ETV Bharat / sports

ಐಸಿಸಿ ಟೆಸ್ಟ್​ ರ‍್ಯಾಂಕಿಂಗ್‌: ಪಂತ್​, ರೋಹಿತ್​ ಶ್ರೇಷ್ಠ ಸಾಧನೆ, ಅಶ್ವಿನ್​ಗೆ 2ನೇ ಸ್ಥಾನ - ಐಸಿಸಿ ಟೆಸ್ಟ್​ ರ್ಯಾಂಕಿಂಗ್

ಪಂತ್ 7 ಸ್ಥಾನ ಮೇಲೇರಿ ತಮ್ಮ ತಂಡದ ರೋಹಿತ್ ಶರ್ಮಾ ಹಾಗೂ ನ್ಯೂಜಿಲ್ಯಾಂಡ್ ತಂಡದ ಹೆನ್ರಿ ನಿಕೋಲ್ಸ್​ ಜೊತೆಗೆ 7ನೇ ಕ್ರಮಾಂಕವನ್ನು ಹಂಚಿಕೊಂಡಿದ್ದಾರೆ. ಈ ಮೂವರು ಬ್ಯಾಟ್ಸ್​ಮನ್​ಗಳು ತಲಾ 747 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

ಐಸಿಸಿ ಟೆಸ್ಟ್​ ರ‍್ಯಾಂಕಿಂಗ್
ರಿಷಭ್ ಪಂತ್​-ಆಶ್ವಿನ್​
author img

By

Published : Mar 10, 2021, 7:46 PM IST

ದುಬೈ: ಭಾರತ ತಂಡದ ವಿಕೆಟ್​ ಕೀಪರ್, ಬ್ಯಾಟ್ಸ್​ಮನ್​ ರಿಷಭ್ ಪಂತ್​ ವೃತ್ತಿ ಜೀವನದ ಶ್ರೇಷ್ಠ 7ನೇ ಶ್ರೇಯಾಂಕಕ್ಕೆ ಬಡ್ತಿ ಪಡೆದಿದ್ದಾರೆ. ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ ಕೂಡ ಪಂತ್​ ಮತ್ತು ಹೆನ್ರಿ ನಿಕೋಲ್ಸ್​ ಜೊತೆಗೆ 7ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ರಿಷಭ್ ಪಂತ್​ ಅಹ್ಮದಾಬಾದ್​ನಲ್ಲಿ ನಡೆದ ಅಂತಿಮ ಟೆಸ್ಟ್​ನಲ್ಲಿ 101 ರನ್​ ಸಿಡಿಸಿದ್ದರು. ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್​ ಮತ್ತು 25 ರನ್​ಗಳಿಂದ ಗೆಲುವು ಪಡೆದಿತ್ತು. ಭಾರತ 3-1ರಲ್ಲಿ ಟೆಸ್ಟ್​ ಸರಣಿ ಜಯಿಸಿತ್ತು.

ಈ ಅದ್ಭುತ ಪ್ರದರ್ಶನದ ನಂತರ ಪಂತ್ 7 ಸ್ಥಾನ ಮೇಲೇರಿ ತಮ್ಮ ತಂಡದ ರೋಹಿತ್ ಶರ್ಮಾ ಹಾಗೂ ನ್ಯೂಜಿಲ್ಯಾಂಡ್ ತಂಡದ ಹೆನ್ರಿ ನಿಕೋಲ್ಸ್​ ಜೊತೆಗೆ 7ನೇ ರ‍್ಯಾಂಕ್ ಹಂಚಿಕೊಂಡಿದ್ದಾರೆ. ಈ ಮೂವರು ಬ್ಯಾಟ್ಸ್​ಮನ್​ಗಳು ತಲಾ 747 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್​ 39 ಸ್ಥಾನ ಏರಿಕೆ ಕಂಡಿದ್ದು, 62ನೇ ಶ್ರೇಯಾಂಕ ಪಡೆದಿದ್ದಾರೆ. ಆದರೆ ಪೂಜಾರ ಮತ್ತು ರಹಾನೆ ಅಗ್ರ 10 ರಿಂದ ಹೊರಬಿದ್ದಿದ್ದಾರೆ. ಇನ್ನು ನಾಯಕ ಕೊಹ್ಲಿ 2017ರ ನಂತರ ಅತ್ಯಂತ ಕಡಿಮೆ ರೇಟಿಂಗ್​ ಅಂಕಕ್ಕೆ ಕುಸಿದಿದ್ದಾರೆ. ಆದರೆ 5ನೇ ರ‍್ಯಾಂಕ್ ಉಳಿಸಿಕೊಂಡಿದ್ದಾರೆ. ಪೂಜಾರ ಕೂಡ 2016ರ ನಂತರ ಇದೇ ಮೊದಲ ಬಾರಿಗೆ 700 ಕ್ಕಿಂತ ಕಡಿಮೆ ಅಂಕಗಳಿಗೆ ಇಳಿಕೆ ಕಂಡಿದ್ದಾರೆ.

ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸನ್​ (919), ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್​ (891) ಮತ್ತು ಮಾರ್ನಸ್ ಲಾಬುಶೇನ್​ (878) ಮೊದಲ ಮೂರು ಸ್ಥಾನದಲ್ಲಿ ಭದ್ರರಾಗಿದ್ದಾರೆ. ಜೋ ರೂಟ್​ 4ನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್ ರ‍್ಯಾಂಕಿಂಗ್​ನಲ್ಲಿ ರವಿಚಂದ್ರನ್ ಅಶ್ವಿನ್​ 850 ರೇಟಿಂಗ್ ಅಂಕ ಪಡೆಯುವ ಮೂಲಕ ಒಂದು ಸ್ಥಾನ ಮೇಲೇರಿ 2ನೇ ಶ್ರೇಯಾಂಕ ಪಡೆದಿದ್ದಾರೆ. ನೈಲ್​ ವ್ಯಾಗ್ನರ್​ 2017ರ ನಂತರ ಇದೇ ಮೊದಲ ಬಾರಿ ಮೊದಲೆರಡು ಸ್ಥಾನದಿಂದ ಕೆಳಗಿಳಿದಿದ್ದಾರೆ. ಅಶ್ವಿನ್​ ಆಲ್​ರೌಂಡರ್​ ಶ್ರೇಯಾಂಕದಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

ಸರಣಿಯಲ್ಲಿ 27 ವಿಕೆಟ್ ಪಡೆದ ಅಕ್ಷರ್​ ಪಟೇಲ್​ ಕೇವಲ 3 ಪಂದ್ಯಗಳನ್ನಾಡಿ ಬರೋಬ್ಬರಿ 552 ರೇಟಿಂಗ್ ಅಂಕ ಸಂಪಾದಿಸಿದ್ದಾರೆ. ಅವರು ಪ್ರಸ್ತುತ 30ನೇ ಶ್ರೇಯಾಂಕದಲ್ಲಿದ್ದಾರೆ. ಭಾರತದ ಸ್ಟಾರ್ ವೇಗಿ ಬುಮ್ರಾ (10) ಟಾಪ್ 10ರಲ್ಲಿರುವ ಮತ್ತೊಬ್ಬ ಭಾರತೀಯನಾಗಿದ್ದಾರೆ.

ಇಂಗ್ಲೆಂಡ್ ತಂಡದ ಜೇಮ್ಸ್​ ಆ್ಯಂಡರ್ಸನ್​ 2 ಸ್ಥಾನ ಏರಿಕೆ ಕಂಡು 4ನೇ ಶ್ರೇಯಾಂಕ ಪಡೆದಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್​ ಕಮ್ಮಿನ್ಸ್​ 908 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನು ಓದಿ:ಆಸೀಸ್​ ವಿರುದ್ಧ ಪಾದಾರ್ಪಣೆ ಮಾಡಿದಾಗ ಯುದ್ದಕ್ಕೆ ಹೋಗುತ್ತಿದ್ದೇನೆ ಅನಿಸಿತ್ತು; ಗಿಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.