ಲಂಡನ್: ಆಸ್ಟ್ರೇಲಿಯಾ ಅನುಭವಿ ಎಡಗೈ ಬ್ಯಾಟ್ಸ್ಮನ್ ಶಾನ್ ಮಾರ್ಶ್ ಮುಂದೋಳು ಮುರಿತಕ್ಕೊಳಗಾಗಿದ್ದು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಈಗಾಗಲೆ ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದೆ. ಆದರೆ ದಕ್ಷಿಣ ಆಫ್ರಿಕಾದ ವಿರುರ್ದದ ನಡೆಯುವ ಕೊನೆಯ ವಿಶ್ವಕಪ್ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿದ್ದ ವೇಳೆ ತಂಡದ ಅನುಭವಿ ಬ್ಯಾಟ್ಸ್ಮನ್ ಶಾನ್ ಮಾರ್ಶ್ಗೆ ಪ್ಯಾಟ್ ಕಮ್ಮಿನ್ಸ್ ಎಸೆದ ಚೆಂಡು ಮುಂದೋಳಿಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಚೆಂಡು ಬಲವಾಗಿ ಕೈಗೆ ಬಡಿದಿರುವುದರಿಂದ ಮೂಳೆ ಮುರಿದಿದೆ. ಮಾರ್ಶ್ಗೆ ಸರ್ಜರಿ ಅಗತ್ಯವಾಗಿರುವುದರಿಂದ ತಂಡದಿಂದ ಅವರನ್ನು ಕೈಬಿಡಲಾಗಿದೆ. ಇವರ ಜಾಗಕ್ಕೆ ಯುವ ವಿಕೆಟ್ ಕೀಪರ್ ಪೀಟರ್ ಹ್ಯಾಂಡ್ಸ್ಕಂಬ್ಗೆ ಅವಕಾಶ ನೀಡಲಾಗಿದೆ ಎಂದು ಲ್ಯಾಂಗರ್ ತಿಳಿಸಿದ್ದಾರೆ.
ಮಾರ್ಶ್ ಅಲ್ಲದೆ ಮತ್ತೊಬ್ಬ ಆಲ್ರೌಂಡರ್ ಮ್ಯಾಕ್ಸ್ವೆಲ್ಗೂ ಕೂಡ ಅಭ್ಯಾಸದ ವೇಳೆ ಸ್ಟಾರ್ಕ್ ಬೌಲಿಂಗ್ನಲ್ಲಿ ಚೆಂಡಿನಿಂದ ಬಡಿಸಿಕೊಂಡು ಗಾಯಗೊಂಡಿದ್ದರು. ಅದರೆ ಮ್ಯಾಕ್ಸ್ವೆಲ್ ಗಾಯ ಗಂಭೀರವಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.