ETV Bharat / sports

ಭಾರತ ಕ್ರಿಕೆಟ್​ ಕಂಡ 3 ದಿಗ್ಗಜರ ಫೋಟೋ ಶೇರ್​ ಮಾಡಿ ಅಭಿಮಾನಿಗಳ ಮನಗೆದ್ದ ಐಸಿಸಿ - Rahul Dravid

ನಿತ್ಯ ಕ್ರಿಕೆಟ್​ ಸಂಬಂಧಿತ ಸುದ್ದಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಐಸಿಸಿ ಭಾರತದ ಲೆಜೆಂಡರಿ​ ಕ್ರಿಕೆಟಿಗರಾದ ಎಂಎಸ್​ ಧೋನಿ, ಸಚಿನ್ ತೆಂಡೂಲ್ಕರ್​ ಹಾಗೂ ದಿ ವಾಲ್​ ಖ್ಯಾತಿಯ ರಾಹುಲ್​ ದ್ರಾವಿಡ್​ ಒಟ್ಟಿಗೆ ಇರುವ ಫೋಟೊವೊಂದನ್ನು ಶೇರ್​ ಮಾಡುವ ಮೂಲಕ ಭಾರತೀಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಧೋನಿ, ಸಚಿನ್​ ತೆಂಡೂಲ್ಕರ್​ ಮತ್ತು ರಾಹುಲ್​ ದ್ರಾವಿಡ್

author img

By

Published : May 21, 2020, 3:42 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದ ಶ್ರೇಷ್ಠ ಆಟಗಾರರಾದ ಧೋನಿ, ಸಚಿನ್​ ತೆಂಡೂಲ್ಕರ್​ ಮತ್ತು ರಾಹುಲ್​ ದ್ರಾವಿಡ್​ ಅವರು ಒಟ್ಟಿಗೆ ಇರುವ ಅಪರೂಪದ ಫೋಟೋವೊಂದನ್ನು ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಕ್ರಿಕೆಟ್​ ಜಗತ್ತು ಕೊರೊನಾ ಭೀತಿಯಿಂದ ಸ್ಥಗಿತಗೊಂಡಿದೆ. ಕಳೆದ ಮೂರು ತಿಂಗಳಿಂದ ಯಾವುದೇ ಕ್ರಿಕೆಟ್​ ಪಂದ್ಯಗಳು ನಡೆದಿಲ್ಲ. ಈ ಸುದೀರ್ಘವಾದ ಬಿಡುವಿನ ವೇಳೆಯಲ್ಲಿ ಕ್ರಿಕೆಟಿಗರು ತಮ್ಮ ಕುಟುಂಬದವರೊಂದಿಗೆ ಜೊತೆ ಕಾಲ ಕಳೆಯುತ್ತಿದ್ದರೆ ,ಇನ್ನು ಕೆಲವರು ಸಾಮಾಜಿಕ ಜಾಲಾತಾಣಗಳಲ್ಲಿ ಸಂವಾದ ನಡೆಸುವ ಮೂಲಕ ಸಮಯ ದೂಡುತ್ತಿದ್ದಾರೆ.

ನಿತ್ಯ ಕ್ರಿಕೆಟ್​ ಸಂಬಂಧಿತ ಸುದ್ದಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಐಸಿಸಿ ಭಾರತದ ಲೆಜೆಂಡರಿ​ ಕ್ರಿಕೆಟಿಗರಾದ ಎಂಎಸ್​ ಧೋನಿ, ಸಚಿನ್ ತೆಂಡೂಲ್ಕರ್​ ಹಾಗೂ ದಿ ವಾಲ್​ ಖ್ಯಾತಿಯ ರಾಹುಲ್​ ದ್ರಾವಿಡ್​ ಒಟ್ಟಿಗೆ ಇರುವ ಫೋಟೊವೊಂದನ್ನು ಶೇರ್​ ಮಾಡುವ ಮೂಲಕ ಭಾರತೀಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸಚಿನ್​ ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​, ಅತಿ ಹೆಚ್ಚು ಶತಕ ಸಿಡಿಸಿರುವ ಬ್ಯಾಟ್ಸ್​ಮನ್​ ಆಗಿದ್ದರೆ, ದ್ರಾವಿಡ್​, ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಬ್ಯಾಟಿಂಗ್​ ಪ್ರದರ್ಶನದ ಮೂಲಕವೇ ದಿ ವಾಲ್​ ಎಂದು ಖ್ಯಾತರಾಗಿದ್ದರು, ಇವರ ಕೋಚಿಂಗ್​ನಲ್ಲಿ 2018ರ ಅಂಡರ್​​ ತಂಡ ವಿಶ್ವಕಪ್​ ಜಯಿಸಿತ್ತು. ಇನ್ನು ಧೋನಿ ಭಾರತಕ್ಕೆ ಐಸಿಸಿಯ ಎಲ್ಲ ಟ್ರೋಫಿಗಳನ್ನು ಗೆದ್ದುಕೊಟ್ಟ ನಾಯಕರಾಗಿದ್ದಾರೆ. ಈ ಮೂವರು ಲೆಜೆಂಡ್​ ಕ್ರಿಕೆಟಿಗರನ್ನು ಒಂದೇ ಪ್ರೇಮ್​ನಲ್ಲಿ ಸೇರಿಸಿರುವುದಕ್ಕೆ ಭಾರತೀಯ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.