ಮುಂಬೈ : ಇತ್ತೀಚೆಗೆ ಐಸಿಸಿ ಟಿ20 ಆಡುವ ಎಲ್ಲಾ 11 ರಾಷ್ಟ್ರಗಳಿಂದ ತಲಾ ಒಬ್ಬ ಆಟಗಾರನನ್ನು ಮಾತ್ರ ಆಯ್ಕೆ ಮಾಡಬೇಕೆಂದು ಷರತ್ತು ವಿಧಿಸಿ ಟಿ20 ಇಲೆವೆನ್ ಆಯ್ಕೆ ಮಾಡಬೇಕೆಂದು ಸವಾಲೆಸೆದಿತ್ತು.
ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ನೆಚ್ಚಿನ ಇಲೆವೆನ್ ತಂಡವನ್ನು ಆಯ್ಕೆ ಮಾಡಿದ್ದು, ಅದರಲ್ಲಿ 3ನೇ ಕ್ರಮಾಂಕದಲ್ಲಿ ಆಡುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನು ಕೈಬಿಟ್ಟು ವೇಗಿ ಜಸ್ಪ್ರೀತ್ ಬುಮ್ರಾರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 4 ಶತಕ ಸಿಡಿಸಿರುವ ವಿಶ್ವದ ಏಕೈಕ ಬ್ಯಾಟ್ಸ್ಮನ್ ಆಗಿರುವ ರೋಹಿತ್ ಶರ್ಮಾ ಹಾಗೂ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಕೊಹ್ಲಿಗೆ ಅವಕಾಶ ನೀಡದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಒಂದು ದೇಶದಿಂದ ಒಬ್ಬ ಆಟಗಾರನನ್ನು ಆಯ್ಕೆ ಮಾಡಬೇಕು ಎಂದಿದ್ದರಿಂದ ಆಕಾಶ್ ವೇಗಿ ಬುಮ್ರಾರಿಗೆ ಮಣೆ ಹಾಕಿದ್ದಾರೆ. ಆಕಾಶ್ ಚೋಪ್ರಾ ಆರಂಭಿಕರಾಗಿ ಆಸೀಸ್ನ ವಾರ್ನರ್ ಹಾಗೂ ಇಂಗ್ಲೆಂಡ್ನ ಜೋಸ್ ಬಟ್ಲರ್ರನ್ನು ಆಯ್ಕೆ ಮಾಡಿದ್ರೆ, 3ನೇ ಕ್ರಮಾಂಕದಲ್ಲಿ ಕಿವೀಸ್ನ ಕಾಲಿನ್ ಮನ್ರೊ, 4ನೇ ಕ್ರಮಾಂಕದಲ್ಲಿ ಬಾಬರ್ ಅಜಮ್, 5ನೇ ಕ್ರಮಾಂಕಕ್ಕೆ ಎಬಿಡಿ ವಿಲಿಯರ್ಸ್,ಆಲ್ರೌಂಡರ್ ಕೋಟಾದಲ್ಲಿ ಬಾಂಗ್ಲಾದ ಶಕಿಬ್ ಅಲ್ ಹಸನ್ ಹಾಗೂ ವಿಂಡೀಸ್ನ ಆಲ್ರೌಂಡರ್ ಆ್ಯಂಡ್ರೆ ರೆಸೆಲ್ ಆಯ್ಕೆ ಮಾಡಿದ್ದಾರೆ.