ಮುಂಬೈ: ವಿಶ್ವಕ್ರಿಕೆಟ್ ಕಂಡಂತಹ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಅವರನ್ನು ಎಡಗೈ ಬ್ಯಾಟ್ಸ್ಮನ್ ಎಂದು ಐಸಿಸಿ ತನ್ನ ಹಾಲ್ ಆಫ್ ಫೇಮ್ ಲಿಸ್ಟ್ನಲ್ಲಿ ಬರೆದುಕೊಂಡಿರುವುದಕ್ಕೆ ಭಾರತೀಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದ ಪರ 16 ವರ್ಷಗಳ ಕಾಲ ಕ್ರಿಕೆಟ್ ಆಡಿರುವ ದಿ ವಾಲ್ ನಾಯಕನಾಗಿ, ಒಬ್ಬ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ದ್ರಾವಿಡ್ ಅಂತಹ ಆಟಗಾರರನ್ನು ಯಾವ ರೀತಿಯ ಬ್ಯಾಟ್ಸ್ಮನ್ ಎಂಬುದನ್ನು ಸರಿಯಾಗಿ ತಿಳಿಸದ ಐಸಿಸಿ ಬೇಜವಾಬ್ದಾರಿತನ ಕುರಿತು ಕೆಲವು ಭಾರತೀಯ ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.
-
a kind request to @ICC to correct the following in Hall of Fame detail of the WALL 'Rahul Dravid'.
— Gopal (@GUJSN0369606) September 20, 2019 " class="align-text-top noRightClick twitterSection" data="
kind attention @BCCI pic.twitter.com/hBgEe5sYwI
">a kind request to @ICC to correct the following in Hall of Fame detail of the WALL 'Rahul Dravid'.
— Gopal (@GUJSN0369606) September 20, 2019
kind attention @BCCI pic.twitter.com/hBgEe5sYwIa kind request to @ICC to correct the following in Hall of Fame detail of the WALL 'Rahul Dravid'.
— Gopal (@GUJSN0369606) September 20, 2019
kind attention @BCCI pic.twitter.com/hBgEe5sYwI
ದ್ರಾವಿಡ್ ಅವರಿಗೆ ಐಸಿಸಿ ಕಳೆದ ವರ್ಷ ಆಲ್ ಆಫ್ ಫೇಮ್ ಗೌರವ ನೀಡಿತ್ತು. ಬಿಷನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ದೇವ್, ಅನಿಲ್ ಕುಂಬ್ಳೆ ನಂತರ ರಾಹುಲ್ ಈ ಗೌರವಕ್ಕೆ ಪಾತ್ರರಾಗಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದ್ರಾವಿಡ್ ಭಾರತದ ಪರ 164 ಟೆಸ್ಟ್ ಹಾಗೂ 344 ಏಕದಿನ ಪಂದ್ಯಗಳಾಡಿದ್ದಾರೆ. ಒಟ್ಟಾರೆ 24,177 ರನ್ಗಳಿಸಿದ್ದಾರೆ.