ಅಬುಧಾಬಿ: ಅರ್ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ವಿರುದ್ಧ 3ನೇ ಅಂಪೈರ್ ನೀಡಿದ ತೀರ್ಪಿಗೆ ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಡೇವಿಡ್ ವಾರ್ನರ್ ಹೊಡೆಯಲೆತ್ನಿಸಿದ ಚೆಂಡು ನೇರ ವಿಕೆಟ್ ಕೀಪರ್ ವಿಲಿಯರ್ಸ್ ಕೈ ಸೇರಿತು. ಮೈದಾನದ ಅಂಪೈರ್ ರವಿ ಅದನ್ನು ನಾಟೌಟ್ ಎಂದು ತೀರ್ಪು ನೀಡಿದ್ದರು.
ಆದರೆ ಆರ್ಸಿಬಿ ನಾಯಕ ಕೊಹ್ಲಿ ರಿವ್ಯೂವ್ ತೆಗೆದುಕೊಂಡರು. ಟಿವಿ ರಿಪ್ಲೇನಲ್ಲಿ ಚೆಂಡು ಗ್ಲೌಸ್ ಅಥವಾ ಪ್ಯಾಡ್ಗೆ ತಗುಲಿರುವಂತೆ ಕಾಣಿಸುತ್ತಿತ್ತು. ಆದರೆ ಯಾವುದಕ್ಕೆ ತಾಗಿದೆ ಎನ್ನುವುದು ಪಕ್ಕಾ ಆಗಲಿಲ್ಲ. ಇಂತಹ ಸ್ಥಿತಿಗಳಲ್ಲಿ ತೀರ್ಪು ಬ್ಯಾಟ್ಸ್ಮನ್ ಪರವಾಗಿ ನೀಡಬೇಕು. ಆದರೆ ಮೂರನೇ ಅಂಪೈರ್ ಆಗಿದ್ದ ವಿರೇಂದರ್ ಶರ್ಮಾ ಔಟ್ ಎಂದು ತೀರ್ಪು ನೀಡಿದರು.
-
Incredible decision from the 3rd umpire. David Warner every reason to blow up. Original decision not out and never conclusive evidence to overturn
— Scott Styris (@scottbstyris) November 6, 2020 " class="align-text-top noRightClick twitterSection" data="
">Incredible decision from the 3rd umpire. David Warner every reason to blow up. Original decision not out and never conclusive evidence to overturn
— Scott Styris (@scottbstyris) November 6, 2020Incredible decision from the 3rd umpire. David Warner every reason to blow up. Original decision not out and never conclusive evidence to overturn
— Scott Styris (@scottbstyris) November 6, 2020
ತಕ್ಷಣವೇ ಕಾಮೆಂಟರಿ ಮಾಡುತ್ತಿದ್ದ ಪಾಮಿ ಎಂಬಾಗ್ವಾ ಈ ತೀರ್ಪನ್ನು ಟೀಕಿಸಿದ್ದರು. ನಾಟೌಟ್ ಎಂದು ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ನ್ಯೂಜಿಲ್ಯಾಂಡ್ನ ಸ್ಕಾಟ್ ಸ್ಟೈರಿಸ್ ಕೂಡ ಈ ತೀರ್ಪನ್ನು ಟೀಕಿಸಿ ಟ್ವೀಟ್ ಮಾಡಿದ್ದು, ನಂಬಲಸಾಧ್ಯವಾದ ನಿರ್ಧಾರ ಎಂದು ವ್ಯಂಗ್ಯ ಮಾಡಿದ್ದಾರೆ.
"3ನೇ ಅಂಪೈರ್ರಿಂದ ನಂಬಲಾಸಾಧ್ಯವಾದ ತೀರ್ಪು ಬಂದಿದೆ. ಡೇವಿಡ್ ವಾರ್ನರ್ ಕೋಪಗೊಳ್ಳಲು ಬಲವಾದ ಕಾರಣವಿದೆ. ಏಕೆಂದರೆ ಮೈದಾನದ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದಾಗ ಪುರಾವೆಗಳಿಲ್ಲದೆ ಅವರ ನಿರ್ಧಾರವನ್ನು ರದ್ದುಗೊಳಿಸಲು ಎಂದಿಗೂ ಸಾಧ್ಯವಿಲ್ಲ" ಎಂದು ಟೀಕಿಸಿದ್ದಾರೆ.
ಆದರೆ ಎಂಬಾಗ್ವ ಜೊತೆಗೆ ಕಾಮೆಂಟರಿ ಮಾಡುತ್ತಿದ್ದ ಸುನೀಲ್ ಗವಾಸ್ಕರ್ ಅಂಪೈರ್ ನಿರ್ಧಾರವನ್ನು ಗೌರವಿಸಬೇಕು ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.