ETV Bharat / sports

ತಾನೇ ನಂ.1 ಬ್ಯಾಟ್ಸ್‌ಮನ್‌, ಆದ್ರೂ ವಿರಾಟ್‌ ಕೊಹ್ಲಿ ಅಂದ್ರೇ ಈ ಕಾಂಗ್ರೂ ಕಲಿಗೆ ಬಲು ಮೆಚ್ಚುಗೆ!! - ಐತಿಹಾಸಿಕ ಟೆಸ್ಟ್ ಸರಣಿ

ನಾನು ಅವರ ಬಗ್ಗೆ ಮೆಚ್ಚುವ ಇನ್ನೊಂದು ವಿಷಯವೆಂದರೆ ಅದು ಅವರ ಟೆಸ್ಟ್ ಕ್ರಿಕೆಟ್​ನಲ್ಲಿ ಚೇಸಿಂಗ್ ಮಾಡುವ ರೀತಿ. ಹಾಗೂ ಏಕದಿನ ಕ್ರಿಕಟ್​​ನ ಗೆಲುವಿನ ಚೇಸಿಂಗ್​​ ಸರಾಸರಿ ನೋಡಿದರೆ ಅಚ್ಚರಿಯಾಗುತ್ತದೆ ಎಂದಿದ್ದಾರೆ. ಈ ಇಬ್ಬರು ಕ್ರಿಕೆಟ್​ ದಿಗ್ಗಜರು ಈ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಎದುರಾಗಲಿದ್ದಾರೆ.

'I admire Virat a lot, he is an amazing player': Steve Smith
ನಾನು ವಿರಾಟ್​ ಕೊಹ್ಲಿಯನ್ನು ಹೆಚ್ಚು ಮೆಚ್ಚಿಕೊಳ್ಳುತ್ತೇನೆ: ನಂಬರ್ ಒನ್ ಬ್ಯಾಟ್ಸ್​​​ಮನ್​ ಸ್ಮಿತ್​​​​ ಹೀಗಂದಿದ್ಯಾಕೆ..?
author img

By

Published : Jun 1, 2020, 10:47 PM IST

ಹೈದರಾಬಾದ್ : ವಿಶ್ವದ ನಂಬರ್ ಒನ್ ಟೆಸ್ಟ್ ಬ್ಯಾಟ್ಸ್‌ಮನ್ ಮತ್ತು ಆಸೀಸ್‌ ಮಾಜಿ ನಾಯಕ ಸ್ಟೀವ್ ಸ್ಮಿತ್ ಭಾರತದ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. ಅವರ ಟೆಸ್ಟ್ ಕ್ರಿಕೆಟ್​ನ ಅಂಕಿ-ಅಂಶಗಳು ನಂಬಲಸಾಧ್ಯ ಎಂದು ಹಾಡಿ ಹೊಗಳಿದ್ದಾರೆ. ಫೇಸ್‌ಬುಕ್‌ನ ಲೈವ್ ವಿಡಿಯೋ ಸೆಷನ್‌ನಲ್ಲಿ ಮಾತನಾಡಿದ ಸ್ಮಿತ್, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಬಗ್ಗೆಯೂ ಒಂದಿಷ್ಟು ಹೇಳಿಕೊಂಡಿದ್ದಾರೆ.

ವಿಶೇಷ ಎಂದರೆ ಸ್ಮಿತ್​ ಹಾಗೂ ನಾಯಕ ಕೊಹ್ಲಿ ಪ್ರಸ್ತುತ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಕೊಹ್ಲಿಯು ಕ್ರಿಕೆಟ್​​ನಲ್ಲಿ ತಮ್ಮನ್ನು ಸುಧಾರಿಸಿಕೊಳ್ಳಲು ಬಯಸುತ್ತಾರೆ ಹಾಗೂ ಕ್ರಿಕೆಟ್​ ಬಗೆಗಿನ ಅವರ ಉತ್ಸಾಹವು ಭಾರತದ ಕ್ರಿಕೆಟ್‌ನ ಇನ್ನಷ್ಟು ಉತ್ತಮಗೊಳಿಸಿದೆ ಎಂದಿದ್ದಾರೆ.

