ETV Bharat / sports

ಟೆಸ್ಟ್ ಕ್ರಿಕೆಟ್​ಗೆ ನಟರಾಜನ್, ಸುಂದರ್ ಪದಾರ್ಪಣೆ: ಆಸೀಸ್​ಗೆ ಆರಂಭಿಕ ಆಘಾತ

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕಾಂಗರೂ ಪಡೆಗೆ ಟೀಂ ಇಂಡಿಯಾ ಆಟಗಾರರು ಶಾಕ್ ನೀಡಿದ್ದು, ಆರಂಭಿಕ ಆಟಗಾರ ವಾರ್ನರ್ ಮತ್ತು ಮಾರ್ನಸ್ ಹ್ಯಾರಿಸ್ ಪೆವಿಲಿಯನ್ ಸೇರಿಕೊಂಡಿದ್ದಾರೆ.

Washington and Natarajan debut
ಟೆಸ್ಟ್ ಕ್ರಿಕೆಟ್​ಗೆ ನಟರಾಜನ್, ಸುಂದರ್ ಪದಾರ್ಪಣೆ
author img

By

Published : Jan 15, 2021, 6:43 AM IST

ಬ್ರಿಸ್ಬೇನ್(ಆಸ್ಟ್ರೇಲಿಯಾ): ಗಬ್ಬಾದಲ್ಲಿ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ವೇಗಿ ಟಿ.ನಟರಾಜನ್ ಮತ್ತು ಆಲ್​ರೌಂಡ್ ಆಟಗಾರ ವಾಷಿಂಗ್ಟನ್ ಸುಂದರ್ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಟೀಂ ಇಂಡಿಯಾ ಆಡುವ 11ರ ಬಳಗದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿದ್ದು, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಹನುಮಾ ವಿಹಾರಿ ಮತ್ತು ಜಸ್ಪ್ರೀತ್ ಬುಮ್ರಾ ಹೊರಗುಳಿಸಿದ್ದಾರೆ. ಶರ್ದುಲ್ ಠಾಕೂರ್, ಟಿ ನಟರಾಜನ್, ಮಯಾಂಕ್ ಅಗರ್ವಾಲ್ ಮತ್ತು ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಮಿಳುನಾಡಿನ ಸ್ಪಿನ್ನರ್ ಸುಂದರ್ ಮತ್ತು ವೇಗಿ ನಟರಾಜನ್​ ಜೋಡಿ ಟೆಸ್ಟ್​ಗೆ ಪದಾರ್ಪಣೆ ಮಾಡಿದೆ. ಗಾಯಗೊಂಡ ವಿಲ್ ಪುಕೋವ್​ಸ್ಕಿ ಬದಲು ಮಾರ್ಕಸ್ ಹ್ಯಾರಿಸ್ ಆಸೀಸ್ ಪರ ಇನ್ನಿಂಗ್ಸ್ ಆರಂಭಿಸಿದ್ರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದ್ದು, ಸ್ಫೋಟಕ ಆಟಗಾರ ಡೇವಿಡ್ ವಾರ್ನರ್​ ಮೊದಲ ಓವರ್​ನಲ್ಲೆ ಮೊಹಮ್ಮದ್ ಸಿರಾಜ್​ಗೆ ವಿಕೆಟ್ ಒಪ್ಪಿಸಿದ್ರು.

ಮತ್ತೊಬ್ಬ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಕೂಡ ಹೆಚ್ಚು ಸಮಯ ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಕೇವಲ 5 ರನ್ ಗಳಿಸಿ ಶಾರ್ದೂಲ್ ಠಾಕೂರ್ ಎಸೆತದಲ್ಲಿ ವಾಷಿಂಗ್ಟನ್ ಸುಂದರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.