ಲಾಹೋರ್: ಕಳೆದ ವಾರ ಕೊರೊನಾ ದೃಢಪಟ್ಟಿರುವ ವಿಚಾರವನ್ನು ಟ್ವಿಟರ್ನಲ್ಲಿ ಘೋಷಣೆ ಮಾಡಿಕೊಂಡಿದ್ದ ಮಾಜಿ ಪಾಕಿಸ್ತಾನ ಆಲ್ರೌಂಡರ್ ಶಾಹಿದ್ ಅಫ್ರಿದಿ ತಾವು ಆರೋಗ್ಯದಿಂದ ಇದ್ದೇನೆ ಎಂದು ಹೇಳುವ ಮೂಲಕ ತಮ್ಮ ಆರೋಗದ ವಿಚಾರವಾಗಿ ಕೇಳಿ ಬರುತ್ತಿದ್ದ ವದಂತಿಗೆ ತೆರೆ ಎಳೆದಿದ್ದಾರೆ.
ಫೆಸ್ಬುಕ್ ಲೈವ್ನಲ್ಲಿ ವಿಡಿಯೋ ಮಾಡಿರುವ ಶಾಹಿದ್ ಅಫ್ರಿದಿ, ‘ಕಳೆದ ಕೆಲವು ದಿನಗಳಿಂದ ನನ್ನ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಸಾಕಷ್ಟು ರೀತಿಯಲ್ಲಿ ಕೇಳುತ್ತಿದ್ದೇನೆ. ಆದರೆ ಮೊದಲೆರಡು ದಿನ ನನಗೆ ನಿಜವಾಗಿಯೂ ಕಠಿಣವಾಗಿತ್ತು. ಆದರೆ ನಂತರ ನನ್ನ ಆರೋಗ್ಯ ಸ್ಥಿತಿ ಸುಧಾರಿಸಿದೆ ’ಎಂದು ಹೇಳಿದ್ದಾರೆ.
ಆದರೆ, ನನ್ನ ಮಕ್ಕಳನ್ನು ನೋಡಿಕೊಳ್ಳಲು ಮತ್ತು ತಬ್ಬಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದು ನನಗೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಈ ಸಂದರ್ಭದಲ್ಲಿ ನನ್ನ ಮಕ್ಕಳ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದೇನೆ. ಆದರೆ, ಇಂತಹ ಸಂದರ್ಭದಲ್ಲಿ ನನ್ನ ಸುತ್ತ ಮುತ್ತಲೂ ಇರುವ ಇತರರನ್ನು ಸುರಕ್ಷಿತವಾಗಿರಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಅಂತರ ಕಾಯ್ದುಕೊಳ್ಲುವುದು ಬಹಳ ಮುಖ್ಯ’ ಎಂದಿದ್ದಾರೆ.
ಈ ಬಗ್ಗೆ ಭಯಪಡುವ ಆಗತ್ಯವಿಲ್ಲ. ಈ ಸಮಯದಲ್ಲಿ ನೀವು ಕಾಯಿಲೆ ವಿರುದ್ಧ ಹೋರಾಡಬೇಡಿ ಅದನ್ನು ನೀವು ಸೋಲಿಸಲು ಸಾಧ್ಯವಿಲ್ಲ ಎಂದಿರುವ ಅವರು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವಂತೆ ಜನರನ್ನು ಒತ್ತಾಯಿಸಿದ್ದಾರೆ.
"ನಾನು ಚಾರಿಟಿ ಕೆಲಸಕ್ಕಾಗಿ ಸಾಕಷ್ಟು ಪ್ರಯಾಣಿಸುತ್ತಿದ್ದರಿಂದ ಕೋವಿಡ್-19 ಸೋಂಕಿಗೆ ತುತ್ತಾಗುತ್ತೇನೆ ಎಂದು ನನಗೆ ತಿಳಿದಿತ್ತು. ಅದೃಷ್ಟವಶಾತ್, ಅದು ತಡವಾಗಿ ಸಂಭವಿಸಿದೆ. ಇಲ್ಲದಿದ್ದರೆ ಬಹಳಷ್ಟು ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ" ಎಂದು ಹೇಳಿದ್ದಾರೆ.
ತಾವು ಗುಣಮುಖರಾಗಲೆಂದು ಪಾಕಿಸ್ತಾನ ಮತ್ತು ಪಾಕಿಸ್ತಾನದ ಹೊರಗೆ ಪ್ರಾರ್ಥಿಸುತ್ತಿರುವ ಅಭಿಮಾನಿಗಳಿಗೆ ಧನ್ಯವಾದಗಳು, ಕೋವಿಡ್ನಿಂದ ಸಂಕಷ್ಟಕ್ಕೊಳಗಾಗಿರುವ ಬಡ ಜನರಿಗೆ ನಿಮ್ಮಿಂದಾಗುವ ಸಹಾಯ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.