ETV Bharat / sports

6 ಎಸೆತಗಳಲ್ಲಿ6 ಸಿಕ್ಸರ್‌​​​​​ ಸಿಡಿಸಲು ನಿರ್ಧರಿಸಿದ್ದ ರೋಹಿತ್​: ನಿರ್ಧಾರ ಬದಲಾಗಿದ್ದೇಕೆ?

author img

By

Published : Nov 8, 2019, 4:31 PM IST

ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಬ್ಬರಿಸಿದ್ದರು. ಪಂದ್ಯದ ಒಂದು ಓವರ್​​ನಲ್ಲಿ 6 ಸಿಕ್ಸರ್​ ಸಿಡಿಸಲು ಮುಂದಾಗಿದ್ದ ಹಿಟ್​ಮ್ಯಾನ್​ ತಕ್ಷಣವೇ ತಮ್ಮ ನಿರ್ಧಾರ ಬದಲಿಸಿದ್ದೇಕೆ ಗೊತ್ತೇ?

ರೋಹಿತ್​ ಶರ್ಮಾ

ರಾಜ್​ಕೋಟ್​​: ಸೌರಾಷ್ಟ್ರ ಮೈದಾನದಲ್ಲಿ ನಿನ್ನೆ ನಡೆದ ಬಾಂಗ್ಲಾ ವಿರುದ್ಧ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಪಂದ್ಯದಲ್ಲಿ ಅಬ್ಬರಿಸಿದ ರೋಹಿತ್​ ಶರ್ಮಾ 43 ಎಸೆತಗಳಲ್ಲಿ 83 ರನ್​ ಸಿಡಿಸಿ ಮಿಂಚು ಹರಿಸಿದ್ದರು. ಈ ವೇಳೆ ಅವರು 6 ಎಸೆತಗಳಲ್ಲಿ 6 ಸಿಕ್ಸರ್ ಎತ್ತಲು ನಿರ್ಧರಿಸಿದ್ದರಂತೆ.

ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಕಹಿಯಲ್ಲಿ ಮೈದಾನಕ್ಕಿಳಿದಿದ್ದ ಟೀಂ ಇಂಡಿಯಾಗೆ ಈ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ಈ ವೇಳೆ ಬ್ಯಾಟಿಂಗ್​ ಮಾಡಲು ಕ್ರೀಸಿಗಿಳಿದ ರೋಹಿತ್​ ಬಾಂಗ್ಲಾ ಬೌಲರ್​ಗಳ ಮೇಲೆ ಮನಬಂದಂತೆ ಸವಾರಿ ನಡೆಸಿ, ಮೈದಾನದ ಮೂಲೆ ಮೂಲೆಗಳಿಗೂ ಬೌಂಡರಿ-ಸಿಕ್ಸರ್​ ಸುರಿಮಳೆಗೈದರು.

Rohit Sharma
ರೋಹಿತ್​ ಶರ್ಮಾ

ಬಾಂಗ್ಲಾ ಸ್ಪಿನ್​ ಬೌಲರ್​ ಮೊಸಡಕ್​ ಹುಸೇನ್ ಎಸೆದ 10ನೇ ಓವರ್​ನಲ್ಲಿ ರೋಹಿತ್​ ಶರ್ಮಾ ಎಲ್ಲ ಎಸೆತಗಳನ್ನು ಸಿಕ್ಸರ್‌ಗಟ್ಟಲು ನಿರ್ಧರಿಸಿದ್ದರಂತೆ. ಅದರಂತೆ ಮೊದಲ ಮೂರು ಎಸೆತಗಳನ್ನು ಅವರು ಸಿಕ್ಸರ್​ ಗೆರೆ ದಾಟಿಸಿದ್ದಾರೆ. ಆದರೆ 4ನೇ ಎಸೆತವನ್ನು ಸಿಕ್ಸರ್​​ಗೆತ್ತಲು ಮುಂದಾದಾಗ ಅದು ಮಿಸ್​ ಆಗಿದೆ. ಈ ವೇಳೆ ಸಿಂಗಲ್​ ರನ್​ ತೆಗೆದುಕೊಳ್ಳಲು ರೋಹಿತ್​ ಶರ್ಮಾ ನಿರ್ಧರಿಸಿ, ಮುಂದಿನ ಎರಡು ಎಸೆತಗಳಲ್ಲಿ 2+1 ರನ್​ ಕಬಳಿಸಿದ್ರು. ​​

ಬಾಂಗ್ಲಾ ಬೌಲರ್​ ಮೊಸಡಕ್​ ಓವರ್​​ನಲ್ಲಿ​ ಹ್ಯಾಟ್ರಿಕ್​ ಸಿಕ್ಸರ್​ ಸಿಡಿಸಿ ಮಿಂಚಿರುವ ರೋಹಿತ್​ 43 ಎಸೆತಗಳಲ್ಲಿ 85 ರನ್​ಗಳಿಸಿದರು. ಇದರಲ್ಲಿ ಭರ್ಜರಿ 6 ಸಿಕ್ಸರ್ ಹಾಗೂ 6 ಬೌಂಡರಿ ಒಳಗೊಂಡಿದ್ದವು. ಈ ಮೂಲಕ ಭಾರತೀಯ ನಾಯಕನೊಬ್ಬ ಟಿ-20 ಪಂದ್ಯಗಳಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಸೃಷ್ಠಿಸಿದ್ದು ನಾಯಕನಾಗಿ 17 ಇನಿಂಗ್ಸ್​​ ಮೂಲಕ ಅವರು 37 ಸಿಕ್ಸರ್ ಬಾರಿಸಿದ್ರು. ಇದರ ಜತೆಗೆ 2019ರ ಸಾಲಿನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆಯನ್ನೂ ತನ್ನ ಹೆಸರಿಗೆ ಬರೆಸಿಕೊಂಡರು.

