುತ್ತೆ': ಅಭಿಮಾನಿಗಳಿಗೆ ಸುಂದರ್ ಧನ್ಯವಾದ - ವಾಷಿಂಗ್ಟನ್ ಸುಂದರ್ ಅರ್ಧಶತಕ

ವಾಷಿಂಗ್ಟನ್ ಸುಂದರ್ ಆಟಕ್ಕೆ ಮನ ಸೋತ ಹಲವಾರು ಅಭಿಮಾನಿಗಳು ಮತ್ತು ಟೀಂ ಇಂಡಿಯಾ ಹಾಲಿ ಮತ್ತು ಮಾಜಿ ಆಟಗಾರರು ಮೆಚ್ಚುಗೆ ಸೂಚಿಸಿದ್ದು, ಪ್ರೀತಿ ಪಾತ್ರರ ಶುಭಾಶಯಕ್ಕೆ ಸುಂದರ್ ಧನ್ಯವಾದ ತಿಳಿಸಿದ್ದಾರೆ.

Washington Sundar
ವಾಷಿಂಗ್ಟನ್ ಸುಂದರ್
author img

By

Published : Jan 18, 2021, 7:22 AM IST

ಬ್ರಿಸ್ಬೇನ್ (ಆಸ್ಟ್ರೇಲಿಯಾ): ನಾಲ್ಕನೇ ಟೆಸ್ಟ್‌ನ ಮೂರನೇ ದಿನದಂದು ಆಸ್ಟ್ರೇಲಿಯಾ ವಿರುದ್ಧ ಮಿಂಚಿದ ಟೀಂ ಇಂಡಿಯಾ ಆಲ್​ರೌಂಡ್ ಆಟಗಾರ ವಾಷಿಂಗ್ಟನ್ ಸುಂದರ್ ಇದು ಬಹಳ ವಿಶೇಷ ದಿನ ಎಂದು ಹೇಳಿದ್ದು, ಅಭಿಮಾನಿಗಳ ಪ್ರೀತಿ ಮತ್ತು ಶುಭಾಶಯಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಭಾನುವಾರ ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ ಶಾರ್ದುಲ್ ಠಾಕೂರ್ ಮತ್ತು ಸುಂದರ್ ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ರು. ಚೊಚ್ಚಲ ಪಂದ್ಯದಲ್ಲಿ ಆಸೀಸ್ ಬೌಲರ್​ಗಳ ಬೆವರಿಳಿಸಿದ ಸುಂದರ್ ಅರ್ಧಶತಕ ಸಿಡಿಸಿದ್ರು. ವಾಷಿಂಗ್ಟನ್ ಸುಂದರ್ ಆಟಕ್ಕೆ ಮನ ಸೋತ ಹಲವಾರು ಅಭಿಮಾನಿಗಳು ಮತ್ತು ಟೀಂ ಇಂಡಿಯಾ ಹಾಲಿ ಮತ್ತು ಮಾಜಿ ಆಟಗಾರರು ಮೆಚ್ಚುಗೆ ಸೂಚಿಸಿದ್ರು.

ಈ ಬಗ್ಗೆ ಟ್ವೀಟ್ ಮಾಡಿರುವ ಸುಂದರ್,"ಎಲ್ಲಾ ಪ್ರೀತಿ, ಪ್ರಾರ್ಥನೆ ಮತ್ತು ಶುಭಾಶಯಗಳಿಗೆ ತುಂಬಾ ಧನ್ಯವಾದಗಳು. ಇದು ನಿಜಕ್ಕೂ ಬಹಳ ವಿಶೇಷ ದಿನ ಯಾವಾಗಲೂ ನೆನಪಿನಲ್ಲಿ ಉಳಿಯುವ ದಿನ" ಎಂದಿದ್ದಾರೆ.

7ನೇ ವಿಕೆಟ್​ಗೆ ಜೊತೆಯಾದ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಭಾರತದ ಸ್ಕೋರ್ ಹೆಚ್ಚಿಸಿದರು. ಆಸೀಸ್ ಬೌಲರ್​ಗಳ ಬೆವರಿಳಿಸಿದ ಈ ಜೋಡಿ 7ನೇ ವಿಕೆಟ್​ಗೆ 123ರನ್ ಒಟ್ಟುಗೂಡಿಸಿ, ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.