ಲೀಡ್ಸ್: ಸೆಮಿಫೈನಲ್ ಕನಸಿನಲ್ಲಿರುವ ಪಾಕಿಸ್ತಾನ ಅಫ್ಘಾನಿಸ್ತಾನದ ವಿರುದ್ಧ 3 ವಿಕೆಟ್ಗಳ ಪ್ರಯಾಸದ ಗೆಲುವು ಸಾಧಿಸಿದ್ದು, ಸೆಮೀಸ್ ಕನಸನ್ನು ಉಳಿಸಿಕೊಂಡಿದೆ.
ಅಫ್ಘಾನಿಸ್ತಾನ ನೀಡಿದ್ದ 228 ರನ್ಗಳ ಸಾದಾರಣ ಗುರಿ ಬೆನ್ನೆತ್ತಿದ ಪಾಕಿಸ್ತಾನ ತಂಡ 49.4 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ರೋಚಕ ಜಯ ಸಾಧಿಸಿದೆ.
ಸಾದಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ಖಾತೆ ತೆರೆಯುವ ಮುನ್ನವೇ ಫಖರ್ ಜಮಾನ್(0) ವಿಕೆಟ್ ಕಳೆದುಕೊಂಡಿತು. ಆದರೆ ಬಾಬರ್(45) ಹಾಗೂ ಇಮಾಮ್ ಉಲ್ ಹಕ್(36) 2ನೇ ವಿಕೆಟ್ ಜೊತೆಯಾಟದಲ್ಲಿ 72 ರನ್ ಸೇರಿಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ಉತ್ತಮವಾಗಿ ಆಡುತ್ತಿದ್ದ ಇಮಾಮ್(36) ನಬಿ ಓವರ್ನಲ್ಲಿ ಸ್ಟಂಪ್ ಔಟ್ ಆದದೆ. ಅವರ ಬೆನ್ನಲ್ಲೇ 51 ಎಸೆತಗಳಲ್ಲಿ 5 ಬೌಂಡರಿ ಸಹಿತ 45 ರನ್ಗಳಿಸಿದ್ದ ಕಳೆದ ಪಂದ್ಯದ ಹೀರೋ ಬಾಬರ್ ಕೂಡ ನಬಿ ಓವರ್ನಲ್ಲಿ ಬೌಲ್ಡ್ ಆದರು.
-
A close game of cricket and a great fight by #AfghanAtalan !!
— Afghanistan Cricket Board (@ACBofficials) June 29, 2019 " class="align-text-top noRightClick twitterSection" data="
Congrats @TheRealPCB for winning the thriller at Headingley by 3 wickets !#AFGvPAK #CWC19 #AfghanAtalan pic.twitter.com/b4qHYIzJHl
">A close game of cricket and a great fight by #AfghanAtalan !!
— Afghanistan Cricket Board (@ACBofficials) June 29, 2019
Congrats @TheRealPCB for winning the thriller at Headingley by 3 wickets !#AFGvPAK #CWC19 #AfghanAtalan pic.twitter.com/b4qHYIzJHlA close game of cricket and a great fight by #AfghanAtalan !!
— Afghanistan Cricket Board (@ACBofficials) June 29, 2019
Congrats @TheRealPCB for winning the thriller at Headingley by 3 wickets !#AFGvPAK #CWC19 #AfghanAtalan pic.twitter.com/b4qHYIzJHl
ಹಿರಿಯ ಆಟಗಾರ ಹಫೀಜ್ ಅಟ19 ರನ್ಗಳಿಗೆ ಸೀಮಿತವಾದರೆ, ಹ್ಯಾರೀಸ್ ಸೋಹೈಲ್ 27 ರನ್ಗೆ ವಿಕೆಟ್ ಒಪ್ಪಿಸಿದರು. ನಾಯಕ ಸರ್ಫರಾಜ್ ಅಹ್ಮದ್ ಕೂಡ 18 ರನ್ಗಳಿಸಿದ್ದ ವೇಳೆ ರನ್ಔಟ್ ಆದರು.
156 ರನ್ಗಳಿಗೆ 6 ಕಳೆದುಕೊಂಡಿದ್ದ ಪಾಕಿಸ್ತಾನ ಸೋಲಿನತ್ತ ಮುಖಮಾಡಿತ್ತು. ಆದರೆ ಆಲ್ರೌಂಡರ್ ಇಮಾದ್ ವಾಸೀಂ ಬಾಲಂಗೋಚಿಗಳಾದ ಶದಾಬ್ ಖಾನ್(11) ಹಾಗೂ ವಹಾಬ್ ರಿಯಾಜ್(15) ಜೊತಗೂಡಿ ತಂಡವನ್ನು ಗೆಲುವಿನ ಗಡಿದಾಟಿಸಿದರು.ಇನ್ನಿಂಗ್ಸ್ನ ಕೊನೆಯವರೆಗೂ ಜಾಗರೂಕತೆಯಿಂದ ಬ್ಯಾಟ್ ಬೀಡಿದ ಇಮಾನ್ 54 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ ಔಟಾಗದೆ 49 ರನ್ಗಳಿಸಿ ಪಾಕ್ ಸೆಮಿಫೈನಲ್ ಕನಸನ್ನು ಇನ್ನೂ ಜೀವಂತವಾಗಿರುವಂತೆ ಮಾಡಿದರು.
-
WHAT. A. GAME.
— ICC (@ICC) June 29, 2019 " class="align-text-top noRightClick twitterSection" data="
Pakistan beat Afghanistan by three wickets with two balls remaining.
Their #CWC19 semi-final dream is well and truly alive!#PAKvAFGicc pic.twitter.com/1qFscE1GEK
">WHAT. A. GAME.
— ICC (@ICC) June 29, 2019
Pakistan beat Afghanistan by three wickets with two balls remaining.
Their #CWC19 semi-final dream is well and truly alive!#PAKvAFGicc pic.twitter.com/1qFscE1GEKWHAT. A. GAME.
— ICC (@ICC) June 29, 2019
Pakistan beat Afghanistan by three wickets with two balls remaining.
Their #CWC19 semi-final dream is well and truly alive!#PAKvAFGicc pic.twitter.com/1qFscE1GEK
ಈ ಗೆಲುವಿನೊಂದಿಗೆ 9 ಅಂಕ ಸಂಪಾದಿಸಿದ ಪಾಕಿಸ್ತಾನ ಅಂಕ ಪಟ್ಟಿಯಲ್ಲಿ 4 ನೇ ಸ್ಥಾನಕ್ಕೇರಿತು. ಇತ್ತ ಅಫ್ಘಾನಿಸ್ತಾನ ಸತತ 8 ನೇ ಸೋಲನುಭವಿಸುವ ಮೂಲಕ ಕೊನೆಯ ಸ್ಥಾನಿಯಾಗಿ ಮುಂದುವರಿಯಿತು.
ಪಾಕಿಸ್ತಾನ ತಂಡಕ್ಕೆ ಇನ್ನೊಂದು ಪಂದ್ಯ ಬಾಕಿಯಿದ್ದು, ಬಾಂಗ್ಲಾದೇಶದ ವಿರುದ್ಧ ಜುಲೈ 5 ರಂದು ಆಡಲಿದೆ. ಅಫ್ಘಾನಿಸ್ತಾನ ತಂಡ ತನ್ನ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಜುಲೈ 4 ರಂದು ಎದುರಿಸಲಿದೆ.