ಮುಂಬೈ: ಭಾರತ ತಂಡದ ಮಾಜಿ ಆಟಗಾರ ಗೌತಮ ಗಂಭೀರ್ ಡಿಸೆಂಬರ್ 26ರಿಂದ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ಗೆ ಟೀಮ್ ಇಂಡಿಯಾದಲ್ಲಿ ಹಲವು ಬದಲಾವಣೆ ಅಗತ್ಯವೆಂದು ತಿಳಿಸಿದ್ದು, ರಾಹುಲ್ ಮತ್ತು ಶುಬ್ಮನ್ ಗಿಲ್ರನ್ನು ತಂಡದಲ್ಲಿ ನೋಡಲು ಬಯಸುವುದಾಗಿ ತಿಳಿಸಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಡಿಸೆಂಬರ್ 26ರಂದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡ 5 ಬೌಲರ್ಗಳೊಂದಿಗೆ ಹಾಗೂ ನಾಯಕ ರಹಾನೆಯನ್ನು ನಾಲ್ಕನೇ ಕ್ರಮಾಂಕದಲ್ಲಿ ನೋಡಲು ಬಯಸಿರುವುದಾಗಿ ಗಂಭೀರ್ ತಿಳಿಸಿದ್ದಾರೆ.
ನಾನು ಪೃಥ್ವಿ ಶಾರನ್ನು ಸರಣಿಯ ಆರಂಭದಲ್ಲಿ ಆಡಿಸಲು ಬಯಸಿದ್ದೆ. ಏಕೆಂದರೆ 4 ಪಂದ್ಯಗಳಲ್ಲಿ ಒಂದು ಶತಕ ಹಾಗೂ 2 ಅರ್ಧಶತಕ ಬಾರಿಸಿರುವ ಹಾಗೂ ಕಳೆದ ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ನಲ್ಲಿ ಅರ್ಧಶತಕ ಬಾರಿಸಿದ್ದ ಆಟಗಾರನನ್ನ ನೀವು ಆರಂಭದಲ್ಲಿ ಅವಕಾಶ ನೀಡಲೇಬೇಕಿರುತ್ತದೆ. ಅವರ ಫಾರ್ಮ್ ಉತ್ತಮವಾಗಿಲ್ಲ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಫಾರ್ಮ್ ದೊಡ್ಡ ಸಮಸ್ಯೆಯಲ್ಲ, ಆದರೆ ಅವರಲ್ಲಿ ಕಡಿಮೆ ಆತ್ಮವಿಶ್ವಾಸವಿರುವುದರಿಂದ ಅವರ ಜಾಗದಲ್ಲಿ ಶುಬ್ಮನ್ ಗಿಲ್ರನ್ನು ಮಯಾಂಕ್ ಜೊತೆ ಆರಂಭಿಕನಾಗಿ ಕಾಣಲು ನಾನು ಬಯಸುತ್ತೇನೆ ಎಂದು ಸ್ಟಾರ್ ಸ್ಪೋರ್ಟ್ಸ್ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಧನಶ್ರೀ ವರ್ಮಾ ಜೊತೆ ಸಪ್ತಪದಿ ತುಳಿದ ಭಾರತೀಯ ಸ್ಪಿನ್ನರ್ ಯುಜ್ವೇಂದ್ರ ಚಹಾಲ್
ಪೂಜಾರ ಅವರನ್ನು 3ನೇ ಕ್ರಮಾಂಕದಲ್ಲಿ ಹಾಗೂ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕನಾಗಿ ಬಡ್ತಿ ಪಡೆಯುವ ರಹಾನೆಗೆ 4ನೇ ಕ್ರಮಾಂಕದಲ್ಲಿ ಆಡಲು ನಾನು ಸಲಹೆ ನೀಡುತ್ತೇನೆ. ಇದರ ಜೊತೆಗೆ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾರನ್ನು ಸಹಾ ಮತ್ತು ಹನುಮ ವಿಹಾರಿ ಜಾಗಕ್ಕೆ ತರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ರಹಾನೆ ನಾಯಕನಾಗಿರುವುದರಿಂದ ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕಿದೆ. ಹಾಗಾಗಿ ರಹಾನೆ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು. ಕೆಎಲ್ ರಾಹುಲ್ 5 ಹಾಗೂ ರಿಷಭ್ ಪಂತ್ 6ನೇ ಕ್ರಮಾಂಕದಲ್ಲಿ ಆಡಿದರೆ. ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಆಶ್ವಿನ್ ಕ್ರಮವಾಗಿ 7 ಮತ್ತು 8ರಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಒಟ್ಟಾರೆ 5 ಬೌಲರ್ಗಳ ಜೊತೆಗೆ ಹೋಗಲು ನಾನು ಬಯಸುವುದರಿಂದ ಜಡೇಜಾ ಮತ್ತು ಆಶ್ವಿನ್ ಜೊತೆಗೆ 3 ವೇಗಿಗಳನ್ನು ತಂಡದಲ್ಲಿ ಆಡಿಸಲು ಬಯಸಿದ್ದೇನೆ. ಬುಮ್ರಾ, ಉಮೇಶ್ ಜೊತೆಗೆ ಸಿರಾಜ್ ಅಥವಾ ಸೈನಿ ಇಬ್ಬರಲ್ಲಿ ಒಬ್ಬರನ್ನು ಆಡಿಸಬಹುದು ಎಂದು ಸಲಹೆ ನೀಡಿದ್ದಾರೆ.
ಭಾರತ ತಂಡ ಮೊದಲ ಟೆಸ್ಟ್ನಲ್ಲಿ ಮುನ್ನಡೆ ಪಡೆದಿತ್ತಾದರೂ ಎರಡನೇ ಇನ್ನಿಂಗ್ಸ್ನಲ್ಲಿ ಹೆಜಲ್ವುಡ್ ಮತ್ತು ಕಮ್ಮಿನ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ 36 ರನ್ಗಳಿಗೆ ಆಲೌಟ್ ಆಗುವ ಮೂಲಕ 90 ರನ್ಗಳ ಟಾರ್ಗೆಟ್ ನೀಡಿತ್ತು. ಆಸ್ಟ್ರೇಲಿಯಾ ತಂಡ ಈ ಮೊತ್ತವನ್ನು 2 ವಿಕೆಟ್ ಕಳೆದುಕೊಂಡು ತಲುಪಿ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿತ್ತು.
'ಪೃಥ್ವಿ ಶಾ ಮೇಲೆ ನಂಬಿಕೆಯಿಟ್ಟು ಭಾರತ ಆಡಳಿತ ಮಂಡಳಿ ಮತ್ತೊಂದು ಅವಕಾಶ ನೀಡಲಿ'