Intro:Body:

ಆರು ಎಸೆತಗಳಲ್ಲಿ ಆರು ಸಿಕ್ಸ್​​​​​ ಸಿಡಿಸಲು ನಿರ್ಧರಿಸಿದ್ದ ರೋಹಿತ್​​​​​... ತಕ್ಷಣವೇ​ ಬದಲಾವಣೆ ಮಾಡಿಕೊಂಡಿದ್ದೇಕೆ!? 

ರಾಜ್​ಕೋಟ್​​: ಪ್ರವಾಸಿ ಬಾಂಗ್ಲಾದೇಶದ ವಿರುದ್ಧ ನಿನ್ನೆ ರಾಜ್​ಕೋಟ್​​ನ ಸೌರಾಷ್ಟ್ರ ಮೈದಾನದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 8ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡಿಕೊಂಡಿದ್ದು, ಅಬ್ಬರಿಸಿರುವ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ 43 ಎಸೆತಗಳಲ್ಲಿ 83ರನ್​ ಸಿಡಿಸಿ ಮಿಂಚಿದರು. 

ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಕಹಿಯಲ್ಲಿ ಮೈದಾನಕ್ಕಿಳಿದಿದ್ದ ಟೀಂ ಇಂಡಿಯಾ ತಂಡಕ್ಕೆ ಗೆಲುವು ಅನಿವಾರ್ಯವಾಗಿತ್ತು. ಈ ವೇಳೆ ಬ್ಯಾಟಿಂಗ್​ ಮಾಡಲು ಇಳಿದ ರೋಹಿತ್​ ಶರ್ಮಾ ಬಾಂಗ್ಲಾ ಬೌಲರ್​ಗಳ ಮೇಲೆ ಸವಾರಿ ನಡೆಸಿ, ಮೈದಾನದ ಮೂಲೆ ಮೂಲೆಗಳಿಗೂ ಬೌಂಡರಿ-ಸಿಕ್ಸರ್​ ಸುರಿಮಳೆಗೈದರು. 

ಈ ವೇಳೆ ಬಾಂಗ್ಲಾ ಸ್ಪಿನ್​ ಬೌಲರ್​ ಮೊಸಡಕ್​ ಹುಸೇನ್ ಎಸೆದ 10ನೇ ಓವರ್​ನಲ್ಲಿ ರೋಹಿತ್​ ಶರ್ಮಾ ಎಲ್ಲ ಎಸೆತ ಸಿಕ್ಸರ್​ ಅಟ್ಟಲು ನಿರ್ಧರಿಸಿದ್ದರಂತೆ. ಅದರಂತೆ ಮೊದಲ ಮೂರು ಎಸೆತಗಳನ್ನ ಅವರು ಸಿಕ್ಸರ್​ ಗೆರೆ ದಾಟಿಸಿದ್ದಾರೆ. ಆದರೆ ನಾಲ್ಕನೇ ಎಸೆತವನ್ನ ಸಿಕ್ಸರ್​​ಗೆ ಅಟ್ಟಲು ಮುಂದಾದಾಗ ಅದು ಮಿಸ್​ ಆಗಿದೆ. ಈ ವೇಳೆ ಸಿಂಗಲ್​ ರನ್​ ತೆಗೆದುಕೊಳ್ಳಲು ರೋಹಿತ್​ ಶರ್ಮಾ ನಿರ್ಧರಿಸಿ, ಮುಂದಿನ ಎರಡು ಎಸೆತಗಳಲ್ಲಿ 2+1 ರನ್​ ತೆಗೆದುಕೊಳ್ಳಲಾಗುತ್ತದೆ.  ​​ 

ವೇಗ ನೀಡಿದ ರೋಹಿತ್ ಬಾಂಗ್ಲಾ ಬೌಲರ್​ ಮೊಸಡಕ್​ ಓವರ್​​ನಲ್ಲಿ​ ಹ್ಯಾಟ್ರಿಕ್​ ಸಿಕ್ಸರ್​ ಸಿಡಿಸಿ ಮಿಂಚಿರುವ ರೋಹಿತ್​ 43 ಎಸೆತಗಳಲ್ಲಿ 85 ರನ್​ಗಳಿಸಿದರು. ಇದರಲ್ಲಿ ಭರ್ಜರಿ 6 ಸಿಕ್ಸರ್ ಹಾಗೂ ಆರು ಬೌಂಡರಿ ಇದ್ದವು. ಈ ಮೂಲಕ ಭಾರತೀಯ ನಾಯಕನೊಬ್ಬ ಟಿ-20 ಪಂದ್ಯಗಳಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಸಹ ಅವರು ಮಾಡಿದ್ದು, ನಾಯಕನಾಗಿ 17 ಇನಿಂಗ್ಸ್​​ಗಳಿಂದ ರೋಹಿತ್ 37 ಸಿಕ್ಸರ್ ಸಿಡಿಸಿದ್ದಾರೆ. ಇದರ ಜತೆಗೆ 2019ರ ಸಾಲಿನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆ ಮಾಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.