ಮುಂಬೈ: ವೃತ್ತಿ ಜೀವನದ ಆರಂಭದ ವೇಳೆ ರನ್ಗಳಿಸದೆ ಪರಾದಾಡುತ್ತಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ, ಧೋನಿ ನೆರವಿನಿಂದ ಆರಂಭಿಕನಾಗಿ ಬಡ್ತಿ ಪಡೆದು ಕ್ರಿಕೆಟ್ ಜಗತ್ತಿನಲ್ಲೇ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಮಿಂಚುತ್ತಿದ್ದಾರೆ. ಆದ್ರೆ ಧೋನಿ ಮಾತು ಕೇಳಿದ್ರೆ ನಾನು 2013ರಲ್ಲಿ ಸಿಡಿಸಿದ ಚೊಚ್ಚಲ ದ್ವಿಶತಕ ಸಿಡಿಸಲು ಆಗುತ್ತಿರಲಿಲ್ಲ ಎಂದು ರೋಹಿತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ರವಿಚಂದ್ರನ್ ಅಶ್ವಿನ್ ಜೊತೆ ನಡೆಸಿದ ಇನ್ಸ್ಟಾಗ್ರಾಮ್ ಲೈವ್ ಸಂವಾದದಲ್ಲಿ ರೋಹಿತ್ ತಮ್ಮ ಚೊಚ್ಚಲ ದ್ವಿಶತಕ ಮೂಡಿಬಂದ ಸ್ಮರಣೀಯ ಇನ್ನಿಂಗ್ಸ್ ಬಗ್ಗೆ ಹಂಚಿಕೊಂಡಿದ್ದಾರೆ.
2013 ರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ರೋಹಿತ್ ದ್ವಿಶತಕ ಸಿಡಿಸಿದ್ದರು. ಈ ವೇಳೆ ರೋಹಿತ್ ಆರಂಭಿಕ ಧವನ್(60) ಜೊತೆ ಸೇರಿ 112 ರನ್ಗಳ ಜೊತೆಯಾಟ ನಡೆಸಿದ್ದರು, ನಂತರ ಮತ್ತೆ ರೈನಾ ಜೊತೆಗೆ 73 ರನ್ಗಳ ಜೊತೆಯಾಟ ನಡೆಸಿದ್ದರು. ರೈನಾ( ಮತ್ತು ಯುವಿ(12)ಔಟಾದ ನಂತರ ಧೋನಿ ಕ್ರೀಸ್ಗೆ ಆಗಮಿಸಿದ್ದರು. ಶತಕದ ಗಡಿ ದಾಟಿದ ಬಳಿಕ ಧೋನಿ, ರೋಹಿತ್ಗೆ ಅಬ್ಬರ ಬ್ಯಾಟಿಂಗ್ ಮುಂದಾಗ ಬೇಡ ಎಂದಿದ್ದರಂತೆ. ಆದರೆ ಧೋನಿ ಮಾತನ್ನು ಕೇಳದೆ ನನ್ನಾಟ ಆಡಿದ್ದಕ್ಕೆ ದ್ವಿಶತಕ ಬಾರಿಸಿದೆ ಎಂದು ರೋಹಿತ್ ಹೇಳಿದ್ದಾರೆ.
‘ನೀನು ಸೆಟ್ ಬ್ಯಾಟ್ಸ್ಮನ್, 47,48,49ನೇ ಓವರ್ವರೆಗೂ ಬ್ಯಾಟಿಂಗ್ ನಡೆಸಬೇಕು. ಏಕೆಂದರೆ ನೀನು ಬೇಕಾದ ಕಡೆ ರನ್ ತಗೆಯಬಹುದು, ಈಗ ಸಿಂಗಲ್ಸ್, ಡಬಲ್ಸ್ ಕಡೆಗೆ ಗಮನ ನೀಡು, ನಾನು ಬೌಂಡರಿ-ಸಿಕ್ಸರ್ಗೆ ಮುಂದಾಗುವೆ ಎಂದು ಧೋನಿ ಹೇಳುತ್ತಲೇ ಇದ್ದರು. ಆದರೆ ನಾನು ಧೋನಿ ಮಾತನ್ನು ಕೇಳುತ್ತಲೇ ಇದ್ದೆ, ಅದೇ ರೀತಿ ನನ್ನ ಆಟವನ್ನು ಮುಂದುವರಿಸಿದೆ. ಸ್ಪಿನ್ನರ್ ಡೊಹೆರ್ಟಿ ಓವರ್ನಲ್ಲಿ 4 ಸಿಕ್ಸರ್ ಸಹಿತ 30 ರನ್ಗಳಿಸಿದ್ದರಿಂದ ದ್ವಿಶತಕ ಸಿಡಿಸಲು ಸಾಧ್ಯವಾಯಿತು.’
ಒಂದು ವೇಳೆ ಧೋನಿ ಮಾತನ್ನು ಕೇಳಿದ್ದರೆ ಅಂದು ನಾನು ದ್ವಿಶತಕದ ಸನಿಹವೂ ಬರುತ್ತಿರಲಿಲ್ಲ ಎಂದು ಏಕದಿನ ಕ್ರಿಕೆಟ್ನಲ್ಲಿ 3 ದ್ವಿಶತಕ ಸಿಡಿಸಿರುವ ರೋಹಿತ್ 7 ವರ್ಷಗಳ ಹಿಂದಿನ ಘಟನೆಯನ್ನು ಸ್ಮರಿಸಿದ್ದಾರೆ.
ರೋಹಿತ್(209) ದ್ವಿಶತಕ ಹಾಗೂ ಧವನ್ ಮತ್ತು ಧೋನಿ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ 383 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಆಸ್ಟ್ರೇಲಿಯಾ 326 ರನ್ಗಳಿಸಷ್ಟೇ ಶಕ್ತವಾಗಿ 57 ರನ್ಗಳ ಸೋಲುಕಂಡಿತ್ತು. ರೋಹಿತ್ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.