ಅಲ್ಲದೆ ನಾನು ವಿರಾಟ್​ ಕೊಹ್ಲಿಯನ್ನು ತುಂಬಾ ಇಷ್ಟಪಡುತ್ತೇನೆ. ಅವರೊಬ್ಬ ಅದ್ಭುತ ಆಟಗಾರ. ನೀವೇ ಈಗ ಅವರ ದಾಖಲೆಗಳನ್ನು ನೋಡುತ್ತಿದ್ದೀರಿ. ಅಲ್ಲದೆ ನೀವು ಸಹ ಅವರ ಆಟವನ್ನು ನೋಡುತ್ತಿದ್ದೀರಿ ಎಂದು ವಿಡಿಯೋದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆತ ಯಾವಾಗಲು ತನ್ನನ್ನು ಸುಧಾರಿಸಿಕೊಳ್ಳಲು ಇಚ್ಛಿಸುತ್ತಾನೆ. ಆತನ ದೇಹವೂ ಕೂಡ ಯಾವಾಗಲೂ ಫಿಟ್​​ ಆಗಿರುತ್ತದೆ ಎಂದಿದ್ದಾರೆ.

ನಾನು ಅವರ ಬಗ್ಗೆ ಮೆಚ್ಚುವ ಇನ್ನೊಂದು ವಿಷಯವೆಂದರೆ ಅದು ಅವರ ಟೆಸ್ಟ್ ಕ್ರಿಕೆಟ್​ನಲ್ಲಿ ಚೇಸಿಂಗ್ ಮಾಡುವ ರೀತಿ. ಹಾಗೂ ಏಕದಿನ ಕ್ರಿಕಟ್​​ನ ಗೆಲುವಿನ ಚೇಸಿಂಗ್​​ ಸರಾಸರಿ ನೋಡಿದರೆ ಅಚ್ಚರಿಯಾಗುತ್ತದೆ ಎಂದಿದ್ದಾರೆ. ಈ ಇಬ್ಬರು ಕ್ರಿಕೆಟ್​ ದಿಗ್ಗಜರು ಈ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಎದುರಾಗಲಿದ್ದಾರೆ. ನಾಲ್ಕು ಸರಣಿಯ ಟೆಸ್ಟ್​ನಲ್ಲಿ ಭಾರತ-ಆಸ್ಟ್ರೇಲಿಯಾ ಸೆಣಸಾಡಲಿದ್ದು, ಡಿಸೆಂಬರ್​ 3ರಿಂದ ಪಂದ್ಯ ಆರಂಭಗೊಳ್ಳಲಿದೆ.

ಇದಲ್ಲದೆ ಭಾರತ ಈಗ ಎಲ್ಲಾ ಫಾರ್ಮ್ಯಾಟ್​​ನಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದೆ. ಟೆಸ್ಟ್ ಸರಣಿಯಲ್ಲಿ ಕಠಿಣ ಸವಾಲು ನೀಡಲಿದೆ ಎಂದು ಸ್ಮಿತ್ ಅಭಿಪ್ರಾಯಪಟ್ಟರು. ಇದಲ್ಲದೆ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಐತಿಹಾಸಿಕ ಸರಣಿ ತನ್ನದಾಗಿಸಿಕೊಂಡಿತ್ತು. ಆದರೆ, ಈ ವೇಳೆ ಸ್ಮಿತ್​ ಹಾಗೂ ಡೇವಿಡ್​ ವಾರ್ನರ್ ತಂಡದಿಂದ ಹೊರಗುಳಿದಿದ್ದರು. ಭಾರತ ತಂಡ ಬಲಿಷ್ಠ ಬ್ಯಾಟಿಂಗ್​​ ಬಲ ಹೊಂದಿದೆ. ಪೂಜಾರ ಹಾಗೂ ವಿರಾಟ್​​ ಇಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇವರ ಜೊತೆ ರಹಾನೆ ಟೆಸ್ಟ್​ನ ಅತ್ಯುತ್ತಮ ಆಟಗಾರ, ಇವರಲ್ಲದೆ ಕೆ ಎಲ್​ ರಾಹುಲ್​, ರೋಹಿತ್​​ ಸಹ ತಂಡದಲ್ಲಿದ್ದರೆ ಅವರು ಎಲ್ಲ ಕಡೆಯಿಂದಲೂ ಬಲಿಷ್ಠರಾಗುತ್ತಾರೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.