ETV Bharat / sports

'ನಾನು ಧೋನಿಯ ದೊಡ್ಡ ಅಭಿಮಾನಿ, ಅವರ ಆಟ ನೋಡಲು ಕಾಯುತ್ತಿದ್ದೇನೆ'

ಒಬ್ಬ ಕಮೆಂಟೇಟರ್​ ಹಾಗೂ ಕ್ರಿಕೆಟ್​ ತಜ್ಞನಾಗಿ ಧೋನಿ ಆಟವನ್ನು ತೀರಾ ಹತ್ತಿರದಿಂದ ಗಮನಿಸಿರುವ ಡೀನ್​ ಜೋನ್ಸ್​ ಯುಎಇನಲ್ಲಿ ಧೋನಿ ಮತ್ತೆ ಕ್ರಿಕೆಟ್​ಗೆ ಮರಳುತ್ತಿರುವುದನ್ನು ನೋಡಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.

ಎಂಎಸ್​ ಧೋನಿ
ಎಂಎಸ್​ ಧೋನಿ
author img

By

Published : Aug 5, 2020, 7:08 PM IST

ನವದೆಹಲಿ: ನಾನು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯವರ ದೊಡ್ಡ ಅಭಿಮಾನಿ. ಅವರು ದೀರ್ಘ ಸಮಯದ ನಂತರ ಕ್ರಿಕೆಟ್ ಮೈದಾನಕ್ಕೆ ಇಳಿಯುವುದನ್ನು ನೋಡಲು ಕಾತರದಿಂದ ಕಾಯುತ್ತಿರುವುದಾಗಿ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಹಾಗೂ ಕಮೆಂಟೇಟರ್​ ಡೀನ್ ಜೋನ್ಸ್​ ತಿಳಿಸಿದ್ದಾರೆ.

"ಧೋನಿಗೆ ಈ ಸಲದ ಐಪಿಎಲ್ ದೊಡ್ಡ ಅವಕಾಶ. ಅವರು​ ಅದನ್ನು ತಿಳಿದುಕೊಂಡು ತಮ್ಮನ್ನು ತಾವು ಸಂಪೂರ್ಣವಾಗಿ ಸಿದ್ಧಪಡಿಸಿಕೊಳ್ಳಬೇಕು. ಈ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಅವರು ಉತ್ತಮವಾಗಿ ಆಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಖಾಸಗಿ ವೆಬ್​ಸೈಟ್ಸ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಜೊತೆಗೆ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದೇ ಆದಲ್ಲಿ ಅವರು ಮುಂದಿನ ವಿಶ್ವಕಪ್‌ನತ್ತ ಚಿತ್ತ ಹರಿಸಬಹುದೆಂದು ತಿಳಿಸಿದ್ದಾರೆ.

ಧೋನಿ ಒಬ್ಬ ನಾಯಕ ಹಾಗೂ ಬ್ಯಾಟ್ಸ್​ಮನ್​ ಆಗಿ ವೀಕ್ಷಕರನ್ನು ಸೆಳೆಯುವ ಗುಣ ವಿಶೇಷವಾದದ್ದು. ಅವರ ಆಟವನ್ನು ನೋಡಿ ಸ್ವತಃ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿ ಮಟ್ಟದಲ್ಲಿರುವವರೇ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು 2006ರ ಪಾಕಿಸ್ತಾನದ ಘಟನೆಯನ್ನು ವಿವರಿಸಿದ್ದಾರೆ.

ಭಾರತ 2006ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ವೇಳೆ ಡೀನ್​ ಜೋನ್ಸ್​ ಕಮೆಂಟೇಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಪಾಕ್‌ ಅಧ್ಯಕ್ಷರಾಗಿದ್ದ ಫರ್ವೇಜ್​ ಮುಷರಫ್​ ಧೋನಿಯ ಹೇರ್​ಸ್ಟೈಲ್​ ಬಗ್ಗೆ ಗುಣಗಾನ ಮಾಡಿದ್ದರು. ತಮ್ಮ ಕೂದಲಿನ ಶೈಲಿಯನ್ನು ಹಾಗೆಯೇ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಈ ಘಟನೆಯನ್ನು ಜೋನ್ಸ್​ ನೆನಪಿಸಿಕೊಂಡು, ಧೋನಿ ಎಲ್ಲರನ್ನು ಸೆಳೆಯುವ ವ್ಯಕ್ತಿತ್ವ ಹೊಂದಿರುವ ಆಟಗಾರ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.